More

    ವಿರೋಧಿಗಳು ಹೆಚ್ಚಿದಷ್ಟೂ ಆರ್​ಎಸ್​ಎಸ್ ಬಲಿಷ್ಠ

    ಲಕ್ಷ್ಮೇಶ್ವರ: ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಸುಸಂಸ್ಕೃತ, ಸಂಪದ್ಭರಿತ ದೇಶ. ಈ ಪವಿತ್ರ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬರೂ ದೇಶಾಭಿಮಾನಿಯಾಗಿರಬೇಕು ಎಂದು ಉತ್ತರ ಕರ್ನಾಟಕ ಪ್ರಾಂತ ಧರ್ಮ ಜಾಗರಣ ವೇದಿಕೆಯ ಸಹ ಸಂಯೋಜಕ ಹನುಮಂತ ಮಳಲಿ ಹೇಳಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಶನಿವಾರ ಏರ್ಪಡಿಸಿದ್ದ ಪಥಸಂಚಲನ ಮತ್ತು ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

    ಡಾ.ಕೇಶವ ಬಲಿರಾಂ ಹೆಡಗೆೆವಾರ್ ಅವರು ಹಿಂದುಗಳನ್ನು ಮತ್ತು ಹಿಂದು ರಾಷ್ಟ್ರದ ಪರಿಕಲ್ಪನೆಯನ್ನು ಜಾಗೃತಗೊಳಿಸಲು ಸಂಘವನ್ನು ಹುಟ್ಟು ಹಾಕಿದ್ದಾರೆ. ಅವರ ಕನಸಿನಂತೆ ಪ್ರತಿಯೊಬ್ಬರಲ್ಲಿಯೂ ರಾಷ್ಟ್ರಾಭಿಮಾನ, ಸಂಸ್ಕೃತಿ, ಧರ್ಮ, ಪರಸ್ಪರ ಸ್ನೇಹ, ಸಹಬಾಳ್ವೆ, ಶಿಸ್ತುಬದ್ಧ ಸಮಾಜ ನಿರ್ವಣವಾಗಬೇಕಿದೆ. ವಸುಧೈವ ಕುಟುಂಬಕಂ ಎಂಬ ವಿಶಾಲಾರ್ಥದಡಿ ಆರ್​ಎಸ್​ಎಸ್ ಸಂಘಟನೆಯು ಯುವಕರನ್ನು ಶಾರೀರಿಕ, ಬೌದ್ಧಿಕ ಮತ್ತು ಮಾನಸಿಕ ಸದೃಢರನ್ನಾಗಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

    ಸಂಘದ ವಿರೋಧಿಗಳು ಹೆಚ್ಚಿದಷ್ಟೂ ಸಂಘವು ಬಲಿಷ್ಠವಾಗುತ್ತಿದೆ. ಪ್ರಪಂಚದ 40 ದೇಶಗಳಲ್ಲಿ ಸಂಘದ ಸ್ವಯಂಸೇವಕರು ಸೇವೆಯಲ್ಲಿದ್ದಾರೆ. ಕೆಲವು ದೇಶದ್ರೋಹಿ ರಾಜಕಾರಣಿಗಳು ವೋಟಿನ ಆಸೆಗಾಗಿ ಮತಾಂಧರನ್ನು, ದೇಶದ್ರೋಹಿಗಳನ್ನು ಓಲೈಸುತ್ತಿದ್ದಾರೆ. ದೇಶಭಕ್ತರ ಸಂಘಟನೆಯಾದ ಆರ್​ಎಸ್​ಎಸ್​ ವಿರೋಧಿಸುವ ನಾಟಕ ಮಾಡá-ತ್ತಿದ್ದಾರೆ. ಆದರೆ ಹಿಂದುಗಳು ಎಂದಿಗೂ ದೇಶದ್ರೋಹದ ಕೆಲಸ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.

    ದೇಶದ ಬಗ್ಗೆ ಗೌರವ, ಪ್ರೀತಿ, ಸ್ವಾಭಿಮಾನ ರಕ್ತಗತವಾಗಿಯೇ ಬಂದಿರುತ್ತದೆ. ಸಿನಿಮಾ ಹೀರೋಗಳು ನೀಡುವ ಗುಟ್ಕಾ, ಮದ್ಯ ಮಾರಾಟದ ಜಾಹೀರಾತುಗಳಿಗೆ ಯುವಕರು ಮರುಳಾಗಿ ದುಶ್ಚಟಗಳಿಗೆ ದಾಸರಾಗಬಾರದು. ಆರ್​ಎಸ್​ಎಸ್​ನ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ಭಾರತವನ್ನು ವಿಶ್ವಗುರುವಾಗಿಸುವಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.

    ಮುಖ್ಯ ಅತಿಥಿಯಾಗಿದ್ದ ಬಸವರಾಜ ಬೆಂಡಿಗೇರಿ ಮಾತನಾಡಿ, ಸಂಘದ ಕಾರ್ಯಗಳು ಯಾವುದೇ ಸಮಾಜ, ಧರ್ಮದ ವಿರುದ್ಧವೂ ಅಲ್ಲ , ಯುವಕರಲ್ಲಿ ದೇಶಾಭಿಮಾನ, ಸಂಸ್ಕೃತಿ, ಸಂಪ್ರದಾಯ, ಶಿಸ್ತುಬದ್ಧ ಜೀವನ ರೂಪಿಸುವುದಾಗಿದೆ. ಇದಕ್ಕಾಗಿ ಎಲ್ಲ ವರ್ಗದ ಜನರಿಗೆ ತಿಳಿವಳಿಕೆ ಮೂಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಸಂಘವು ಮಾಡುತ್ತಿದೆ ಎಂದರು.

    ವರ್ಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ರಮೇಶ ನವಲೆ ಮಾತನಾಡಿ, ಸ್ವಯಂ ಸೇವಕರಿಗೆ ಶಾರೀರಿಕ, ಬೌದ್ಧಿಕ ಶಿಕ್ಷಣದ ಜತೆಗೆ ಸಮತೆ, ರಾಷ್ಟ್ರೀಯತೆಯ ಶಿಕ್ಷಣ ನೀಡಲಾಗುತ್ತಿದೆ. ದೇಹ ನಶ್ವರ ರಾಷ್ಟ್ರ ಶಾಶ್ವತ ಎಂಬ ಪರಿಕಲ್ಪನೆ ಸ್ವಯಂ ಸೇವಕರದ್ದಾಗಿದೆ. ಇಲ್ಲಿ ಶಿಕ್ಷಣ ಪಡೆದವರ ಆಚಾರ-ವಿಚಾರಗಳು ಸಮಾಜಮುಖಿಯಾಗುತ್ತಿವೆ. ಯುವಕರು ಭಾರತಮಾತೆ, ಜನ್ಮದಾತೆ, ಭೂಮಿ ತಾಯಿ ಮತ್ತು ಗೋಮಾತೆಯ ಬಗ್ಗೆ ಗೌರವ ಭಾವನೆ ಹೊಂದಬೇಕು ಎಂದು ಕರೆ ನೀಡಿದರು. ಸಂಸ್ಕಾರ, ಧರ್ಮ, ಸಂಪ್ರದಾಯ, ಸಂಸ್ಕೃತಿ ಹೊಂದಿದ ಭವ್ಯ ಭಾರತ ರಾಷ್ಟ್ರ ನಿರ್ವಣಕ್ಕಾಗಿ ಎಲ್ಲರೂ ತನು ಮನ ಧನಗಳ ಸಹಾಯ ಮತ್ತು ಸಮರ್ಪಣಾ ಮನೋಭಾವ ಮೆರೆಯಬೇಕಾಗಿದೆ ಎಂದರು.

    ಜಿಲ್ಲಾ ಕಾರ್ಯವಾಹ ಮಂಜುನಾಥ ಇಟಗಿ, ಶಾರೀರಿಕ ಪ್ರಮುಖ ಶಿವಕುಮಾರ ದೇಸಣ್ಣವರ, ಗಜಾನನ ಹೆಗಡೆ, ಮೌನೇಶ ಬಡಿಗೇರ, ರಮೇಶ ಶೆಟ್ಟಿ, ಸುರೇಶ ಮೆಡ್ಲೇರಿ, ಡಾ.ಚಂದ್ರು ಲಮಾಣಿ, ಗುರುನಾಥ ದಾನಪ್ಪನವರ, ಡಾ.ಪ್ರಕಾಶ ಹೊಸಮನಿ, ಗಂಗಾಧರ ಮೆಣಸಿನಕಾಯಿ, ಶ್ರೀಕಾಂತ ಪೂಜಾರ, ಆರ್.ವಿ.ವೆರ್ಣೆಕರ, ಚಿಕ್ಕರಸ ಪೂಜಾರ, ಬಸವರಾಜ ಚಕ್ರಸಾಲಿ, ಈರಣ್ಣ ಸಿಂಗಾಡಿ, ರಾಜು ಸಾತಪುತೆ, ಸಂದೇಶ ಬೋಮಲೆ, ಕೊಟ್ರೇಶ ಅಳವಂಡಿ, ಶಿವಲಿಂಗ ಅಡರಕಟ್ಟಿ, ಅನಿಲ ಮುಳಗುಂದ, ದಶರಥ ಕೋಟೆಗೌಡ್ರ ಪಾಲ್ಗೊಂಡಿದ್ದರು. ಜಿಲ್ಲಾ ಬೌದ್ಧಿಕ ಪ್ರಮುಖ ಉಮೇಶ ಮಡಿವಾಳರ ನಿರೂಪಿಸಿದರು. ತಾಲೂಕಾ ಕಾರ್ಯವಾಹ ಚಂದ್ರಶೇಖರ ಹಂಪಣ್ಣವರ ವಂದಿಸಿದರು.

    ಕಾರ್ಯಕ್ರಮಕ್ಕೂ ಮುನ್ನ ಸ್ವಯಂ ಸೇವಕರು ಕರಾಟೆ, ದಂಡ ಪ್ರಯೋಗ, ಯೋಗ ಸೇರಿ ವಿವಿಧ ಕಸರತ್ತುಗಳನ್ನು ಪ್ರದರ್ಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts