More

    ವಿಶ್ವರಾಜ ಶುಗರ್ಸ್‌ನಿಂದ ಅನುದಾನ

    ಹುಕ್ಕೇರಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಮತ್ತು ಸ್ಕ್ಯಾನಿಂಗ್ ಯಂತ್ರ ಅಳವಡಿಸಲು ಬೇಕಾಗುವ ವೆಚ್ಚವನ್ನು ನಮ್ಮ ಒಡೆತನದ ವಿಶ್ವರಾಜ ಶುಗರ್ಸ್‌ನಿಂದ ಭರಿಸಲು ಸಿದ್ಧ. ತಕ್ಷಣ ಯಂತ್ರ ಖರೀದಿಗೆ ಆದೇಶ ನೀಡಬೇಕು ಎಂದು ಸಚಿವ ಉಮೇಶ ಕತ್ತಿ ತಾಲೂಕು ವೈದ್ಯಾಧಿಕಾರಿಗೆ ಸೂಚಿಸಿದರು. ಪಟ್ಟಣದ ತಾಪಂ ಸಭಾಭವನದಲ್ಲಿ ಗುರುವಾರ ಜರುಗಿದ ಕೋವಿಡ್ ನಿಯಂತ್ರಣಾ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರ ಆರೋಗ್ಯಕ್ಕಾಗಿ ಯಾವುದೇ ಕೊರತೆಯಾಗಬಾರದು. ಅಧಿಕಾರಿಗಳು ಅನುದಾನ ವಿಳಂಬದ ಕಾರಣ ಹೇಳಬಾರದು. ಕರೊನಾ ನಿಯಂತ್ರಣಕ್ಕೆ ಬೇಕಾದ ಔಷಧ, ಯಂತ್ರಗಳನ್ನು ಸಂಗ್ರಹಿಸಿಕೊಟ್ಟಕೊಳ್ಳಬೇಕು ಎಂದು ಸೂಚಿಸಿದರು.

    ಸೋಂಕಿತರಿಗೆ ಔಷಧ ಸಿಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿವೆ. ಸರ್ಕಾರದಿಂದ ಪೂರೈಕೆಯಾಗದಿದ್ದರೆ, ನಿಮ್ಮ ಅನುದಾನದಿಂದ ಖರೀದಿಸಿ. ಅದೂ ಸಾಕಾಗದಿದ್ದರೆ ನನಗೆ ತಿಳಿಸಿ. ತಾಲೂಕಿನಲ್ಲಿ ಇರುವ ಸಂಘ ಸಂಸ್ಥೆಗಳ ಜತೆಗೆ ವೈಯಕ್ತಿಕವಾಗಿಯೂ ನೆರವು ನೀಡಲಾಗುವುದು. ನಮಗೆ ಜನರ ಆರೋಗ್ಯ ಮುಖ್ಯ. ಅವರ ರಕ್ಷಣೆ ನಮ್ಮ ಕರ್ತವ್ಯ. ಅಧಿಕಾರಿಗಳು ಇದನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು.

    ಪಡಿತರ ವಿತರಣೆಯಲ್ಲಿ ಲೋಪ ಕೇಳಿ ಬರುತ್ತಿದೆ. ಕೆಲವರು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಅಂತಹ ಘಟನೆ ಸಂಭವಿಸಿದರೆ ಅಕ್ರಮ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸದ್ಯ ಪಟ್ಟಣದಲ್ಲಿರುವ ಕೋವಿಡ್ ಕೇರ್ ಸೆಂಟರ್‌ನೊಂದಿಗೆ ಹೆಚ್ಚುವರಿಯಾಗಿ ಸಂಕೇಶ್ವರ, ಪಾಶ್ಚಾಪುರ ಮತ್ತು ಸ್ಥಳೀಯ ಬಾಪೂಜಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಬೇಕು ಎಂದು ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಿದರು. ತಹಸೀಲ್ದಾರ್ ಡಾ.ಡಿ.ಎಚ್.ಹೂಗಾರ, ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಉಪಾಧ್ಯಕ್ಷ ಆನಂದ ಗಂಧ, ಡಿವೈಎಸ್ಪಿ ಜಾವೇದ್ ಇನಾಮದಾರ, ಸಿಪಿಐ ರಮೇಶ ಛಾಯಾಗೋಳ, ಪಿಎಸ್‌ಐ ಸಿದ್ರಾಮಪ್ಪ ಉನ್ನದ, ಗಣಪತಿ ಕೊಂಗನೊಳಿ, ತಾಪಂ ಇಒ ಬಿ.ಕೆ.ಲಾಳಿ, ಪ್ರೊಬೇಷನರಿ ಎಸಿ ಅಭಿಷೇಕ ವಿ., ಎಸ್.ಕೆ.ಹುಕ್ಕೇರಿ, ಉದಯ ಕುಡಚಿ, ಎ.ಬಿ.ಪಟ್ಟಣಶೆಟ್ಟಿ, ಮೋಹನ ದಂಡಿನ, ರಾಜಶೇಖರ ಪಾಟೀಲ, ಜಗದೀಶ ಈಟಿ, ಮೋಹನ ಜಾಧವ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts