More

    ವೀರಭದ್ರೇಶ್ವರ ಮೂರ್ತಿ ಪುನರ್ ಪ್ರತಿಷ್ಠಾಪನೆ


    ಯಾದಗಿರಿ: ಜೀವನದ ಜಂಜಾಟದಲ್ಲಿ ಭಾರವಾಗುವ ಮನಸ್ಸನ್ನು ಹಗುರಗೊಳಿಸಬೇಕಾದರೆ ಧಾರ್ಮಿಕ ಚಿಂತನೆಯಿಂದ ಮಾತ್ರ ಸಾಧ್ಯ ಎಂದು ಸಗರ ನಾಗಠಾಣಾ ಹಿರೇಮಠದ ಶ್ರೀಸೋಮೇಶ್ವರ ಶಿವಾಚಾರ್ಯರು ನುಡಿದರು.

    ಗುರುವಾರ ಗುರುಮಠಕಲ್ನ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ವೀರಭದ್ರೇಶ್ವರ ಮೂರ್ತಿ ಪುನರ್ ಪ್ರತಿಷ್ಠಾಪನೆ ಮತ್ತು ರಂಭಾಪುರಿ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿ, ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶದಿಂದ ಪಟ್ಟಣದಲ್ಲಿ ನಡೆಯಲಿರುವ ಧಾಮರ್ಿಕ ಕಾರ್ಯಕ್ರಮಗಳು ಮಲಿನಗೊಂಡ ಮನಸ್ಸುಗಳನ್ನು ಸ್ವಚ್ಛಗೊಳಿಸಿ ಜಗದ್ಗುರುಗಳ ಸಂದೇಶಗಳಿಂದ ಜೀವನದಲ್ಲಿ ಸಾಫಲ್ಯ ಹೊಂದಲಿವೆ ಎಂದರು.

    ಡಿ.6 ರಂದು ದೇವಸ್ಥಾನದಲ್ಲಿ ನಂದಿ, ಗಣೇಶ ಮತ್ತು ಶ್ರೀವೀರಭದ್ರೇಶ್ವರ ಮೂರ್ತಿಗಳ ಪುನರ್ಪ್ರತಿಷ್ಠಾಪನೆ ರಂಭಾಪುರಿ ಜಗದ್ಗುರಗಳ ಅಡ್ಡಪಲ್ಲಕ್ಕಿ, ಧರ್ಮಸಭೆ ನಡೆಯಲಿದೆ. ಡಿ.7ರಂದು ಧರ್ಮ ಜಾಗೃತಿ ಕಾರ್ಯಕ್ರಮಗಳು ಜರುಗಲಿದೆ. ನ.20 ರಿಂದ 15 ದಿನಗಳವರೆಗೆ ಶ್ರೀ ಶರಣಬಸವೇಶ್ವರ ಪುರಾಣವನ್ನು ಜೇರಟಗಿಯ ಮಡಿವಾಳಯ್ಯ ಶಾಸ್ತ್ರಿಗಳು ನಡೆಸಿಕೊಡಲಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts