More

    ಪೂನಂ ಪಾಂಡೆ ದಂಪತಿಗೆ ಜಾಮೀನು, ಗೋವಾ ಬಿಟ್ಟು ಹೋಗದಂತೆ ಆದೇಶ

    ಪಣಜಿ: ಪಾರ್ನ್ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ವೇಳೆ ಬಂಧಿತರಾಗಿದ್ದ ನಟಿ ಪೂನಂ ಪಾಂಡೆ ಹಾಗೂ ಈಕೆಯ ಪತಿ ಸ್ಯಾಮ್ ಬಾಂಬೆಯನ್ನು ಕಾಣಕೋಣ ನ್ಯಾಯಾಲಯವು ತಲಾ 20,000 ರೂ. ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

    ಮುಂದಿನ 6 ದಿನಗಳ ಕಾಲ ಇಬ್ಬರೂ ಕಾಣಕೋಣ ಪೊಲೀಸ್ ಠಾಣೆಗೆ ಬಂದು ಹಾಜರಿ ನೀಡಬೇಕು ಹಾಗೂ ನ್ಯಾಯಾಲಯದ ಪರವಾನಗಿ ಇಲ್ಲದೆ ಗೋವಾ ಬಿಟ್ಟು ಹೋಗುವಂತಿಲ್ಲ ಎಂದು ಆದೇಶಿಸಿದೆ.

    ನಟಿ ಪೂನಂ ಪಾಂಡೆ ಹಾಗೂ ಪತಿ ಸ್ಯಾಮ್ ಬಾಂಬೆ ಒಂದು ತಿಂಗಳಿಂದ ಕಾಣಕೋಣದಲ್ಲಿ ವಾಸ್ತವ್ಯ ಹೂಡಿದ್ದರು. ಆ ಸಂದರ್ಭದಲ್ಲಿ ಅವರು ವಾದಗೃಸ್ಥ ವೀಡಿಯೊವನ್ನು ಚಿತ್ರೀಕರಣ ಮಾಡಿದ್ದರು. ಈ ವೀಡಿಯೊ ಚಿತ್ರೀಕರಣದ ವಿರುದ್ಧ ಕಾಣಕೋಣದಲ್ಲಿ ಚರ್ಚೆ ಆರಂಭಗೊಳ್ಳುತ್ತಿದ್ದಂತೆಯೇ ಇವರಿಬ್ಬರೂ ತಮ್ಮ ವಾಸ್ತವ್ಯವನ್ನು ಉತ್ತರಗೋವಾದ ಸಿಕೇರಿಗೆ ಸ್ಥಳಾಂತರಿಸಿಕೊಂಡಿದ್ದರು. ಗುರುವಾರ ಸಂಜೆ ಇವರಿಬ್ಬರೂ ಮುಂಬಯಿಗೆ ಪಲಾಯನಗೈಯ್ಯುವ ಪ್ಲಾ್ಯನ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಪೋಲಿಸರು ಇವರಿಬ್ಬರನ್ನು ಬಂಧಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts