More

    ದೇಗುಲ ಜೀರ್ಣೋದ್ಧಾರ ಶ್ರೇಷ್ಠ ಕಾರ್ಯ: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ

    ಹೊಸನಗರ: ಹೊಸ ದೇಗುಲ ನಿರ್ಮಾಣಕ್ಕಿಂತ ದೇವಾಲಯದ ಜೀರ್ಣೋದ್ಧಾರ ಶ್ರೇಷ್ಠ ಕಾರ್ಯ. ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಾಲಯವು ಪೂರ್ಣ ಪ್ರಮಾಣದಲ್ಲಿ ಶಿಲಾಮಯವಾಗಿ ಅಭಿವೃದ್ಧಿ ಪಡಿಸಿರುವುದು ಸಂತಸ ತಂದಿದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.
    ಮಂಗಳವಾರ ಕಾರಣಗಿರಿ ಶ್ರೀಸಿದ್ಧಿವಿನಾಯಕ ದೇವಸ್ಥಾನದ ನವೀಕೃತ ಗರ್ಭಗುಡಿಯಲ್ಲಿ ದೇವರ ಮರು ಪ್ರತಿಷ್ಠೆ, ಶಿಖರ ಪ್ರತಿಷ್ಠೆ ಕಾರ್ಯ ನೆರವೇರಿಸಿ ಆಶೀರ್ವಚನ ನೀಡಿದರು.
    ರಾಮಚಂದ್ರಾಪುರ ಮಠಕ್ಕೂ ಕಾರಣಗಿರಿ ದೇವಸ್ಥಾನಕ್ಕೂ ಅವಿನಾಭಾವ ಸಂಬAಧವಿದೆ. ೩೩ನೇ ಯತಿಗಳಾದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಕಾಲದಲ್ಲಿ ದೇವಸ್ಥಾನದ ವಿಗ್ರಹ ಪ್ರತಿಷ್ಠೆ, ನಂದಾದೀಪ, ನಿತ್ಯಪೂಜೆಗಾಗಿ ಸಹಾಯ ಮಾಡಿದ ಉ¯್ಲೆÃಖವಿದೆ. ಈ ಹಿಂದೆ ರಾಮಚಂದ್ರ ಭಾರತೀ ಸ್ವಾಮೀಜಿ ಅನಾರೋಗ್ಯದ್ದಲ್ಲಿz್ದÁಗ ಕಾರಣಗಿರಿ ಸಿದ್ಧಿವಿನಾಯಕನಿಗೆ ಹರಕೆ ಮಾಡಿಕೊಂಡಿದ್ದ ದಾಖಲೆಗಳನ್ನ ಉ¯್ಲÉÃಖಿಸಿದರು.
    ಉತ್ತಮ ಹಾಗೂ ಹಲವು ಧಾರ್ಮಿಕ ಕಾರ್ಯಗಳು ದೇವರ ಸನ್ನಿಽಯಲ್ಲಿ ನಡೆಯುತ್ತಿದ್ದು ಅಸಂಖ್ಯಾತ ಭಕ್ತರ ಗಮನ ಸೆಳೆದಿದೆ ಎಂದರು. ಈ ವೇಳೆ ವಾಸ್ತುತಜ್ಞ ಬಾ.ನಾ.ಜಗದೀಶ್ ಭಟ್, ಶಿಲ್ಪಿ ಶಂಕರಾಚಾರ್ ಅವರನ್ನು ಗೌರವಿಸಲಾಯಿತು. ಹನಿಯ ರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಡಿ.ನಾಗೇಂದ್ರ ರಾವ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಉಡುಪ, ಕಾರ್ಯಾಧ್ಯಕ್ಷ ಪ್ರಭಾಕರ್, ಅರ್ಚಕ ಗಜಾನನ ಭಟ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts