More

    ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಆಯ್ಕೆ

    ಕೆ.ಆರ್.ನಗರ: ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷರಾಗಿ ಕಲ್ಯಾಣಪುರದ ರಾಜಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಕೊಡಿಯಾಲದ ಚಂದ್ರಶೇಖರ್, ಖಜಾಂಚಿಯಾಗಿ ಮುಳ್ಳೂರು ಗಂಗಾಧರ್ ಆಯ್ಕೆಯಾದರು.

    ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ಸೋಮವಾರ ಆಯೋಜಿಸಿದ್ದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ 2023-26ನೇ ಸಾಲಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕಿನಲ್ಲಿ 380 ಸದಸ್ಯರಿದ್ದು, 32 ನಿರ್ದೇಶಕರ ಆಯ್ಕೆ ಮಾಡಲಾಯಿತು.

    ನಿರ್ದೇಶಕರಾಗಿ ಕೆ.ಲೋಕೇಶ್, ಎಸ್. ಹರೀಶ್, ಸೋಮಶೇಖರ್.ಎಂ.ಕೆ.ಹೇಮೇಶ್, ಪುಟ್ಟರಾಜು, ಎಚ್.ಎಸ್.ಮಹೇಶ್, ಪಿ.ಎಸ್.ಗಿರೀಶ್, ಎಚ್.ಪಿ.ದಿನೇಶ್, ಬಿ.ಎಲ್.ಜಯಪ್ರಕಾಶ್, ಜಯಕುಮಾರ್, ಚಿತ್ರಾ ಶೇಖರ್, ಪ್ರದೀಪ್, ಕಲ್ಲೇಶ್, ಸುರೇಶ್.ಕೆ.ವಿ.ಸುರೇಶ್, ರುದ್ರಮೂರ್ತಿ, ಯೋಗಾನಂದ, ಎಸ್.ಆರ್.ಗಂಗಾಧರ್, ಚನ್ನಬಸಪ್ಪ, ಬಿ.ಎಸ್.ಯೋಗೇಶ್, ಪಿ.ಆರ್.ಕಾರ್ತಿಕ್, ಪಿ.ಎಲ್.ಶಿವಕುಮಾರಸ್ವಾಮಿ, ಲೋಕೇಶ್, ಎಸ್.ಗಂಗಾಧರ, ಬಸವರಾಜು, ಅಣ್ಣಾಜಪ್ಪ, ಬಸವರಾಜು, ಅನಸೂಯಾರಾಣಿ ಮಹದೇವಪ್ಪ, ವಸುಧಾ ಸರ್ವೇಶ್ ಆಯ್ಕೆಯಾದರು.

    ಚುನಾವಣಾಧಿಕಾರಿಯಾಗಿ ಸಂಘದ ಹಿರಿಯ ಸದಸ್ಯರಾದ ಅರುಣ್ ಬಿ.ನರಗುಂದ್, ಎಚ್.ಸಿ.ಜಗದೀಶ್, ಕೊಡಿಯಾಲ ಶಿವಕುಮಾರ್, ಎಸ್.ಸಂಗಪ್ಪ ಕಾರ್ಯನಿರ್ವಹಿಸಿದರು.

    ನನಗೆ ನೀಡಿರುವ 3 ವರ್ಷಗಳ ಅವಧಿಯಲ್ಲಿ ಸದಸ್ಯರು, ನಿರ್ದೇಶಕರ ಸಲಹೆ, ಸಹಕಾರ ಪಡೆದು ನೌಕರರ ಹಿತರಕ್ಷಣೆಗೆ ಕೆಲಸ ಮಾಡಲಾಗುವುದು. ಸಾಮಾಜಿಕ, ಧಾರ್ಮಿಕ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತಾಲೂಕಿನಲ್ಲಿ ಸಂಘವನ್ನು ಮಾದರಿಯನ್ನಾಗಿ ಮಾಡಲಾಗುವುದು ಎಂದು ಅಧ್ಯಕ್ಷ ರಾಜಶೇಖರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts