More

    ವಿಶ್ವಕ್ಕೆ ಪಸರಿಸಲಿ ಭಗವದ್ಗೀತೆಯ ಸಂದೇಶ- ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಆಶಯ

    ಮಂಗಳೂರು: ಭಾರತದ ಮಣ್ಣಿನ ಸತ್ವ ತತ್ವ ಒಳಗೊಂಡಿರುವ ಭಗವದ್ಗೀತೆಯನ್ನು ಇಡೀ ವಿಶ್ವಕ್ಕೆ ಪಸರಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಚಾಲಕ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ತಿಳಿಸಿದರು.

    ಬಾಂಬೇ ಸೌತ್ ಕೆನರಾ ಬ್ರಾಹ್ಮಿಣ್ಸ್ ಅಸೋಸಿಯೇಶನ್ (ಬಿಎಸ್‌ಕೆಬಿಎ) ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವತಿಯಿಂದ ಮುಂಬೈಯ ಸಯಾನ್ ಗೋಕುಲದ ಶ್ರೀ ಗೋಪಾಲಕೃಷ್ಣ ದೇವರ ಪ್ರತಿಷ್ಠಾಪನಾ ಮಹೋತ್ಸವದ ಪ್ರಥಮ ವಾರ್ಷಿಕೋತ್ಸವದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು,

    ಭಾರತದ ಆತ್ಮ, ಪ್ರಾಣ, ಉಸಿರು ಇರುವುದೇ ಧರ್ಮದಲ್ಲಿ. ಮಕ್ಕಳ ಸಂಸ್ಕಾರಯುತ ಬದುಕಿಗೆ ಧರ್ಮದ ಅರಿವು ಅಗತ್ಯ

    ದೇವಸ್ಥಾನಗಳು ಧರ್ಮದ ಅರಿವು ಮೂಡಿಸುವ ಶಾಲೆಗಳಾಗಿ ಮೂಡಿ ಬರಬೇಕು ಎಂದು ಅವರು ಹೇಳಿದರು.

    ಬಿಎಸ್‌ಕೆಬಿಎ ಅಧ್ಯಕ್ಷ ಡಾ.ಸುರೇಶ್ ಎಸ್.ರಾವ್ ಕಟೀಲು ಅಧ್ಯಕ್ಷತೆ ವಹಿಸಿದ್ದರು. ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ದೇವಾ ಟ್ರಸ್ಟ್‌ನ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ ಮುಖ್ಯ ಅತಿಥಿಯಾಗಿದ್ದರು. ದೇವಾಲಯದ ಕಾಷ್ಠಶಿಲ್ಪಿ ಹರೀಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

    ಬಿಎಸ್‌ಕೆಬಿಎ ಕಾರ್ಯದರ್ಶಿ ಎ.ಪಿ.ಕೆ.ಪೋತಿ, ಖಜಾಂಚಿ ಹರಿದಾಸ ಭಟ್, ಜತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ , ಪ್ರಶಾಂತ್ ಹೆರ್ಲೆ, ಗೋಪಾಲಕೃಷ್ಣ ಟ್ರಸ್ಟ್‌ನ ವಿಶ್ವಸ್ಥ ಸದಸ್ಯೆ ಶೈಲಿನಿ ರಾವ್ , ಬಾಲಕೃಷ್ಣ ಪಿ.ಭಂಡಾರಿ , ತೋನ್ಸೆ ವಿಜಯಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

    ಗೋಕುಲದ ಪ್ರಧಾನ ಆರ್ಚಕ ವೇದಮೂರ್ತಿ ಶ್ರೀನಿವಾಸ ಭಟ್ ಧರೆಗುಡ್ಡೆ ಮತ್ತು ಹಿರಿಯ ಪುರೋಹಿತ ವೇದಮೂರ್ತಿ ಗುರುರಾಜ ಉಡುಪ ಅವರ ಪ್ರಧಾನ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿತು. ಚಂದ್ರಶೇಖರ ಭಟ್ ಸ್ವಾಗತಿಸಿದರು. ವಿನೋದಿನಿ ರಾವ್ ಪ್ರಸ್ತಾವನೆಗೈದರು. ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್ ಸನ್ಮಾನಿತರನ್ನು ಪರಿಚಯಿಸಿದರು. ಹರಿದಾಸ ಭಟ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts