More

    ವ್ಯಕ್ತಿತ್ವದ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಸಹಕಾರಿ

    ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಮೊದಲ ಹಂತದ ಪಠ್ಯೇತರ ಚಟುವಟಿಕೆಗಳಿದ್ದ ಈ ಕಾರ‌್ಯ ಕ್ರಮ ಒಂದರಿಂದ 10ನೇ ತರಗತಿಗಳ ವಿದ್ಯಾರ್ಥಿಗಳ ವೈವಿಧ್ಯಮಯ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಯಿತು.

    1-2ನೇ ತರಗತಿ ವಿದ್ಯಾ ರ್ಥಿಗಳಿಗೆ ವೆಜಿಟೆ ಬಲ್‌ಪ್ರೆಸ್‌ವರ್ಕ್,3-4ನೇ ತರಗತಿ ಒರಿಗಾಮಿ,5-6ನೇ ತರಗತಿ ಪೇಪರ್‌ಆರ್ಟ್,7-8ನೇ ತರಗತಿ ಮಾರ್ಬ ಲ್‌ಗೋಲಿ ಹಾಗೂ 9-10ನೇ ತರಗತಿ ವಿದ್ಯಾರ್ಥಿಗಳಿಗೆ ಕುಕ್‌ವಿಥ್‌ಹೌಟ್‌ಫೈರ್ ಸ್ಪರ್ಧೆಗಳು ನಡೆದವು.

    ಪ್ರಾಂಶುಪಾಲ ಎಂ.ಎಸ್.ಪ್ರಭಾಕರ್ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಇದಾಗಿದ್ದು,ಮಕ್ಕಳ ಸರ್ವತೋಮುಖ ಬೆಳ ವಣಿಗೆಗೆ ಇಂಥ ಪಠ್ಯೇತರ ಚಟುವಟಿಕೆಗಳು ನೆರವಾಗುತ್ತವೆ. ಈ ಕಾರ‌್ಯಕ್ರಮದಲ್ಲಿ ರೂಪಿಸಿದ್ದ ನಾನಾ ಚಟುವಟಿಕೆಗಳು ವಿದ್ಯಾರ್ಥಿಗಳ ಕಲಿಕೆಯಲ್ಲಿ ಮಹತ್ವದ ಪಾತ್ರದೊಂದಿಗೆ ಅವರ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.

    ಸಹಪಠ್ಯತರ ಚಟುವಟಿಕೆಗಳ ಸಂಚಾಲಕರಾದ ಸುನೀಲ್‌ಭಟ್ ಹಾಗೂ ಲುಬ್ನಾಕೌಸರ್ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts