More

    ವೈಚಾರಿಕತೆ, ಬದ್ಧತೆಯುಳ್ಳ ಸಾಹಿತ್ಯ ರಚನೆ ಅಗತ್ಯ

    ಶಿಗ್ಗಾಂವಿ: ಸಾಮಾಜಿಕ ಕಳಕಳಿಯುಳ್ಳ ಸಾಹಿತ್ಯ ಸದಾ ಜೀವಂತಿಕೆ ಪಡೆಯುತ್ತದೆ. ಕಾಲ್ಪನಿಕ ವಿಷಯ, ವಸ್ತುಗಳಿಗಿಂತ, ವೈಚಾರಿಕ ಹಾಗೂ ಬದ್ಧತೆಯುಳ್ಳ ಸಾಹಿತ್ಯ ರಚನೆ ಆಗಬೇಕಿದೆ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

    ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಾಹಿತಿಗಳು ಪೂರ್ವಾಗ್ರಹ ಪೀಡಿತರಾಗಿರಬಾರದು. ವಸ್ತುನಿಷ್ಠ ವಿಷಯ ಆಯ್ಕೆ, ಸತತ ಅಧ್ಯಯನದ ಜತೆಗೆ ಸಮಕಾಲೀನಗೊಂಡಾಗ ಮಾತ್ರ ಸಾಹಿತ್ಯ ಜನಮಾನಸ ತಲುಪಲು ಸಾಧ್ಯ. ಯುವ ಸಾಹಿತಿಗಳನ್ನು ಬೆಂಬಲಿಸುವ ಮೂಲಕ ಸಾಹಿತ್ಯ ಲೋಕ ಶ್ರೀಮಂತಗೊಳಿಸಬೇಕು. ಯಾವುದೇ ವ್ಯವಸ್ಥೆ ವಿರುದ್ಧ ಹೋರಾಡುವ ಛಾತಿ ಹೊಂದಿರಬೇಕು. ಕೇವಲ ಹೊಂದಾಣಿಕೆ ಮಾಡಿಕೊಳ್ಳುತ್ತ ಮುಂದೆ ಸಾಗಿದರೆ ಸಾಹಿತಿಗಳನ್ನು ಸಂಶಯದಿಂದ ನೋಡುವಂತಾಗುತ್ತದೆ ಎಂದರು.

    ರಂಗಕರ್ವಿು ಕೊಟ್ರೇಶ ಮಾಸ್ತರ ಬೆಳಗಲಿ ಮಾತನಾಡಿ, ಗ್ರಾಮೀಣ ರಂಗಕಲೆ ಜೀವಂತಿಕೆಗೆ ನೂರು ಗ್ರಾಮ, ನೂರು ಡ್ರಾಮ ಯೋಜನೆ ರೂಪಿಸಲಾಗಿದೆ. ಈ ಮೂಲಕ ಪ್ರತಿ ಗ್ರಾಮೀಣ ಪ್ರದೇಶಗಳ ಯುವಕರನ್ನು ರಂಗ ತರಬೇತಿಗೆ ಸಜ್ಜುಗೊಳಿಸಲಾಗುವುದು ಎಂದರು.

    ಸಾಹಿತಿ ಗಂಗಾಧರ ನಂದಿ, ಭರತ ಶಿಕ್ಷಣ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ದ್ಯಾಮನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಸಿ.ಎಸ್. ಸೋಮನಕಟ್ಟಿ ಅವರ ‘ಸುರಿದಾವ ಮಲ್ಲಿಗೆ’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.

    ಉಪನ್ಯಾಸಕರಾದ ಎಸ್.ವಿ. ಕುಲಕರ್ಣಿ, ರಂಜಾನ್ ಕಿಲ್ಲೇದಾರ್, ಶಿಕ್ಷಕರಾದ ಕೆ.ಬಿ. ಚನ್ನಪ್ಪ, ಎಸ್.ಎನ್. ಮುಗಳಿ, ಬಸವರಾಜ ಬಸರೀಕಟ್ಟಿ, ಅರುಣ ಹುಡೇದಗೌಡ್ರ, ಸಾಹಿತ್ಯಾಸಕ್ತರಾದ ಶಶಿಕಲಾ ಕೋಣನವರ, ಡಾ. ಲತಾ ನಿಡಗುಂದಿ, ಮಲ್ಲಪ್ಪ ರಾಮಗೇರಿ, ಶಶಿಕಾಂತ ರಾಠೋಡ, ಶರೀಫ ಮಾಕಪ್ಪನವರ ಉಪಸ್ಥಿತರಿದ್ದರು. ಉಪನ್ಯಾಸಕ ಶಿವಪ್ರಕಾಶ ಬಳಿಗಾರ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts