More

    ವೇತನ ಪರಿಷ್ಕರಣೆಗೆ ಒತ್ತಾಯ

    ದಾಂಡೇಲಿ: ಆಡಳಿತ ಮಂಡಳಿಯು ಕಾರ್ವಿುಕರ ವೇತನ ಪರಿಷ್ಕರಣೆಗೆ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಜಂಟಿ ಸಂಧಾನ ಸಮಿತಿ ನೇತೃತ್ವದಲ್ಲಿ ಕಾರ್ವಿುಕರು ಮಂಗಳವಾರದಿಂದ ನಗರದ ವೆಸ್ಟ್ ಕೋಸ್ಟ್ ಪೇಪರ್​ವಿುಲ್ ಪ್ರವೇಶ ದ್ವಾರದ ಎದುರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

    ಜಂಟಿ ಸಂಧಾನ ಸಮಿತಿ ಪ್ರಮುಖರಾದ ಬಿ.ಡಿ. ಹಿರೇಮಠ, ಉದಯ ನಾಯ್ಕ, ಶ್ರೀನಿವಾಸ ಘೊಟ್ನೇಕರ, ಸಿ.ವಿ. ಲೋಕೇಶ ಮಾತನಾಡಿ, ‘ಕಾರ್ವಿುಕರ ಹಿತಾಸಕ್ತಿ ಕಾಪಾಡುವುದು ಸೇರಿದಂತೆ ಮುಖ್ಯ ಕೆಲ ಬೇಡಿಕೆಗಳಿಗೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಆದರೆ, ಮೂಲ ವೇತನ ಹೆಚ್ಚಳ ಮತ್ತು ಇನ್ನಿತರ ಕೆಲ ಬೇಡಿಕೆಗಳಿಗೆ ಕಾರ್ಖಾನೆ ಆಡಳಿತ ಮಂಡಳಿ ಸಮ್ಮತಿಸದ ಕಾರಣ ಈ ಧರಣಿ ಸತ್ಯಾಗ್ರಹ ಅನಿವಾರ್ಯವಾಗಿದೆ’ ಎಂದರು.

    ವಿವಿಧ ಕಾರ್ವಿುಕ ಸಂಘಟನೆಗಳ ಸದಸ್ಯರಾದ ಸಲೀಂ ಸೈಯ್ಯದ್, ಭರತ ಪಾಟೀಲ, ಲಕ್ಷ್ಮಣ ಅರಶಿಣಗೇರಿ, ಪ್ರಮೋದ ಕದಂ, ಕಲ್ಲಪ್ಪ ಚೆನ್ನವರ, ರೂಪೇಶ ಪವಾರ, ಹನುಮಂತ ಕಾರ್ಗಿ, ಇತರರು ಉಪಸ್ಥಿತರಿದ್ದರು.

    ಕರೊನಾ ಹಿನ್ನೆಲೆಯಲ್ಲಿ ಕಾರ್ಖಾನೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಪುಸ್ತಕ, ನೋಟ್​ಬುಕ್ ಇನ್ನಿತರ ಉತ್ಪನ್ನಗಳ ಬಳಕೆ ಕಡಿಮೆ ಆಗಿರುವುದರಿಂದ ಕಾಗದದ ಬೇಡಿಕೆ ಕುಸಿದಿದೆ. ಇಂತಹ ಸಂದರ್ಭದಲ್ಲಿ ಜಂಟಿ ಸಂಧಾನ ಸಮಿತಿ ಆಡಳಿತ ಮಂಡಳಿಯ ಕಷ್ಟದ ಪರಿಸ್ಥಿತಿ ಅರಿತು ಬೇಷರತ್ ಚರ್ಚೆ ಯೊಂದಿಗೆ ಸಂಧಾನದ ಮಾರ್ಗಕ್ಕೆ ಅನುವು ಮಾಡಿಕೊಡಬೇಕು.

    | ಎಸ್.ಎನ್. ಪಾಟೀಲ

    ಹಿರಿಯ ಉಪಾಧ್ಯಕ್ಷ,

    ವೆಸ್ಟ್​ಕೋಸ್ಟ್ ಪೇಪರ್ ಮಿಲ್ ದಾಂಡೇಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts