More

    ವಿಶ್ವಕರ್ಮ ಜಯಂತಿ

    ಸವಣೂರ: ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ ಶರಣರು, ದಾರ್ಶನಿಕರ ಜಯಂತಿಯನ್ನು ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ತಿಳಿಸಿದರು.

    ಪಟ್ಟಣದ ಕಂದಾಯ ಇಲಾಖೆ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

    ಶರಣರ ನಾಡು ಕರ್ನಾಟಕದಲ್ಲಿ ನಾವು ಜನಿಸಿರುವುದು ಪೂರ್ವ ಜನ್ಮದ ಪುಣ್ಯ. ಶರಣರ ಆದರ್ಶ ಅಳವಡಿಸಿಕೊಳ್ಳಬೇಕು. ಕರೊನಾ ಸಾಂಕ್ರಾಮಿಕ ರೋಗದ ಹತೋಟಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.

    ವಿಶ್ವಕರ್ಮ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಪೂರ್ವಾಚಾರಿ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.

    ಚಿದಾನಂದ ಬಡಿಗೇರ, ಮಹೇಂದ್ರ ಬಡಿಗೇರ, ಈಶ್ವರ ಅರ್ಕಸಾಲಿ, ದಾನಪ್ಪ ಬಡಿಗೇರ, ಪ್ರವೀಣ ಅರ್ಕಸಾಲಿ, ಮೌನೇಶ ಬಡಿಗೇರ, ಗಂಗಪ್ಪ ಕನ್ನೂರ, ಬಸವಂತಪ್ಪ ಬಡಿಗೇರ, ಚಂದ್ರಹಾಸ ಈಳಗೇರ, ಜಗದೀಶ ಈಳಗೇರ, ನಾಗರತ್ನ ಈಳಗೇರ, ಪ್ರಸಾದ ಈಳಗೇರ, ಕರವೇ ತಾಲೂಕು ಘಟಕದ ಅಧ್ಯಕ್ಷ ಪರಶುರಾಮ ಈಳಗೇರ, ರಾಮಣ್ಣ ಅಗಸರ, ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts