More

    ವಿದ್ಯುತ್ ಅವಘಡದಿಂದ ಮೃತಪಟ್ಟ ಕುಟುಂಬದವರಿಗೆ ಸಹಾಯಧನ

    ತಿ.ನರಸೀಪುರ: ವಿದ್ಯುತ್ ಅವಘಡದಿಂದ ಮೃತಪಟ್ಟ ತಾಲೂಕಿನ ನಿಲಸೋಗೆ ಗ್ರಾಮದ ರಾಚೇಗೌಡ ಹಾಗೂ ಮಹದೇವಸ್ವಾಮಿ ಅವರ ಮನೆಗೆ ಭೇಟಿ ನೀಡಿದ ಬಿಜೆಪಿ ಮುಖಂಡ ಎಸ್. ಅರವಿಂದ್ ಕುಟುಂಬದವರಿಗೆ ಸಾಂತ್ವನ ಹೇಳಿ ವೈಯಕ್ತಿಕ ಸಹಾಯಧನ ನೀಡಿದರು.


    ಇತ್ತೀಚೆಗಷ್ಟೇ ತಾಲೂಕಿನ ನಿಲಸೋಗೆ ಗ್ರಾಮದಲ್ಲಿ ನಾಟಿ ಮಾಡಲಾಗಿದ್ದ ಗದ್ದೆಗೆ ಕ್ರಿಮಿನಾಶಕ ಸಿಂಪಡಿಸುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಮಗ ಸೇರಿದಂತೆ ಮೂವರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಅರವಿಂದ್ ಅವರು ಮೃತರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರಲ್ಲದೆ ವೈಯಕ್ತಿಕ ಸಹಾಯಧನ ನೀಡಿದರು.


    ಈ ವೇಳೆ ಮಾತನಾಡಿದ ಅವರು, ರಾಚೇಗೌಡರ ಮನೆಯಲ್ಲಿ ತಂದೆ, ಮಗ ಇಬ್ಬರೂ ಮೃತಪಟ್ಟಿರುವುದರಿಂದ ಕುಟುಂಬಕ್ಕೆ ಆಧಾರ ಸ್ಥಂಭವೇ ಇಲ್ಲದಂತಾಗಿದೆ. ದುರಂತ ಘಟನೆ ಇದಾಗಿದ್ದು, ಇಂತಹ ಸಂಧರ್ಭದಲ್ಲಿ ಕುಟುಂಬಕ್ಕೆ ಸಹಾಯಹಸ್ತ ನೀಡಬೇಕಾದದ್ದು ಎಲ್ಲರ ಕರ್ತವ್ಯವಾಗಿದೆ ಎಂದರು.


    ಇದೇ ವೇಳೆ ರಾಚೇಗೌಡರ ಕುಟುಂಬದವರು ಮನೆಯ ಯಜಮಾನ ಸೇರಿದಂತೆ ಮಗನನ್ನು ಕಳೆದುಕೊಂಡಿದ್ದೇವೆ. ಘಟನೆಯಿಂದ ದಿಕ್ಕೇ ತೋಚದಂತಾಗಿದೆ. ಜೀವನ ನಿರ್ವಹಣೆ ಮಾಡಲು ದಾರಿ ಇಲ್ಲವಾದ್ದರಿಂದ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಕೊಡಿಸಿಕೊಡಲು ಸಹಾಯ ಮಾಡುವಂತೆ ಅರವಿಂದ್ ಅವರಲ್ಲಿ ಮನವಿ ಮಾಡಿದರು. ಮಾನವೀಯ ದೃಷ್ಟಿಯಿಂದ ಕುಟುಂಬದಲ್ಲಿ ಒಬ್ಬರಿಗೆ ಅವಘಡ ಸಂಭವಿಸಿದ ಇಲಾಖೆಯಲ್ಲಿಯೇ ಉದ್ಯೋಗ ದೊರಕಿಸಿಕೊಡಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡುವುದಾಗಿ ಅರವಿಂದ್ ಭರವಸೆ ನೀಡಿದರು. ಅಲ್ಲದೆ ಸರ್ಕಾರದಿಂದ ದೊರಕಬಹುದಾದ ಹೆಚ್ಚಿನ ಪರಿಹಾರ ಕೊಡಿಸಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು.
    ಗ್ರಾಮದ ಮುಖಂಡರಾದ ನಿಲಸೋಗೆ ಪ್ರಸಾದ್, ಶೇಖರಪ್ಪ,ಕೃಷ್ಣ, ಸಿದ್ದರಾಜು, ಬಸವರಾಜಪ್ಪ, ರಾಚು, ಮಹೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts