More

    ವಿಪತ್ತು ನಿರ್ವಹಣೆ ಸಾಮರ್ಥ್ಯ ರೂಢಿಸಿಕೊಳ್ಳಿ

    ಕುಶಾಲನಗರ: ತುರ್ತು ಸಂದರ್ಭ ಮತ್ತು ವಿಪತ್ತುಗಳನ್ನು ಎದುರಿಸಲು ವಿದ್ಯಾರ್ಥಿಗಳು ವಿಶೇಷ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು ಎಂದು ಸೈನಿಕ ಶಾಲೆ ಪ್ರಾಂಶುಪಾಲ ಕರ್ನಲ್ ಜಿ.ಕಣ್ಣನ್ ಹೇಳಿದರು.

    ಶಾಲಾ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಆಯೋಜಿಸಿದ್ದ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಾಥಮಿಕ ಚಿಕಿತ್ಸೆ, ಮುನ್ನೆಚ್ಚರಿಕೆ ಕೌಶಲ, ಸಂಕಷ್ಟ ಎದುರಿಸುವಿಕೆ ಕಲಿಯುವುದು ಜೀವನಕ್ಕೆ ಅನಿವಾರ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಬೇಕು ಎಂದರು.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಜಿಲ್ಲಾ ಘಟಕದ ಮುಖ್ಯಾಧಿಕಾರಿ ಆರ್. ಎಂ.ಅನನ್ಯಾ ವಾಸುದೇವ್, ಇನ್ಸ್‌ಪೆಕ್ಟರ್ ಶಾಂತಿಲಾಲ್ ಜಟಿಯಾ, ಶಾಲೆಯ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪ್ರಕಾಶರಾವ್, ಉಪ ಪ್ರಾಂಶುಪಾಲ ಮನ್‌ಪ್ರೀತ್ ಸಿಂಗ್, ಎನ್‌ಸಿಸಿ ಸಿಬ್ಬಂದಿ ಇದ್ದರು. ಪ್ರತ್ಯೇಕವಾದ ದೃಶ್ಯಾವಳಿ ಮತ್ತು ಪ್ರಾತ್ಯಕ್ಷಿಕೆ ಮೂಲಕ ಅಪಘಾತದ ಸಂದರ್ಭ ರಕ್ತಸ್ರಾವ ತಡೆಗಟ್ಟುವ ಬಗೆ, ಹೃದಯಾಘಾತ, ಬೆಂಕಿ ನಂದಿಸುವಿಕೆ, ನೆರೆ-ಬರ ಸಂದರ್ಭಗಳು, ಅಗ್ನಿ ದುರಂತ, ಭೂಕಂಪ ಮತ್ತಿತರ ನೈಸರ್ಗಿಕ ವಿಕೋಪ ಘಟಿಸಿದಾಗ ಜನರ ಜೀವರಕ್ಷಣೆ ತಂತ್ರ ಮತ್ತು ತುರ್ತು ಚಿಕಿತ್ಸೆ ನಡೆಸುವ ಕುರಿತು ವಿವರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts