More

    ವಿಶ್ವಕ್ಕೆ ಯೋಗ ಭಾರತದ ಅಮೂಲ್ಯ ಕೊಡುಗೆ;ಪವಾಡ ಶ್ರೀ ಬಸವಣ್ಣ ದೇವರಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಮತ

    ನೆಲಮಂಗಲ: ಆರೋಗ್ಯವಂತ ನಿರ್ಮಾಣದಲ್ಲಿ ಯೋಗ ಮಹತ್ವದ ಪಾತ್ರವಹಿಸಲಿದೆ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಪಟ್ಟರು.

    ನಗರದಲ್ಲಿನ ಮಠದ ಮೈದಾನದಲ್ಲಿ ಮಂಗಳವಾರ ವಿಜಯವಾಣಿ, ದಿಗ್ವಿಜಯ ಸುದ್ದಿವಾಹಿನಿ ಮತ್ತು ಸಾಧನಾ, ಅಂಜನಾದ್ರಿ ಯೋಗ ಅಧ್ಯಾತ್ಮ ಕೇಂದ್ರ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಯೋಗ ದಿನಾಚರಣೆಯಲ್ಲಿ ಮಾತನಾಡಿದರು.
    ಯೋಗ ಭಾರತೀಯರ ಅಮೂಲ್ಯ ಕೊಡುಗೆಯಾಗಿದೆ. ಆಧುನಿಕತೆಯ ಜೀವನಶೈಲಿ, ಆಹಾರ ಪದ್ಧತಿಗಳ ಅನುಸರಣೆಯಿಂದ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ ಯೋಗ ಸಂಜೀವಿನಿಯಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ರೂಢಿಸಿಕೊಂಡರೆ ಜೀವನದಲ್ಲಿ ಸಿದ್ಧಿಯನ್ನು ಪಡೆದು ಸಂತೃಪ್ತಿ ಪಡೆಯಬಹುದಾಗಿದೆ ಎಂದರು.

    ಕನ್ನಮಂಗಲ ಅಮ್ಮನಗುಡ್ಡ ಶ್ರೀ ನರಸಿಂಹ ಸ್ವಾಮೀಜಿ ಮಾತನಾಡಿ, ಮನುಷ್ಯನಲ್ಲಿ ಸದ್ಭಾವನೆಗಳನ್ನು ಬೆಳೆಸಿ ಸತ್ಕಾರ್ಯಗಳಿಗೆ ಪ್ರೇರೇಪಿಸುವ ಶಕ್ತಿ ಯೋಗಕ್ಕಿದೆ. ಆಧುನಿಕ ಯುಗದಲ್ಲಿ ಶಾಂತಿ ಹಾಗೂ ಒತ್ತಡ ರಹಿತ ಜೀವನ ನಡೆಸಲು ಯೋಗ ಸಹಕಾರಿ ಎಂದರು.
    ಮಂಗಳವಾರ ಬೆಳಗ್ಗೆ 5.45 ರಿಂದ 7.15 ರವರೆಗೆ ವಿವಿಧ ಯೋಗ ಕೇಂದ್ರಗಳ ಯೋಗಾಸಕ್ತರು, ಶಾಲಾ ಮಕ್ಕಳು ಯೋಗಾಸನ ಪ್ರದರ್ಶಿಸಿದರು. ಮೊದಲಿಗೆ ಸರಳ ವ್ಯಾಯಾಮ ನಂತರ ಸೂರ್ಯನಮಸ್ಕಾರ, ನಿಂತು, ಕುಳಿತು ಮಾಡುವ ಸರಳ ಯೋಗಾಭ್ಯಾಸದ ಜತೆಗೆ ಸಾಧನ ಯೋಗ ಕೇಂದ್ರದ ವಿವಿಧ ಶಾಖೆಯ ಯೋಗಪಟುಗಳು ಯೋಗಗುಚ್ಚ ಪ್ರದರ್ಶನ ಮಾಡಿದರು.

    ಸಹಯೋಗ ಮತ್ತು ಸಹಕಾರ : ಸಾಧನ ಯೋಗ ಮತ್ತು ಆಧ್ಯಾತ್ಮಿಕ ಕೇಂದ್ರದ ಜತೆಗೆ ಅದರ ವಿವಿಧ ಶಾಖೆಗಳು, ತಾಲೂಕು ಆಡಳಿತ, ನಗರಸಭೆ, ರೋಟರಿ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಯೋಗಾಭಿಮಾನಿಗಳು ಯೋಗ ದಿನಾಚರಣೆಗೆ ಸಹಕಾರ ನೀಡಿದರು.

    ಬಹುಮಾನ ವಿತರಣೆ: ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪ್ರಥಮದರ್ಜೆ ಕಾಲೇಜು ವಿಭಾಗದಲ್ಲಿ ಯೋಗದ ಮಹತ್ವ ಕುರಿತ ಪ್ರಬಂಧ, ಆಶುಭಾಷಣ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    ಸಾಧನಾ ಯೋಗ ಕೇಂದ್ರ ಯೋಗಚಾರ್ಯರಾದ ವಾದಿರಾಜ, ಸೀತಾಸುದೀಂದ್ರ, ಪಿ.ಕುಮಾರ್, ಲತಾರಂಗನಾಥ್, ಮೋಹನ್, ಆರ್.ಗೀತಾ, ರೋಟರಿ ಕಾರ್ಯದರ್ಶಿ ಕೆಂಪೇಗೌಡ, ನಗರಸಭೆ ನಾಮನಿರ್ದೆಶಿತ ಸದಸ್ಯೆ ರಾಜಮ್ಮ, ರವಿ, ಬಿಜೆಪಿ ಮಹಿಳಾಘಟಕ ಜಿಲ್ಲಾಧ್ಯಕ್ಷೆ ಸೌಮ್ಯಾ, ನಿರ್ದೇಶಕ ಮಹೇಶ್, ಮಾಜಿ ಅಧ್ಯಕ್ಷ ಸ್ಟುಡಿಯೋಮಂಜುನಾಥ್, ಮುಖಂಡರಾದ ರುಡ್‌ಸೆಟ್ ಮೋಹನ್, ಮಹೇಶ್ವರಿ, ಹೇಮಂತಕುಮಾರ್, ಶಾಂತರಾಜ್, ಜ್ಯೋತಿ, ಶಾಲಿನಿ, ದಿಲೀಪ್, ಕನಕರತ್ನ, ಜಯರಾಮು, ಶೀಲಾ, ಮಂಜುಳಾ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts