More

    ವೀರಶೈವ ಮಹಾಸಭೆ, ಕೆಎಲ್‌ಇ ಸೇವೆ ಅಪೂರ್ವ

    ಬೆಳಗಾವಿ: ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಕೆಎಲ್‌ಇ ಸಂಸ್ಥೆಗಳ ಸಾಮಾಜಿಕ ಕಾಳಜಿ ಮತ್ತು ಸೇವೆ ಅಪೂರ್ವ. ವೀರಶೈವ ಲಿಂಗಾಯತ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಎರಡೂ ಸಂಸ್ಥೆಗಳು ತನು-ಮನ, ಧನದಿಂದ ಶ್ರಮಿಸುತ್ತಿರುವುದು ಸರ್ವವಿಧಿತ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಹೇಳಿದರು.

    ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಹಾಗೂ ಕೆಎಲ್‌ಇ ಸಂಸ್ಥೆಯ ಸಹಯೋಗದಲ್ಲಿ ವೀರಶೈವ ಲಿಂಗಾಯತ ವಧು- ವರ ಅನ್ವೇಷಣ ಕೇಂದ್ರದಿಂದ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಧವೆ, ವಿಧುರ, ವಿಚ್ಛೇದಿತ, ವಿಳಂಬ, ಮರು ಮದುವೆ ಬಯಸುವ ವಧು-ವರರ, ಪಾಲಕರ 10ನೇ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

    ಅಧ್ಯಕ್ಷತೆ ವಹಿಸಿದ್ದ ವೀರಶೈವ ಲಿಂಗಾಯತ ವಧು-ವರ ಅನ್ವೇಷಣ ಕೇಂದ್ರದ ಅಧ್ಯಕ್ಷ ಡಾ.ಎಫ್.ವಿ.ಮಾನ್ವಿ ಮಾತನಾಡಿ, ಬಸವಾದಿ ಶರಣರು ತನು-ಮನ, ಧನವನ್ನು ಗುರುಲಿಂಗ ಜಂಗಮರಿಗೆ ಅರ್ಪಿಸಿದರೆ ಭುವಿಯ ಮೇಲಿನ ಜೀವನ ಸಾರ್ಥಕವಾಗುತ್ತದೆ ಎನ್ನುವ ಮಾತನ್ನು ವೀರಶೈವ ಲಿಂಗಾಯತ ಮಹಾಸಭೆ ಮತ್ತು ಕೆಎಲ್‌ಇ ಸಂಸ್ಥೆಗಳು ಆಚರಣೆಗಿಳಿಸಿವೆ. ನಲುಗಿದವರಿಗೆ ಹೊಸ ಬದುಕು ಕಟ್ಟಿ ಕೊಡಲು ವೀರಶೈವ ಲಿಂಗಾಯತ ವಧು-ವರ ಅನ್ವೇಷಣ ಕೇಂದ್ರ ಸಹಾಯ ಮಾಡುತ್ತಿದೆ. ಸಮಾವೇಶಗಳಲ್ಲಿ ಸಾವಿರಾರು ವಧು-ವರ, ಪಾಲಕರು ಪಾಲ್ಗೊಂಡು ಪ್ರಯೋಜನ ಪಡೆಯುತ್ತಿದ್ದಾರೆ ಎಂದರು. ವಧು-ವರರ ಅನ್ವೇಷಣ ಕೇಂದ್ರದ ಪ್ರಧಾನ ಕಾರ್ಯದರ್ಶಿ ಡಾ.ಗುರುದೇವಿ ಹುಲೆಪ್ಪನವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶೀಲಾ ಬ್ಯಾಕೋಡಿ, ಸುಧಾ ಪಾಟೀಲ, ಜ್ಯೋತಿ ಬದಾಮಿ ಇತರರಿದ್ದರು. ಆಶಾ ಯಮಕನಮರಡಿ ಪ್ರಾರ್ಥಿಸಿದರು. ಡಾ.ಭಾರತಿ ಮಠದ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts