More

    ವಿದ್ಯಾವಂತ ಯುವಕನಿಗೆ ಬಿಜೆಪಿ ಮಣೆ

    ದೊಡ್ಡಬಳ್ಳಾಪುರ
    ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆ ಅಖಾಡದಲ್ಲಿ ಸಾಕಷ್ಟು ಹೊಸ ಮುಖಗಳು ಗಮನ ಸೆಳೆದಿವೆ. ಬಿಜೆಪಿಯ ಅಚ್ಚರಿ ಅಭ್ಯರ್ಥಿಯಾಗಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ 6 ದಶಕಗಳ ಇತಿಹಾಸದಲ್ಲಿ ್ಲ ಅತಿ ಕಿರಿಯ ವಯಸ್ಸಿನ ವ್ಯಕ್ತಿಯೊಬ್ಬರು ರಾಷ್ಟ್ರೀಯ ಪಕ್ಷವೊಂದರಿಂದ ಚುನಾವಣಾ ಕಣಕ್ಕಿಳಿದಿರುವುದು ವಿಶೇಷ. ಸಾಕಷ್ಟು ಪೈಪೊಟಿ ನಡುವೆಯೂ ಬಿಜೆಪಿ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ಸ್ನಾತಕೋತ್ತರ ಪದವಿ ಪಡೆದಿರುವ 31 ವರ್ಷದ ಧೀರಜ್ ಮುನಿರಾಜುಗೆ ಸ್ಪರ್ಧೆಯ ಅವಕಾಶ ನೀಡಿದೆ.
    ರಾಜಕೀಯ ಹಿನ್ನೆಲೆ ಇಲ್ಲ!: ಕೃಷಿ ಹಿನ್ನೆಲೆಯಿಂದ ಬಂದರೂ ಉದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಪ್ರಯೋಗಗಳ ಮೂಲಕ ಯಶಸ್ಸು ಗಳಿಸಿದ ಪಿ.ಮುನಿರಾಜ್ ಅವರ ಪುತ್ರ ಧೀರಜ್ ಮುನಿರಾಜುಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಸಮಾಜಮುಖಿ ಚಿಂತನೆಗಳ ತುಡಿತ, ಜನಸ್ನೇಹಿ ಆಲೋಚನೆಗಳ ಹಂಬಲ ಹಾಗೂ ಗುಣಾತ್ಮಕ ಬದಲಾವಣೆಯ ಸಂಕಲ್ಪದೊಂದಿಗೆ ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಂಡಿದ್ದಾರೆ.
    ಅಮೆರಿಕ ಬಿಟ್ಟು ಬಂದ ತರುಣ: ಬೆಂಗಳೂರು ಮೂಲದ ಅವರು, ಆರ್.ವಿ.ಕಾಲೇಜಿನಲ್ಲಿ ಬಿ.ಇ ಪದವಿ ಪಡೆದ ಬಳಿಕ ಹೆಚ್ಚಿನ ವ್ಯಾಸಂಗಕ್ಕಾಗಿ ಅಮೆರಿಕಗೆ ತೆರಳಿದ್ದರು. ಟೆಕ್ಸಾಸ್‌ನಲ್ಲಿ ಎಂಎಸ್ ಪದವಿ ಪಡೆದ ಬಳಿಕ ಅಮೆರಿಕದಲ್ಲಿ ಉದ್ಯೋಗಾವಕಾಶ ದೊರೆತರೂ ಅದನ್ನು ಬಿಟ್ಟು, ಬೆಂಗಳೂರಿಗೆ ವಾಪಸಾದ ಅವರು, ಕೆಲ ದಿನ ಸಿಬಿಆರ್‌ಇ ಸೇರಿ ಕೆಲ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಸಣ್ಣ ವಯಸ್ಸಿನಲ್ಲೇ ತುಮಕೂರು ವಿವಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಬಿಜೆಪಿ ಫಲಾನುಭವಿ ಪ್ರಕೋಷ್ಠ ಜಿಲ್ಲಾ ಸಂಚಾಲಕರಾಗಿ ಕಾರ‌್ಯನಿರ್ವಹಿಸಿದ್ದಾರೆ. ಕರೊನಾ ಸಂದರ್ಭದಲ್ಲಿ ಅಂಜನಾದ್ರಿ ಟ್ರಸ್ಟ್ ಮೂಲಕ ಸೇವಾ ಕಾರ್ಯಗಳ ಮೂಲಕ ಗುರುತಿಸಿಕೊಂಡದ್ದು ವಿಶೇಷ.
    ನಟಿ ಶ್ರುತಿ ಮತ ಬೇಟೆ: ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಜಿಲ್ಲಾ ಸಂಚಾಲಕರಾಗಿರುವ ಧೀರಜ್ ಕಳೆದ ಕರೊನಾ ಸಂದರ್ಭದಲ್ಲಿ ತಾಲೂಕಿನ ಬಹುತೇಕ ಮನೆಗಳಿಗೆ ರೇಷನ್ ಕಿಟ್ ತಲುಪಿಸಿದ್ದಾರೆ. ಓಂಶಕ್ತಿ, ಅಯ್ಯಪ್ಪ ಮಾಲಾಧಾರಿಗಳಿಗೆ ಪ್ರವಾಸದ ವ್ಯವಸ್ಥೆ ಕಲ್ಪಿಸಿದ್ದಾರೆ. ವಿದ್ಯಾರ್ಥಿಗಳಿಗೆ ಬಸ್ ಪಾಸ್, ಆರೋಗ್ಯ ಸೇವೆಗಾಗಿ ನೂರಾರು ಆರೋಗ್ಯ ಶಿಬಿರ, ನಿರುದ್ಯೋಗಿಗಳಿಗೆ ಉಚಿತ ಉದ್ಯೋಗ ಮೇಳ ಆಯೋಜನೆ ಮಾಡಿ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ. ಇಂತಹ ಸಮಾಜಮುಖಿ ಕೆಲಸಗಳಿಂದ ಮಹಿಳಾ ಮತದಾರರು, ಯುವಕರ ಮನವನ್ನು ಧೀರಜ್ ಗೆದ್ದಿದ್ದಾರೆ ಎಂದು ಬುಧವಾರ ನಗರದಲ್ಲಿ ಮತಯಾಚಿಸಿದ ಬಿಜೆಪಿ ನಾಯಕಿ, ನಟಿ ಶ್ರುತಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts