More

    ವೀರಶೈವ ಲಿಂಗಾಯತ ಧರ್ಮಕ್ಕಿದೆ ವೈಜ್ಞಾನಿಕ ತಳಹದಿ

    ಕಂಪ್ಲಿ: ವೀರಶೈವ ಲಿಂಗಾಯತ ಧರ್ಮವು ವೈಜ್ಞಾನಿಕ ತಳಹದಿಯನ್ನು ಹೊಂದಿದೆ ಎಂದು ಎಮ್ಮಿಗನೂರಿನ ಹಂಪಿಸಾವಿರ ದೇವರಮಠದ ವಾಮದೇವ ಶಿವಾಚಾರ್ಯರು ಹೇಳಿದರು.

    ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಾಜ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀರೇಣುಕಾಚಾರ್ಯರ ಯುಗಮಾನೋತ್ಸವ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿರಕ್ತ ಮುನಿಗಳಿಗೆ ವೀರಶೈವ ತತ್ವ ಸಿದ್ಧಾಂತಗಳನ್ನು ನಾನಾ ಜಾತಿ ಸಮುದಾಯಗಳಿಗೆ ಬೋಧನೆ ಮಾಡಿದ್ದ ಶ್ರೀರೇಣುಕಾಚಾರ್ಯರು, ಮಠಗಳನ್ನು ನಿರ್ಮಿಸಿ, ಧರ್ಮ ಆಚರಣೆಗೆ ಅನುವು ಮಾಡಿಕೊಟ್ಟಿದ್ದರು. ಇವರು ಸ್ಥಾಪಿಸಿದ ಮುಕ್ಕೋಟಿ ಲಿಂಗಗಳು, ದೇವಸ್ಥಾನ ಮೊದಲಾದ ಕುರುಹುಗಳಿವೆ ಇಂದಿಗೂ ಇವೆ ಎಂದರು.

    ಧರ್ಮಸಭೆಯನ್ನು ಉದ್ಘಾಟಿಸಿದ ಹೆಬ್ಬಾಳ್ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಮಾತನಾಡಿ, ಆದಿ ಜಗದ್ಗುರು ಶ್ರೀರೇಣುಕಾಚಾರ್ಯರ ತತ್ವ ಸಿದ್ಧಾಂತಗಳನ್ನು ಪಠ್ಯಗಳಲ್ಲಿ ಅಳವಡಿಸಬೇಕು. ಶಾಲೆ, ಕಾಲೇಜುಗಳಲ್ಲಿ ರೇಣುಕಾಚಾರ್ಯರ ಕುರಿತು ಉಪನ್ಯಾಸ ಏರ್ಪಡಿಸಬೇಕು ಎಂದರು.

    ಪ್ರಾಸ್ತಾವಿಕ ಮಾತನಾಡಿದ ಕಲ್ಯಾಣಚೌಕಿ ಮಠದ ಬಸವರಾಜಶಾಸ್ತ್ರಿ, 2010ರಿಂದಲೂ 12ವರ್ಷ ನಿರಂತರ ಕಲ್ಯಾಣ ಚೌಕಿಮಠದಲ್ಲಿ ಶ್ರೀರೇಣುಕಾಚಾರ್ಯರ ಯುಗಮಾನೋತ್ಸವವನ್ನು ಆಚರಿಸುತ್ತ ಬರಲಾಗಿದೆ. ವೀರಶೈವ ಲಿಂಗಾಯತರು ಸಂಘಟಿತರಾಗಿ ಹೋರಾಟ ಹಮ್ಮಿಕೊಂಡಲ್ಲಿ ಚರಿತ್ರೆಯನ್ನೇ ಸೃಷ್ಟಿಸಬಹುದು ಎಂದರು.

    ಹರಗಿನದೋಣಿಯ ಪಂಚವಣ್ಣಿಗಿ ಸಂಸ್ಥಾನ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಪ್ರಮುಖರಾದ ಎಂ.ಎಸ್.ಶಶಿಧರಶಾಸ್ತ್ರಿ, ಪಿ.ಮೂಕಯ್ಯಸ್ವಾಮಿ, ಅರವಿ ಬಸವನಗೌಡ, ಎನ್.ಎಂ.ಪತ್ರೆಯ್ಯಸ್ವಾಮಿ, ಎಸ್.ಎಂ.ನಾಗರಾಜ, ಎಸ್.ಡಿ.ಬಸವರಾಜ್, ಡಾ.ಜಗನ್ನಾಥಹಿರೇಮಠ, ಜಿ.ಚಂದ್ರಶೇಖರ, ಕೆ.ಎಂ.ಚಂದ್ರಶೇಖರಯ್ಯ, ಅಲಬನೂರು ಬಸವರಾಜ್, ಕೆ.ಯಂಕಾರೆಡ್ಡಿ, ಜಡೆಯ್ಯಸ್ವಾಮಿ, ಯು.ಎಂ.ವಿದ್ಯಾಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts