More

    ವೈವಿಧ್ಯ, ಕಲೆ, ವಾಸ್ತು ಶಿಲ್ಪಗಳ ಸಾಂಸ್ಕೃತಿಕ ಅಧ್ಯಯನ ಅವಶ್ಯ

    ಬಸವಕಲ್ಯಾಣ: ಕಲ್ಯಾಣದ ಕೋಟೆಯ ವೈವಿಧ್ಯ, ಕಲೆ ಮತ್ತು ವಾಸ್ತು ಶಿಲ್ಪಗಳ ಸಾಂಸ್ಕೃತಿಕ ಅಧ್ಯಯನ ನಿರಂತರ ನಡೆಯಬೇಕು. ರಾಷ್ಟ್ರಕೂಟರ ಕಾಲದ ಮೊರಖಂಡಿಯ ದೇವಾಲಯ, ಚಾಲುಕ್ಯರ ಕಾಲದ ನಾರಾಯಣಪುರ, ಉಮಾಪುರ ದೇವಾಲಯಗಳು ವಾಸ್ತುಶಿಲ್ಪ ರಚನೆಗಳಿಂದ ನಾಡಿನಲ್ಲೇ ಶ್ರೇಷ್ಠತೆಯನ್ನು ಪಡೆದಿವೆ. ಅವುಗಳ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದು ಕನರ್ಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೊ.ಅಬ್ದುಲ್ ಮಾಜಿದ್ ಮಣಿಯಾರ್ ಹೇಳಿದರು.

    ಸಿಯುಕೆ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗ ಹಾಗೂ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಕೋಟೆ ಪರಿಸರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವಕಲ್ಯಾಣ ಸಾಂಸ್ಕೃತಿಕ ಅಧ್ಯಯನದ ನೆಲೆಗಳು ಕುರಿತ ಒಂದು ದಿನದ ಕಮ್ಮಟ ಹಾಗೂ ಪ್ರತಿಷ್ಠಾನದ 64ನೇ ಸಮಾರಂಭಕ್ಕೆ ಶಿಬಿರಾಥರ್ಿಗಳಿಗೆ ಕೃತಿ ನೀಡುವ ಮೂಲಕ ಚಾಲನೆ ನೀಡಿ, ಚಾಲುಕ್ಯರ ರಾಜಧಾನಿಯಿಂದಲೂ ಬಸವಾದಿ ಶರಣರ ತತ್ವಜ್ಞಾನದಿಂದಲೂ ಕಲ್ಯಾಣ ಜಾಗತಿಕ ಮಾನ್ಯತೆ ಪಡೆದಿದೆ ಎಂದರು.

    ಬಸವಕಲ್ಯಾಣ, ಸೌಹಾರ್ದದ ನೆಲೆಗಳು ಕುರಿತು ಉಪನ್ಯಾಸಕ ಡಾ.ಭೀಮಾಶಂಕರ ಬಿರಾದಾರ್ ಮಾತನಾಡಿ, ಆಥರ್ಿಕ ದಾರಿಗಳು ಎಲ್ಲ ಸಾಮುದಾಯಿಕ ಅವಲಂಬನೆ ಹೊಂದಿವೆ. ವಚನಕಾರರು, ತತ್ವಪದಕಾರರು, ಸೂಫಿ ಸಿದ್ಧಾಂತಗಳು ರೂಪಿಸಿದ ಈ ನೆಲದ ಬೌದ್ಧಿಕ, ವೈಚಾರಿಕ ಮತ್ತು ಭಾವನಾತ್ಮಕ ತಾತ್ವಿಕತೆ ಅಂತರಂಗದ ಅರಿವಿನ ದಾರಿಗಳಾಗಿವೆ. ಬಸವಣ್ಣನವರ ಇವ ನಮ್ಮವ ಹಾಗೂ ಸಕಲ ಜೀವಾತ್ಮರಿಗೆ ಬಯಸುವ ಲೇಸಿನ ಸಿದ್ಧಾಂತ ಎಲ್ಲರ ಎದೆಯೊಳಗೆ ನೆಲೆಸಿದೆ ಎಂದರು.

    ಉಪನ್ಯಾಸಕ ರೇವಣಸಿದ್ದಪ್ಪ ದೊರೆಗಳು ಬಸವಕಲ್ಯಾಣ: ಸ್ಮಾರಕಗಳ ಅಧ್ಯಯನದ ನೆಲೆ ಕುರಿತು ಮಾತನಾಡಿ, ಕಾಯಕ, ದಾಸೋಹ ಅನುಭವ ಸಿದ್ಧಾಂತದ ಮೂಲಕ ಇಡೀ ನಾಡಿಗೆ ಹೊಸತೊಂದು ತತ್ವವನ್ನು ಶರಣರು ನೀಡಿದರು. ಕಲ್ಯಾಣವನ್ನು ಬಸವಕಲ್ಯಾಣವಾಗಿಸಿದ ಬಾಬಾಸಾಹೇಬ್ ವಾರದ ಅವರು ಸೊಲ್ಲಾಪುರದಿಂದ ಇಲ್ಲಿಗೆ ಬಂದು ಶರಣರ ಸ್ಮಾರಕಗಳನ್ನು ಗುರುತಿಸಿದರು ಎಂದು ತಿಳಿಸಿದರು.

    ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ನಿದರ್ೇಶಕ ಡಾ.ಶಿವಾಜಿ ಮೇತ್ರೆ, ಒಡಿಶಾದ ಪ್ರೇಮಜೀತ ಮೊಹಂತಿ, ಫರಾನತ್ ಕೆ, ನಿವೃತ್ತ ಶಿಕ್ಷಕಿ ಲಕ್ಷ್ಮೀಬಾಯಿ ಪಾಟೀಲ್ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೇದ, ಸ್ನೇಹಾ ಎಂ.ಎಲ್, ದೇವೆಂದ್ರಕುಮಾರ, ಪವನಕುಮಾರ, ರಿಫನಾ ರವುಫ್ ಅಲಿ, ಸಿಯುಕೆ ಇತಿಹಾಸದ ವಿಭಾಗದ ವಿದ್ಯಾಥರ್ಿಗಳು ಶಿಬಿರಾಥರ್ಿಗಳಾಗಿದ್ದರು.

    ಕೋಟೆ, ಶರಣರ ಸ್ಮಾರಕಗಳು, ನಾರಾಯಣಪುರ ಶಿವ ದೇವಾಲಯ, ಮೊರಖಂಡಿ ರಾಷ್ಟ್ರಕೂಟರ ಕಾಲದ ದೇವಾಲಯ ಕುರಿತು ಕ್ಷೇತ್ರಕಾರ್ಯ ನಡೆಸಿ ಅಧ್ಯಯನ ಮಾಡಲಾಯಿತು. ಸೌರಭ್ಬಾಬು ಯು. ಸ್ವಾಗತಿಸಿದರು. ಅಲ್ಮಾ ಜಾನ್ಸನ್, ಅಂಬರೀಶ ಭೀಮಾಣಿ ನಿರೂಪಣೆ ಮಾಡಿದರು. ಪವನಕುಮಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts