More

    ವಿದ್ಯೆ ನೀಡಿದ ಗುರುಗಳ ಋಣ ತೀರಿಸಲಾಗದು

    ಹುಕ್ಕೇರಿ: ಬದುಕಿನ ಬಂಡೆಗೆ ಆಸರೆಯಾಗುವ ಅಕ್ಷರ ಮತ್ತು ವಿದ್ಯೆ ನೀಡಿದ ಗುರುವಿನ ಋಣ ಎಂದಿಗೂ ತೀರಿಸಲಾಗದ್ದು. ಮುಂದೆ ಗುರಿ, ಹಿಂದೆ ಗುರು ಇದ್ದರೆ ಬದುಕಿನಲ್ಲಿ ಯಶಸ್ಸು ಸಾಧ್ಯ ಎಂದು ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದರು.

    ಪಟ್ಟಣದ ಮಹಾವೀರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಪುನರ್ಮಿಲನ ಹಾಗೂ ಗುರುವಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಎಸ್.ಕೆ ಹೈಸ್ಕೂಲಿನಲ್ಲಿ 1986-87 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರು ಬಳಗ ಸತ್ಕರಿಸುವ ಮೂಲಕ ದೇಶದ ಸಂಸ್ಕೃತಿ ಗೌರವಿಸಿದಂತಾಗಿದೆ ಎಂದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಹಾಗೂ ಹಳೆಯ ವಿದ್ಯಾರ್ಥಿ ಮಹಾವೀರ ನಿಲಜಗಿ ಮತ್ತು ರಾಜು ಕುರಂದವಾಡೆ ಮಾತನಾಡಿ, ಜನ್ಮ ನೀಡಿದ ತಂದೆ-ತಾಯಿ ಮತ್ತು ವಿದ್ಯೆ ಕಲಿಸಿದ ಗುರುವನ್ನು ಗೌರವಿಸುವುದರಿಂದ ನಮ್ಮ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ನಮ್ಮ ಎಲ್ಲ ಸ್ನೇಹಿತರು ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು. ಗುರು ಬಳಗ, ಯೋಧರು, ಅತಿಥಿ ಹಾಗೂ ಸಂಘಟಕ ಮಹಾವೀರ ನಿಲಜಗಿ ದಂಪತಿ ಸತ್ಕರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಾವೀರ ನಿಲಜಗಿ ಅವರ ಕುರಿತು ಪ್ರಕಟಿತ ಯಶೋಗಾಥೆಯ ಪುಸ್ತಕ ಬಿಡುಗಡೆ, ಬನಶಂಕರಿ ನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ ಭರತ ನಾಟ್ಯ ಕಾರ್ಯಕ್ರಮ ಜರುಗಿತು. ಪತ್ರಕರ್ತ ಸಿದ್ದು ಕುರಂದವಾಡೆ ಉಪನ್ಯಾಸ ನೀಡಿದರು. ಬಿ.ಪಿ.ಹಂದಿಗುಂದ, ಎಸ್.ಐ.ಸಂಬಾಳ, ಎಸ್.ಬಿ.ಬುರ್ಜಿ, ಬಿ.ಎಸ್.ಮುನ್ನೋಳಿ, ಬಿ.ಎಸ್.ಮಗದುಮ್ಮ, ಎಸ್.ಆರ್.ನಾವಲಗಿ, ಸಿ.ಬಿ.ಬಾಗೇವಾಡಿ, ಬಿ.ಬಿ.ರಜಪೂತ, ಎಸ್.ಎಸ್.ಹವಾಲ್ದಾರ, ಎಂ.ಎಸ್.ಯಕ್ಸಂಬಿ, ಎಸ್.ವಿ.ಅಥಣಿ ಮತ್ತಿತರರಿದ್ದರು. ಶರ್ಮಿಳಾ ಬಾಳಿಕಾಯಿ ಸ್ವಾಗತಿಸಿದರು. ಕೆ.ಕೆ.ಪಾಟೀಲ, ಎಂ.ಬಿ.ನಾಯಿಕ ನಿರೂಪಿಸಿದರು. ಬಸವರಾಜ ನಿಲುವಂಗಿಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts