More

    ಪಾರ್ಕಿಂಗ್ ಸಮಸ್ಯೆಗೆ ಸಿಗುತ್ತಾ ಪರಿಹಾರ?

    ಬೆಳಗಾವಿ: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಳಗಾವಿ ನಗರದ ಪ್ರದೇಶದಲ್ಲಿ ಪಾರ್ಕಿಂಗ್ ಸಮಸ್ಯೆಯೂ ಹೆಚ್ಚುತ್ತಲಿದೆ. ಅಗತ್ಯ ಕ್ರಮ ಜರುಗಿಸಬೇಕಿದ್ದ ಮಹಾನಗರ ಪಾಲಿಕೆಯು ನಗರ ಸೇವಕರು ಆಯ್ಕೆಯಾದರೂ ರಾಜಕೀಯ ಮೇಲಾಟಕ್ಕೆ ಸೀಮಿತಗೊಂಡಿದ್ದು, ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಂದಾದರೂ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗಲಿದೆಯೇ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ.

    ಖಡೇಬಜಾರ್, ಸಮಾದೇವಿ ಗಲ್ಲಿ, ಮಾರುತಿ ಗಲ್ಲಿ, ಪಾಂಗೂಳ ಗಲ್ಲಿ, ರಾಮಲಿಂಗಕಿಂಡ್ ಗಲ್ಲಿ, ರಿಸಾಲ್ದಾರ್ ಗಲ್ಲಿ ಹಾಗೂ ಶಹಾಪುರ ಒಳಗೊಂಡಂತೆ ಮಾರುಕಟ್ಟೆ ಪ್ರದೇಶಗಳಲ್ಲಿ ಬಹುತೇಕ ಎಲ್ಲ ಮಳಿಗೆಗಳ ಮಾಲೀಕರು ನೆಲಮಹಡಿ ಪಾರ್ಕಿಂಗ್‌ಗೆ ಮೀಸಲಿಟ್ಟಿಲ್ಲ. ನಿಯಮ ಉಲ್ಲಂಸಿ ಅದನ್ನೂ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮಾರುಕಟ್ಟೆಗೆ ಆಗಮಿಸುವ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಸ್ಥಳವೇ ಸಿಗದ ಪರಿಸ್ಥಿತಿ ಎದುರಾಗಿದ್ದೂ, ದಿನವೂ ಗಂಟೆಗಟ್ಟಲೇ ವಾಹನದಟ್ಟಣೆ ಉಂಟಾಗುತ್ತಿದೆ.

    ವಾಹನದಟ್ಟಣೆ ತಪ್ಪಿಸುವುದಕ್ಕಾಗಿ ಒನ್ ವೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಒಂದೊಂದು ದಿನ ಒಂದೆಡೆ ನಿಲುಗಡೆಗೆ ಅವಕಾಶ ನೀಡಲಾಗಿದೆ. ಆದರೆ, ಬಹುತೇಕ ಮಳಿಗೆಗಳಲ್ಲಿ ಪಾರ್ಕಿಂಗ್ ಸೌಲಭ್ಯಗಳೇ ಇಲ್ಲ. ಸಾರ್ವಜನಿಕರ ವಾಹನಗಳಿಗಾಗಿ ಮಾಡಿದ ಜಾಗದಲ್ಲಿಯೇ ಮಳಿಗೆಗಳ ಮಾಲೀಕರು ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ಆಗಮಿಸುವ ಜನರ ವಾಹನಗಳ ನಿಲುಗಡೆಗೆ ಅವಕಾಶವೇ ಇಲ್ಲದಂತಾಗಿದೆ.

    ನಿಯಮಬಾಹಿರವಾಗಿ ಪಾರ್ಕಿಂಗ್ ಸ್ಥಳದಲ್ಲಿ ವ್ಯಾಪಾರ- ವಹಿವಾಟು ಮಾಡುತ್ತಿರುವ ಮಳಿಗೆಗಳ ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ ಏಕೆ ಎಂದು ಜನಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಗರದ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಒದಗಿಸಲಿ, ಅದನ್ನು ಬಿಟ್ಟು ಸ್ಮಾರ್ಟ್ ಸಿಟಿಯ ಪಾರ್ಕಿಂಗ್ ರೆನ್ ನಿರ್ಮಾಣದ ಹಗಲು ನಕ್ಷತ್ರ ತೋರಿಸುವುದುನ್ನು ನಿಲ್ಲಿಸಲಿ ಎನ್ನುತ್ತಾರೆ ಸಮಾಜ ಸೇವಕ ಗಜಾನನ ಹಿರೇಮಠ.

    ನಗರದ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಪಾರ್ಕಿಂಗ್ ಸೌಲಭ್ಯವಿಲ್ಲದೆ ಕಟ್ಟಡದಲ್ಲಿ ವಾಣಿಜ್ಯ ಮಳಿಗೆ ನಡೆಸುತ್ತಿರುವ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಮಳಿಗೆಗಳ ಮಾಲೀಕರಿಗೂ ನೋಟಿಸ್ ನೀಡಿ ಕ್ರಮವಹಿಸಲಾಗುವುದು.
    | ರುದ್ರೇಶ ಘಾಳಿ, ಆಯುಕ್ತ, ಮಹಾನಗರ ಪಾಲಿಕೆ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts