More

    ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯ ಯಶಸ್ಸು ಉತ್ತಮ ಬದುಕಿಗೆ ದಾರಿ


    ಚಿತ್ರದುರ್ಗ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೂಡ ಸವಾಲಾಗಿ ಸ್ವೀಕರಿಸುವಂತೆ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ವಿದ್ಯಾ ರ್ಥಿಗಳಿಗೆ ಸಲಹೆ ನೀಡಿದರು.s
    ನಗರದ ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಎಸ್‌ಆರ್‌ಎಸ್ ಸಾಂಸ್ಕೃತಿಕ ಮಹಾ ಸಮ್ಮೇಳನ ಸಮಾ ರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀಟ್, ಜೆಇಇ, ಸಿಇಟಿ, ಸಿಎ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯ ಶ ಸ್ಸನ್ನು ಪಡೆದು ಉತ್ತಮ ಬದುಕನ್ನು ರೂಪಿಸಿಕೊಳ್ಳ ಬೇಕು.
    ನಮ್ಮ ಸಂಸ್ಥೆ ಪಠ್ಯಬೋಧನೆಗೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ವಿನಯ, ಶಿಸ್ತನ್ನು ರೂಢಿಸಲು ಪೂರಕ ಚಟುವಟಿಕೆಗಳನ್ನು ಏರ್ಪಡಿಸಿಕೊಂಡು ಬರುತ್ತಿದೆ, ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿದೆ ಎಂದರು.
    ಸಮಾರೋಪ ಭಾಷಣ ಮಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಆರ್.ಪುಟ್ಟಸ್ವಾಮಿ ಅವರು, ಪರೀಕ್ಷೆ ಬಗ್ಗೆ ವಿನಾ ಕಾರಣ ಆತಂಕ ಬೇಡ. ಪರೀಕ್ಷೆ ಎದುರಿಸಲು ಅಗತ್ಯ ತಯಾರಿಕೆಯೊಂದಿಗೆ ಸೃಜನಶೀಲ ಕಾರ‌್ಯಕ್ರಮಗಳಲ್ಲೂ ಭಾಗವಹಿಸುವುದು ಮುಖ್ಯವೆಂದು ವಿದ್ಯಾರ್ಥಿಗಳಿಗೆ ಸೂಚಿಸಿದರು.
    ಶೈಕ್ಷಣಿಕವಾಗಿ ಹಿಂದುಳಿದಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಲಿಂಗಾರೆಡ್ಡಿ ಅವರು, ಈ ಶಿಕ್ಷಣ ಸಂಸ್ಥೆ ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಸಂಸ್ಥೆಯ ಅಧಿಕ ಸಂಖ್ಯೆ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಇಂಜಿನಿಯರಿಂಗ್ ಪ್ರವೇಶ ದೊರೆಯುತ್ತಿ ರುವುದು ಹಾಗೂ ಎನ್‌ಇಇಟಿ, ಜೆಇಇ, ಸಿಇಟಿ, ಸಿಎ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುತ್ತಿರುವುದು ಸಂಸ್ಥೆ ಶ್ರಮವನ್ನು ಸಾರ್ಥಕಗೊಳಿಸುತ್ತಿದೆ ಎಂದು ಶ್ಲಾಘಿಸಿದರು. ಎಸ್‌ಆರ್‌ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಇ.ಗಂಗಾಧರ್ ಮಾತನಾಡಿದರು.
    ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ, ಬಿಕಾಂನಲ್ಲಿ ದಾವಣಗೆರೆ ವಿವಿ, ಎಂಕಾಂನಲ್ಲಿ ಮೈಸೂರು ವಿವಿ ಪ್ರಥಮ ರ‌್ಯಾಂಕ್ ಗ ಳೊಂದಿಗೆ ಬಂಗಾರದ ಪದಕ ಪಡೆದ, ಎಸ್‌ಆರ್‌ಎಸ್ ಕಾಲೇಜು ವಾಣಿಜ್ಯವಿಭಾಗದ ವಿದ್ಯಾರ್ಥಿನಿ ಸಿ.ಎಂ.ಚೈತನ್ಯಾ ಅವರನ್ನು ಸನ್ಮಾನಿಸ ಲಾಯಿತು. ಸಂಸ್ಥೆ ಉಪಾಧ್ಯಕ್ಷ ಬಿ.ಎಲ್.ಅಮೋಘ್, ಕಾರ‌್ಯದರ್ಶಿ ಸುಜಾತಲಿಂಗಾರೆಡ್ಡಿ, ಆಡಳಿತಾಧಿಕಾರಿಗಳಾದ ಡಾ.ಟಿ.ಎಸ್.ರವಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts