More

    ವಿದ್ಯುತ್ ದರ ಹೆಚ್ಚಳಕ್ಕೆ ಗ್ರಾಹಕರ ಆಕ್ಷೇಪ

    ಕಲಬುರಗಿ: 2020-21ರಲ್ಲಿ ಪ್ರತಿ ಯೂನಿಟ್ಗೆ 74 ಪೈಸೆ ಹೆಚ್ಚಿಸಬೇಕೆಂಬ ಜೆಸ್ಕಾಂ ಪ್ರಸ್ತಾವನೆಗೆ ಯಾವುದೇ ಕಾರಣಕ್ಕೂ ಮನ್ನಣೆ ನೀಡಬಾರದು ಎಂಬ ಒಕ್ಕೊರಲ ಒತ್ತಾಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಕರೆದಿದ್ದ ಸಾರ್ವಜನಿಕರ ಅಹವಾಲು ಆಲಿಕೆ ಸಭೆಯಲ್ಲಿ ಕೇಳಿಸಿತು.
    ವಿದ್ಯುತ್ ದರ ಪರಿಷ್ಕರಣೆ ಮತ್ತು ಕಳೆದ ಸಾಲಿನ ಕಾರ್ಯನಿರ್ವಹಣೆ ಬಗ್ಗೆ ಆಯೋಗದ ಅಧ್ಯಕ್ಷ ಶಂಭುದಯಾಳ್ ಮೀನಾ, ಸದಸ್ಯರಾದ ಎಚ್.ಎಂ. ಮಂಜುನಾಥ ಮತ್ತು ಎಂ.ಡಿ. ರವಿ ಎದುರು ಬಹುತೇಕರು ವಿದ್ಯುತ್ ದರ ಹೆಚ್ಚಳವನ್ನು ವಿರೋಧಿಸಿದರು.
    ಆರಂಭದಲ್ಲಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ.ರಾಗಪ್ರಿಯಾ ಮಾತನಾಡಿ, ನಷ್ಟ ಸರಿದೂಗಿಸಲು ಎಲ್ಲ ತೆರನಾದ ಗ್ರಾಹಕರಿಗೆ ಅನ್ವಯಿಸುವಂತೆ ಯೂನಿಟ್ಗೆ 74 ಪೈಸೆ ದರ ಹೆಚ್ಚಿಸಲು ಕೋರಿ ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಿದರು. ಪಂಪ್ಸೆಟ್ ಹೊರತುಪಡಿಸಿ ಉಳಿದ ಗ್ರಾಹಕರಿಗೆ ನಿಗದಿತ ಶುಲ್ಕದಲ್ಲಿ 10 ರೂ. ಮತ್ತು ನೀರಾವರಿ ಪಂಪ್ಸೆಟ್ಗಳಿಗೆ ಪ್ರತಿ ಎಚ್ಪಿಗೆ 20 ರೂ. ಹೆಚ್ಚಿಸಿ ಆದೇಶಿಸಬೇಕು ಎಂದರು.
    ಪ್ರಮುಖರಾದ ಸುಭಾಷ, ದೀಪಕ ಗಾಲಾ, ಸಂಗಮನಾಥ ಹಿರೇಗೌಡ, ಸಿದ್ದು ಹಿರೇಮಠ, ಎಚ್ಕೆಸಿಸಿಐನ ಚನ್ನಬಸಯ್ಯ ನಂದಿಕೋಲಮಠ, ಮಹ್ಮದ್ ಆರೀಫ್, ಬಿ.ಉಮಾಪತಿ, ಪಂಪಾಪತಿ, ಹಣಮಂತ ಲಿಂಗಸೂಗೂರ, ತಮ್ಮಣ್ಣ ಬಾಗೇವಾಡಿ ಸೇರಿ 38ಕ್ಕೂ ಹೆಚ್ಚಿನ ಜನ ದರ ಏರಿಕೆಗೆ ಆಕ್ಷೇಪಿಸಿ ಅಹವಾಲು ದಾಖಲಿಸಿದರು.
    ಬಳಿಕ ಪತ್ರಕರ್ತರೊಂದಿಗೆ ಮತನಾಡಿದ ಆಯೋಗದ ಅಧ್ಯಕ್ಷ ಎಸ್. ಡಿ. ಮೀನಾ, ಪ್ರತಿಯೊಂದು ಕಂಪನಿ ಬೇರೆ ರೀತಿಯಾಗಿ ಬೆಲೆ ಏರಿಕೆ ಪ್ರಸ್ತಾವನೆ ಸಲ್ಲಿಸಿವೆ. ಇನ್ನೂ ಎರಡು ಕಡೆ ಸಭೆ ನಡೆಸಿದ ಬಳಿಕ ಮಾರ್ಚ ಅಂತ್ಯದಲ್ಲಿ ಶಿಫಾರಸಿನ ಆದೇಶ ಹೊರಡಿಸಲಾಗುವುದು ಎಂದರು.
    ಜೆಸ್ಕಾಂ ಪ್ರಧಾನ ವ್ಯವಸ್ಥಾಪಕಿ ಪ್ರಮೀಳಾ ಎಂ.ಕೆ. ಇತರರಿದ್ದರು.

    ಸಮಸ್ಯೆಗೆ ತಕ್ಷಣ ಸ್ಪಂದಿಸಲು ಸೂಚನೆ
    ಗ್ರಾಹಕರು ಸಣ್ಣಪುಟ್ಟ ಸಮಸ್ಯೆ ಹೇಳಿಕೊಂಡು ಬಂದಾಗ ತಕ್ಷಣ ಸ್ಪಂದಿಸುವತ್ತ ಗಮನ ಕೊಡಿ ಎಂದು ಕೆಇಆರ್ಸಿ ಅಧ್ಯಕ್ಷ ಶಂಭುದಯಾಳ್ ಮೀನಾ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ನಿಮ್ಮ ಕಾರ್ಯಶೈಲಿ ಬದಲಾಗಬೇಕು. ಇಂದಿನ ಸಭೆಯಲ್ಲಿ ಕೆಲವರು ಧನ್ಯವಾದ ಹೇಳಲು ಬಂದಿದ್ದಾರೆ. ಇಂಥವರ ಪ್ರಮಾಣ ಹೆಚ್ಚುವಂತೆ ಪರಿಣಾಮಕಾರಿಯಾಗಿ ಕೆಲಸ ಮಾಡಿ. ಕಾಲ-ಕಾಲಕ್ಕೆ ಗ್ರಾಹಕರ ಸಭೆ ಕರೆದು ದೂರು-ದುಮ್ಮಾನ ಆಲಿಸಿ. ಕೈಗಾರಿಕಾ ವಸಾಹತುಗಳಲ್ಲಿ ಸಭೆ ನಡೆಸಿ ಸಮಸ್ಯೆ ಆಲಿಸಿ. ಪ್ರತಿಯೊಬ್ಬ ಅಧಿಕಾರಿ ಸ್ಥಳಕ್ಕೆ ಭೇಟಿ, ಕ್ಷೇತ್ರ ಕಾರ್ಯಕ್ಕೆ ಆದ್ಯತೆ ನೀಡಬೇಕು, ಲೈನ್ಮನ್ಗಳಿಗೆ ನೀಡಿರುವ ಸುರಕ್ಷತಾ ಸಲಕರಣೆಗಳ ವಿವರವನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿ ಎಂದು ನಿರ್ದೇಶನ ನೀಡಿದರು.

    ಆಯೋಗದ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಸುರಕ್ಷಾ ಸಲಕರಣೆ ಇಲ್ಲದೆ ಕೆಲಸ ಮಾಡುತ್ತಿರುವವರು ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರ ಖಾಸಗಿ ಕಾರ್ಮಿಕರು. ಅವರು ಜೆಸ್ಕಾಂ ನೌಕರರಲ್ಲ, ಸಕರ್ಾರದ ಮುಖ್ಯಕಾರ್ಯದರ್ಶಿ ಹೇಳಿದಂತೆ ಬೀದಿ ದೀಪ ಮತ್ತು ನೀರು ಸರಬರಾಜು ಸ್ಥಾವರಗಳಿಗೂ ಮೀಟರ್ ಅಳವಡಿಸಲಾಗುವುದು. ಮೀಟರ್​ಳಿಗೆ ಪ್ಲಾಸ್ಟಿಕ್ ಬದಲಿಗೆ ಮೆಟಲ್ ಬಾಕ್ಸ್ ಅಳವಡಿಸಲಾಗುತ್ತಿದೆ.
    | ಡಾ.ರಾಗಪ್ರಿಯಾ
    ಜೆಸ್ಕಾಂ ಎಂಡಿ

    ಬಹುಕೋಟಿ ಹಗರಣ ತಪ್ಪಿತಸ್ಥರ ವಜಾಗೊಳಿಸಿ
    ಜೆಸ್ಕಾಂನಲ್ಲಿ 2015-16ರಲ್ಲಿ ನಡೆದಿದೆ ಎನ್ನಲಾಗುವ ಬಹುಕೋಟಿ ಹಗರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಸಾರ್ವಜನಿಕ ಹೋರಾಟ ಸಮಿತಿ ಅಧ್ಯಕ್ಷ ತಮ್ಮಣ್ಣ ಬಾಗೇವಾಡಿ ಆಗ್ರಹಿಸಿದರು. ಈ ಹಿಂದೆ 180 ಕೋಟಿ ರೂ. ದುರುಪಯೋಗವಾಗಿದೆ. ಆಗಿನ ಎಂಡಿ, ಸಿಇ ಸೇರಿ 294 ಅಧಿಕಾರಿ ಮತ್ತು ಸಿಬ್ಬಂದಿ ಶಾಮೀಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೆಪಿಟಿಸಿಎಲ್ನಿಂದ ತಮಗೆ ಪತ್ರ ಬಂದಿದೆ. ಪತ್ರ ಬಂದು ಆರು ತಿಂಗಳಾದರೂ ಯಾರನ್ನೂ ಸೇವೆಯಿಂದ ವಜಾ ಅಥವಾ ಅಮಾನತು ಮಾಡಿಲ್ಲ ಎಂದು ವಿಷಾದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts