More

    ವಿದ್ಯುತ್ ಕಂಪನಿ ಖಾಸಗೀಕರಣ ಬೇಡ

    ಮುಂಡರಗಿ: ವಿದ್ಯುತ್ ವಿತರಣೆ ಕಂಪನಿಗಳ ಖಾಸಗೀಕರಣ ವಿರೋಧಿಸಿ, ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘ ಮತ್ತು ಸಂಘ ಸಂಸ್ಥೆಗಳ ಒಕ್ಕೂಟದ ಆಶ್ರಯದಲ್ಲಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

    ಹೆಸ್ಕಾಂ ಎಇಇ ಪಾಂಡುರಂಗ ತಳವಾರ ಮಾತನಾಡಿ, ‘ರಾಜ್ಯ ಸಂಘಟನೆ ಆದೇಶದ ಮೇರೆಗೆ ನಾವೆಲ್ಲ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿ ಮತ್ತೆ ಕೆಲಸಕ್ಕೆ ಹಾಜರಾಗುತ್ತೇವೆ. ವಿದ್ಯುತ್ ವಿತರಣೆ ಕಂಪನಿ ಖಾಸಗೀಕರಣಗೊಳ್ಳುವುದರಿಂದ ಉದ್ಯೋಗ ಕಡಿತವಾಗುತ್ತವೆ. ಬಂಡವಾಳ ಶಾಹಿಗಳ ಕೈಯಲ್ಲಿ ವಿತರಣೆ ವ್ಯವಸ್ಥೆ ಹೋದರೆ ರೈತರು ತೊಂದರೆ ಅನುಭವಿಸಬೇಕಾಗುತ್ತದೆ’ ಎಂದರು.

    ಹೆಸ್ಕಾಂ ಸಿಬ್ಬಂದಿ ಕೆ.ಜಿ. ಉಪ್ಪಾರ, ವಿ.ಬಿ. ಪಾಟೀಲ, ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷ ದೇವಪ್ಪ ಕುಕನೂರ ಮಾತನಾಡಿದರು. ಜಿ.ಆರ್.ಹಿರೇಮಠ, ಎಸ್.ಕೆ. ಕೊಪ್ಪಳ, ಭೋಜರಾಜ ರಾಠೋಡ, ಸಂತೋಷ ಹವಳೆ,

    ಟೋಪಣ್ಣ ನಾಯಕ, ಚನ್ನಪ್ಪ ನಾಯಕ, ವಿರೂಪಾಕ್ಷಪ್ಪ ಉಳ್ಳಾಗಡ್ಡಿ, ವೆಂಕಟೇಶ ಕೊಪ್ಪಣ್ಣವರ, ಜಗದೀಶ ಕೆಬರಳ್ಳಿ, ಶಿವಾನಂದ ರಡ್ಡೇರ, ಎಂ.ಆರ್. ಹಾತಲಗೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts