More

    ವೆಂಕಟಾಪುರ ನದಿಯಲ್ಲಿ ಮೊಸಳೆ ಪ್ರತ್ಯಕ್ಷ !

    ವಿಜಯವಾಣಿ ಸುದ್ದಿಜಾಲ ಭಟ್ಕಳ

    ಇಲ್ಲಿನ ವೆಂಕಟಾಪುರ ನದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವುದು ಸ್ಥಳೀಯರ ಹಾಗೂ ಮೀನುಗಾರರ ಆತಂಕಕ್ಕೆ ಕಾರಣವಾಗಿದೆ. ವೆಂಕಟಾಪುರ ತಾಲೂಕಿನ ಹೆಗ್ಗಲು ಬಳಿಯ ನದಿ ಮಧ್ಯದಲ್ಲಿ ಮರಳಿನ ದಿಬ್ಬದ ಮೇಲೆ ಮೊಸಳೆ ಸ್ಥಳೀಯರಿಗೆ ಕಾಣಿಸಿದೆ.

    ಇಲ್ಲಿನ ನಾಡದೋಣಿ ಮೀನುಗಾರರು, ಬಲೆಯಿಂದ ಮೀನು ಹಿಡಿಯುವವರು ಮೀನುಗಾರಿಕೆಗೆ ಇದೇ ಪ್ರದೇಶಕ್ಕೆ ತೆರಳುತ್ತಾರೆ. ಆದರೆ, ಮೊಸಳೆ ಕಾಣಿಸಿರುವುದರಿಂದ ಭಯಭೀತರಾಗಿದ್ದಾರೆ. ಕಳೆದ ವರ್ಷ ಇದೇ ವೇಳೆ ಇಲ್ಲಿ ಮೊಸಳೆ ಪ್ರತ್ಯಕ್ಷವಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನು ಹಿಡಿಯಲು ಸಾಕಷ್ಟು ಪ್ರಯತ್ನ ಪಟ್ಟರೂ ಅದು ಸಿಕ್ಕಿರಲಿಲ್ಲ. ಪ್ರವಾಹದ ವೇಳೆ ಮೊಸಳೆ ಇಲ್ಲಿ ಬಂದು ಸೇರಿರಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಇದು ಕಳೆದ ವರ್ಷ ಕಾಣಿಸಿಕೊಂಡಿದ್ದ ಮೊಸಳೆಯೋ ಅಥವಾ ಬೇರೆಯದೋ ಎಂಬುದು ತಿಳಿದುಬಂದಿಲ್ಲ.

    ವೆಂಕಟಾಪುರ ನದಿಯ ಹೆಗ್ಗಲು ಬಳಿ ಮರಳಿನ ದಿಬ್ಬದ ಮೇಲೆ ಮೊಸಳೆ ಕಂಡು ಬಂದಿರುವ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನೆರಡು ದಿನ ಆ ಪ್ರದೇಶದ ಮೇಲೆ ತೀವ್ರ ನಿಗಾ ಇಡಲಾಗುವುದು. ಅಂಕೋಲಾದಿಂದ ಮೊಸಳೆ ಹಿಡಿಯುವ ತಜ್ಞರನ್ನು ಕರೆಸಿ ಅದನ್ನು ಸುರಕ್ಷಿತ ತಾಣಕ್ಕೆ ಸೇರಿಸಲು ಪ್ರಯತ್ನ ನಡೆಸಲಾಗುವುದು.
    ಶರತ್ ಶೆಟ್ಟಿಆರ್​ಎಫ್​ಒ, ಭಟ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts