More

    ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹ

    ತೆಲಸಂಗ, ಬೆಳಗಾವಿ: ದ್ರಾಕ್ಷಿ ಬೆಳೆಗಾರರು ಕಟ್ಟಿರುವ ಹಣಕ್ಕೆ ಸೂಕ್ತ ವಿಮೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ರೈತರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ತೆಲಸಂಗ ಉಪ ತಹಸೀಲ್ದಾರ್ ಕಚೇರಿ ಹತ್ತಿರದ ಮಳೆ ಮಾಪನದ ಕೇಂದ್ರದ ಎದುರು ಈಚೆಗೆ ಪ್ರತಿಭಟಿಸಿದರು.

    ಅಧಿಕಾರಿಗಳು ದ್ರಾಕ್ಷಿ ಬೆಳೆ ನಷ್ಟದ ಕುರಿತಾಗಿ ವೈಜ್ಞಾನಿಕ ಸಮೀಕ್ಷೆ ಮಾಡಿಲ್ಲ. ಸಮೀಕ್ಷೆಗೆ ಬಳಸುವ ಮಳೆ ಮಾಪನ ಕೇಂದ್ರವೇ ದುರಸ್ತಿಯಲ್ಲಿದ್ದು, ಅದರ ಆಧಾರದ ಮೇಲೆ ಬೆಳೆ ಹಾನಿ ಪರಿಹಾರ ನೀಡುತ್ತಾರೆ. ಒಂದು ಎಕರೆ ದ್ರಾಕ್ಷಿ ತೋಟ ನಿರ್ವಹಣೆಗೆ 2 ಲಕ್ಷ ರೂ. ಖರ್ಚಾಗುತ್ತದೆ. ದ್ರಾಕ್ಷಿ ಬೆಳೆಗೆ ಯೋಗ್ಯವಲ್ಲದ ಭೂಮಿಗೂ 2 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಆದರೆ, ನಮಗೆ ಎಕರೆಗೆ 40 ಸಾವಿರ ರೂ ಬೆಳೆ ಪರಿಹಾರದ ವಿಮೆ ನೀಡಿದ್ದಾರೆ. ಎಲ್ಲ ರೈತರಿಗೂ ಒಂದೇ ತೆರನಾದ ಪರಿಹಾರ ನೀಡಬೇಕು.

    ಮಳೆ ಮಾಪನದ ವರದಿ, ವಿಮೆ ಕ್ಲೇಮ್‌ಗೆ ಹಾನಿ ಘೋಷಿಸಿದ ಬಗ್ಗೆ ಮತ್ತು ಬೆಳೆ ಹಾನಿ ಆಗಿದ್ದೆಷ್ಟು ಎನ್ನುವ ಕುರಿತಾದ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ನಮಗೆ ನ್ಯಾಯ ಸಿಗದಿದ್ದರೆ ಜನಪ್ರತಿನಿಧಿಗಳ ಮನೆ ಎದುರು ‘ಒಂದು ದಿನ ರೈತರ ಬಾಯಲ್ಲಿ ಮಣ್ಣು’ ಹೆಸರಿನಲ್ಲಿ ವಿಭಿನ್ನ ಪ್ರತಿಭಟನೆ ಮಾಡುತ್ತೇವೆೆ ಎಂದು ಪ್ರತಿಭಟನಾನಿರತ ರೈತರು ಎಚ್ಚರಿಸಿದರು. ಅಧಿಕಾರಿಗಳು ನಷ್ಟವಾದ ದ್ರಾಕ್ಷಿ ಬೆಳೆಗೆ ವೈಜ್ಞಾನಿಕ ಮರುಸಮೀಕ್ಷೆ ನಡೆಸಿ ಬೆಳೆಹಾನಿ ಪರಿಹಾರ ನೀಡಬೇಕು
    ಡಾ.ಎಸ್.ಐ.ಇಂಚಗೇರಿ ಆಗ್ರಹಿಸಿದರು.
    ರೈತರಾದ ರವಿ ಕಾರಿಮನಿ, ಪ್ರಭಾಕರ ಮೋರೆ, ಡಾ.ಎಸ್.ಐ.ಇಂಚಗೇರಿ, ರಸೂಲ ಮುಲ್ಲಾ, ಸಿದ್ದಗೊಂಡ ಕುಮಠಳ್ಳಿ, ಮಾಯಪ್ಪ ಸಾವಳಗಿ, ವೀರಪ್ಪ ಸಕ್ರಿ, ನೇರುತ್ತಿ ಪೋಳ, ದೀಲಿಪ ಖೊಬ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts