More

    ಕೇಂದ್ರ ಸರ್ಕಾರದಿಂದ ರೈತ ವಿರೋಽ ಧೋರಣೆ: ತೀ.ನ.ಶ್ರೀನಿವಾಸ್

    ಸಾಗರ: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ರೈತ ವಿರೋಽ ಧೋರಣೆ ಹೊಂದಿದೆ. ಈವರೆಗೂ ರೈತ ಪರವಾದ ಯಾವುದೇ ಪರಿಣಾಮಕಾರಿ ಯೋಜನೆಯನ್ನು ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿಲ್ಲ ಎಂದು ಮಲೆನಾಡು ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
    ನರೇಂದ್ರ ಮೋದಿ ಅವರು ಅಽಕಾರಕ್ಕೆ ಬಂದ ತಕ್ಷಣ ಸ್ವಾಮಿನಾಥನ್ ವರದಿಯನ್ನು ನೀಡಲಾಗಿತ್ತು. ಅಂದಿನಿAದ ಇಂದಿನವರೆಗೂ ವರದಿ ಜಾರಿಗೆ ತರದೆ ರೈತ ವಿರೋಽ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಬಿಜೆಪಿ ಖಾಸಗೀಕರಣಕ್ಕೆ ರೆಡ್‌ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿದೆ. ಎಲ್‌ಐಸಿ, ಬ್ಯಾಂಕ್ ಇತರ ವಲಯ ಖಾಸಗೀಕರಣ ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರ ಯಾರ ಜತೆಯೂ ಚರ್ಚಿಸದೆ ಕಾಯ್ದೆಗಳನ್ನು ಜಾರಿಗೆ ತರುತ್ತದೆ. ರೈತರು ಒಂದು ವರ್ಷ ಕಾಲ ರೈತ ವಿರೋಽ ಕಾಯ್ದೆ ಜಾರಿಗೆ ತಂದಿರುವುದನ್ನು ವಿರೋಽಸಿ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. ೭೫೦ಕ್ಕೂ ಹೆಚ್ಚು ರೈತರು ಹುತಾತ್ಮರಾದರು. ಸರ್ಕಾರ ಮೃತ ರೈತ ಕುಟುಂಬಗಳಿಗೆ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರ ಕಾಯ್ದೆ ಹಿಂದಕ್ಕೆ ಪಡೆದಿದ್ದೇವೆ ಎಂದು ಹೇಳುತ್ತಿದೆ. ಆದರೆ ಕಾಯ್ದೆ ಬಗ್ಗೆ ಈತನಕ ಯಾವುದೇ ಚರ್ಚೆ ನಡೆದಿಲ್ಲ ಎಂದರು.
    ರಾಜ್ಯದ 15 ಜಿಲ್ಲೆಗಳು ಅಡಕೆ ಆರ್ಥಿಕತೆಯನ್ನು ಅವಲಂಬಿಸಿ ಅಭಿವೃದ್ಧಿ ಹೊಂದುತ್ತಿದೆ. ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಲಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಅಫಿಡವೀಟ್ ಸಲ್ಲಿಸುವ ಕೆಲಸ ಮಾಡಿಲ್ಲ. ಕಾಗೋಡು ತಿಮ್ಮಪ್ಪ ಅವರು ಆರೋಗ್ಯ ಸಚಿವರಾಗಿದ್ದಾಗ ಅಡಕೆ ಕುರಿತು ವೈಜ್ಞಾನಿಕ ಪ್ರಯೋಗ ನಡೆಸಿ ಅಡಕೆ ಆರೋಗ್ಯಕ್ಕೆ ಹಾನಿಕಾರವಲ್ಲ ಎನ್ನುವ ವರದಿ ತರಿಸಿದ್ದಾರೆ. ಅಡಕೆ ಪೂಜ್ಯನೀಯ ಮತ್ತು ಔಷಧ ಗುಣವುಳ್ಳ ವಸ್ತುವಾಗಿದೆ. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ನಡೆಸಿ ಅಡಕೆ ಬೆಳೆಗಾರರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು ಹುಸಿಯಾಗಿದೆ ಎಂದರು.
    ಪ್ರಮುಖರಾದ ದೂಗೂರು ಪರಮೇಶ್ವರ, ರಾಮಪ್ಪ ಶಿರವಾಳ, ನೂರುಲ್ಲಾ, ಪ್ರಭಾಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts