More

    ವಿಶೇಷ ಆರ್ಥಿಕ ಅನುದಾನ ಘೋಷಿಸಿ

    ಹುಣಸೂರು: ರಾಜ್ಯ ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ ಆದಿವಾಸಿಗಳ ಸಮಗ್ರ ಅಭಿವೃದ್ಧಿಗಾಗಿ 6,197 ಕೋಟಿ ರೂ.ಗಳ ವಿಶೇಷ ಆರ್ಥಿಕ ಅನುದಾನ ಘೋಷಿಸಬೇಕೆಂದು ಆದಿವಾಸಿ ಪಾರ್ಲಿಮೆಂಟ್ ಸಮಿತಿ, ಬುಡಟ್ಟು ಕೃಷಿಕರ ಸಂಘ ಮತ್ತು ಆದಿವಾಸಿ ಮಹಿಳಾ ಸಂಘ ಸರ್ಕಾರವನ್ನು ಒತ್ತಾಯಿಸಿವೆ.
    ಮಂಗಳವಾರ ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಕುರಿತು ಮಾತನಾಡಿದ ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ, ಕಳೆದ ತಿಂಗಳು ಹಮ್ಮಿಕೊಂಡಿದ್ದ ಆದಿವಾಸಿ ಪಾರ್ಲಿಮೆಂಟಿನ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ವಿವಿಧ ಇಲಾಖೆಗಳಿಂದ ವಿಶೇಷ ಆರ್ಥಿಕ ನೆರವನ್ನು ಬಜೆಟ್‌ನಲ್ಲಿ ಹೆಚ್ಚುವರಿಯಾಗಿ ಘೋಷಿಸಲು ವಿನಂತಿಸಲಾಗಿದೆ ಎಂದರು.
    ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಮಾತನಾಡಿ, ಆದಿವಾಸಿಗಳ ಏಳಿಗೆಗೆ ನೆರವಾಗಲೆಂಬ ಕಾರಣಕ್ಕಾಗಿ ಹೈಕೋರ್ಟ್ ಆದೇಶದಂತೆ 3,418 ಕುಟುಂಬಗಳ ಪುನರ್ವಸತಿಗೆ ರೂ. 512 ಕೋಟಿ, ಹುಣಸೂರಿನಲ್ಲಿ ಆದಿವಾಸಿ ವಿವಿ ತೆರೆಯಲು ರೂ.100 ಕೋಟಿ, ಆದಿವಾಸಿ ಅಭಿವೃದ್ಧಿ ಮಂಡಳಿ ರಚಿಸಿ ಅದರ ಮೂಲಕ ಆದಿವಾಸಿಗಳಿಗೆ ಆರ್ಥಿಕ ನೆರವು ನೀಡಲು ರೂ.900 ಕೋಟಿ, ಕೇಂದ್ರ ಸರ್ಕಾರ ದುರ್ಬಲ ಬುಡಕಟ್ಟುಗಳಿಗೆ(ಪಿವಿಟಿಜಿ) ವಿಶೇಷ ಅನುದಾನ ಘೋಷಿಸಿರುವಂತೆ ಕರ್ನಾಟಕದಲ್ಲಿಯೂ ರೂ.500 ಕೋಟಿ ಬಜೆಟ್‌ನಲ್ಲಿ ಮೀಸಲಾಗಿಡಬೇಕು ಎಂದರು.
    ಆದಿವಾಸಿ ಪ್ರದೇಶಗಳನ್ನು ಹಾಗೂ ಅವರ ಪರಂಪರೆಯ ಕಾಡುಗಳನ್ನು ಅನುಸೂಚಿತ ಪ್ರದೇಶಗಳೆಂದು ಘೋಷಿಸಬೇಕು. ಕರ್ನಾಟಕದಲ್ಲಿ 1 ಲಕ್ಷ ಆದಿವಾಸಿ ಕುಟುಂಬಗಳಿಗೆ ಅರಣ್ಯ ಭೂಮಿ ಹಕ್ಕು ನೀಡಲು, ಪ್ರಾಯೋಗಿಕವಾಗಿ ಹುಣಸೂರು ನಗರದಲ್ಲಿ ಒಂದು ಸುಸಜ್ಜಿತ ಹಾಡಿ ರೂಪಿಸಿ 100 ದುರ್ಬಲ ಬುಡಕಟ್ಟುಗಳಿಗೆ ನಗರದಲ್ಲಿ ವಾಸಿಸುವ ಅವಕಾಶ ನೀಡಬೇಕು ಎಂದರು.
    ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಗಿರಿಜಾ ಹಾಗೂ ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ನಿವೃತ್ತ ಪ್ರಾಂಶುಪಾಲ ಎಚ್.ಆರ್.ಸಿದ್ದೇಗೌಡ, ಪ್ರಕಾಶ್, ಬೊಮ್ಮಿ, ವಿಠಲ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts