More

    ವೈದ್ಯಕೀಯ ಸಿಬ್ಬಂದಿ ಕಾರ್ಯ ಶ್ಲಾಘನೀಯ, ಸಚಿವ ಎಂಟಿಬಿ ನಾಗರಾಜ್ ಮೆಚ್ಚುಗೆ

    ಬೆಂಗಳೂರು ಗ್ರಾಮಾಂತರ: ಕರೊನಾ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ಕಾರ್ಯ ಶ್ಲಾಘನೀಯ. ಸೋಂಕಿತರ ಜೀವ ಉಳಿಸಲು ಕಾರ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ ಹೆಚ್ಚು ಜಾಗೃತರಾಗಿರಬೇಕು ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

    ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕಿನ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಮವಾರ ಕರೊನಾ ತಡೆಗೆ ವಿಶೇಷ ಕಿಟ್ ವಿತರಿಸಿ ಮಾತನಾಡಿದರು.

    ಸರ್ಕಾರ ಎಷ್ಟೇ ಮುನ್ನೆಚ್ಚರಿಕೆ ಕೈಗೊಂಡರೂ ಕರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರದ ಸೌಲಭ್ಯಗಳು ಸಾಕಾಗುತ್ತಿಲ್ಲ. ಆದ್ದರಿಂದ ಹೆಚ್ಚಿನ ಸೌಲಭ್ಯ ನೀಡಲು ಉದ್ಯಮಿಗಳು, ದಾನಿಗಳು ಮುಂದೆ ಬಂದು ಬಡವರಿಗೆ ನೆರವಿನ ಹಸ್ತ ನೀಡುವ ಮೂಲಕ ಪ್ರಾಣ ಉಳಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.

    ಸರ್ಕಾರ ಈಗಾಗಲೇ ಆಹಾರ ಭದ್ರತೆ ದೃಷ್ಟಿಯಿಂದ ಬಡವರ ಪಡಿತರ ಚೀಟಿಗೆ ಹೆಚ್ಚುವರಿಯಾಗಿ 10 ಕೆಜಿ ಅಕ್ಕಿ ವಿತರಣೆ ಮಾಡಿದ್ದು, ಇದರ ಸದುಪಯೋಗ ಪಡೆಯಬೇಕು ಎಂದರು.

    ಪ್ರತಿ ಪಕ್ಷದ ನಾಯಕರು, ಎಲ್ಲದಕ್ಕೂ ವಿರೋಧ ಮಾಡಿಯೇ ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಇದು ಪ್ರಚಾರದ ಸಮಯವಲ್ಲ. ಬಡವರು ಕರೊನಾ ಸೋಂಕಿನಿಂದ ಮುಕ್ತರಾಗುವಂತಹ ಕಾರ್ಯಕ್ರಮ ಮಾಡಿ ಸರ್ಕಾರದ ಜತೆ ಕೈಜೋಡಿಸಲಿ. ಅದು ಸುಳ್ಳು ಮಾಹಿತಿ ಹಬ್ಬಿಸಬಾರದು ಎಂದರು.

    ಕರೊನಾ ನಿರ್ಮೂಲನಾ ಲಸಿಕೆ ಬಂದ ಮೊದಲಿಗೆ ಪ್ರತಿ ಪಕ್ಷದ ನಾಯಕರು ಜನರಲ್ಲಿ ಅಪಪ್ರಚಾರ ಮಾಡಿದರು. ಅದರ ಫಲವಾಗಿ ಇಂದು ಲಸಿಕೆ ಉತ್ಪಾದನೆಯಲ್ಲಿ ಸಮಸ್ಯೆ ಆಗಿದೆ ಎಂದು ದೂರಿದರು. ಮೇ 25 ರಂದು ನಗರದ ವಾರ್ಡ್ 8 ಹಾಗೂ 9 ರಲ್ಲಿ ಫೀವರ್ ಕ್ಲೀನಿಕ್ ತೆರೆಯಲಾಗುತ್ತಿದ್ದು, ಆ ಭಾಗದ ಸಾರ್ವಜನಿಕರು ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

    ಬ್ಲ್ಯಾಕ್ ಂಗಸ್ ಸೋಂಕು ತಾಲೂಕಿನಲ್ಲಿ ಇಬ್ಬರಿಗೆ ಬಂದಿದ್ದು, ಒಬ್ಬರಿಗೆ ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಬೇಕಾದ ಔಷಧವನ್ನು ಸರ್ಕಾರದಿಂದಲೇ ನೀಡಲಾಗುತ್ತಿದೆ, ಈ ಬಗ್ಗೆ ನಗರದ ಎಂವಿಜೆ ಆಸ್ಪತ್ರೆಗೆ ಇಂಡೆಂಟ್ ನೀಡಲು ತಿಳಿಸಲಾಗಿದೆ ಎಂದರು.

    ನಗರಸಭೆ ಸದಸ್ಯರಾದ ನವೀನ್, ನಿತಿನ್, ಶೋಭಾ ಶಿವಾನಂದ್, ಗುಲ್ಜಾರ್, ಟೌನ್ ಬ್ಯಾಂಕ್ ಸದಸ್ಯ ಅಪ್ಸರ್, ಮುಖಂಡರಾದ ನಾರಾಯಣಸ್ವಾಮಿ ಆರೋಗ್ಯ ರಕ್ಷ ಸಮಿತಿ ಸದಸ್ಯರಾದ ಬಾಲಚಂದ್ರನ್, ಪಿಂಕಿ ಮುನಿರಾಜ್, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸತೀಶ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts