More

    ವಿವಿಧೆಡೆ ವಾಲ್ಮೀಕಿ ಜಯಂತಿ ಆಚರಣೆ

    ಯಳಂದೂರು: ತಾಲೂಕಿನಾದ್ಯಂತ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಭಾನುವಾರ ಸರಳವಾಗಿ ಆಚರಿಸಲಾಯಿತು.

    ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎನ್.ಮಹೇಶ್ ಮಾತನಾಡಿ, ವಾಲ್ಮೀಕಿ ಮಹರ್ಷಿ ಜಯಂತಿಯ ಶುಭ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಇದ್ದ ಮೀಸಲಾತಿಯನ್ನು ಶೇ.3ರಿಂದ ಶೇ.7 ಕ್ಕೆ ಏರಿಸಿದೆ. ಹಾಗಾಗಿ ಈ ಜನಾಂಗಕ್ಕೆ ಇನ್ನಷ್ಟು ಸವಲತ್ತುಗಳು ಲಭಿಸುತ್ತದೆ. ವಿಶ್ವದ ಮಹಾನ್ ಗ್ರಂಥಗಳ ಸಾಲಿನಲ್ಲಿ ವಾಲ್ಮೀಕಿ ಮಹರ್ಷಿಗಳ ರಾಮಾಯಣವೂ ಒಂದಾಗಿರುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಅರಿಯುವ, ಇದನ್ನು ಪಾಲಿಸುವುದೇ ನಾವು ಇಂತಹ ವ್ಯಕ್ತಿಗಳಿಗೆ ನೀಡುವ ಗೌರವವಾಗಿದೆ ಎಂದರು.

    ಪಟ್ಟಣ ಪಂಚಾಯಿತಿ ಕಚೇರಿ, ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು. ಇಒ ಉಮೇಶ್, ಬಿಇಒ ಕಾಂತರಾಜು, ಮುಖ್ಯಾಧಿಕಾರಿ ಮಲ್ಲೇಶ್, ಪಪಂ ನಾಮ ನಿರ್ದೇಶಿತ ಸದಸ್ಯರಾದ ನಿಂಗರಾಜು, ಮಹೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಎಂ. ಮಂಜುನಾಥ್, ಶಿಕ್ಷಣ ಸಂಯೋಜಕ ಶಿವಲಂಕಾರ್, ಮಹೇಶ್ ಸೇರಿದಂತೆ ಅನೇಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts