More

    ವೀರಭದ್ರ ದೇವರ ಗುಗ್ಗಳೋತ್ಸವ ಸಂಪನ್ನ

    ಚಿತ್ರದುರ್ಗ: ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ವೀರಭದ್ರ ಸ್ವಾಮಿಯ ಗುಗ್ಗಳ, ಅಗ್ನಿಕುಂಡ ಮಹೋತ್ಸವ ಮಂಗಳವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿ, ಸಂಪನ್ನಗೊಂಡಿತು.

    ಪೂಜಾ ಕೈಂಕರ್ಯವೂ ಬೆಳಗ್ಗೆ ಗಂಗಾಪೂಜೆ ಮೂಲಕ ಆರಂಭವಾಯಿತು. ನಂತರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಗುಗ್ಗಳದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಇದೇ ಪ್ರಥಮ ಬಾರಿ ಪರಿಶಿಷ್ಟ ಜಾತಿಯ ಭಕ್ತರು ಪಲ್ಲಕ್ಕಿ ಹೊತ್ತು ಭಕ್ತಿ ಸಮರ್ಪಿಸಿದರು.

    ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಸಂಚರಿಸುವಾಗ ನೀರೆರಚುವ ಮೂಲಕ ಸ್ವಾಮಿಯನ್ನು ಸ್ವಾಗತಿಸಿದ ಭಕ್ತಸಮೂಹ ಪೂಜೆ ಸಲ್ಲಿಸಿದರು. ನಂತರ ದೇಗುಲ ತಲುಪಿತು. ಇಲ್ಲಿ ಅಗ್ನಿಕುಂಡ ಹಾಯುವ ಮೂಲಕ ಭಕ್ತರು ಬಿಜಯಂಗೈದು ಭಕ್ತಿ ಸಮರ್ಪಿಸಿದರು.

    ಪುರವಂತಿಕೆ ಜನಪದ ಕಲಾವಿದರ ತಂಡದವರು ಮೆರವಣಿಗೆ ವೇಳೆ ಮಾರ್ಗದುದ್ದಕ್ಕೂ ವೀರಸಾರ ಪರಮ ಗಂಭೀರ ದಕ್ಷಸಂಹಾರ ಪರಶಿವನ ಮೋಹನಕುಮಾರ ಕಿಡಿಗಣ್ಣು ನೋಟದ ರುದ್ರದೇವ ಶ್ರೀ ವೀರೇಶನೇ ಬಹುಪರಾಕ್ ಬಹುಪರಾಕ್ ಎಂದು ಪರಮಾತ್ಮನ ನಾಮಸ್ಮರಣೆಯನ್ನು ಒಡಪಿನ ರೂಪದಲ್ಲಿ ಹೇಳುವ ಮೂಲಕ ಗಮನ ಸೆಳೆದರು.

    ವೀರಭದ್ರೇಶ್ವರ ಸ್ವಾಮಿ ಮಾದರಿಯ ವೇಷಧಾರಿಗಳು ಭಕ್ತರನ್ನು ಆಕರ್ಷಿಸಿದರು. ಮಹಾಮಂಗಳಾರತಿ ನಂತರ ತೀರ್ಥ, ಪ್ರಸಾದ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts