More

    ವಿದ್ಯಾರ್ಥಿನಿ ಹತ್ಯೆಗೆ ಆಕ್ರೋಶ

    ಚಿತ್ರದುರ್ಗ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ವೀರಶೈವ ಸಮಾಜ ಪದಾಧಿಕಾರಿಗಳು ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
    ಈ ಕೃತ್ಯದ ಹಿಂದಿರುವ ಕಾಣದ ಶಕ್ತಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು ಹಾಗೂ ಇಂಥ ದುಷ್ಕೃತ್ಯಗಳು ಮರುಕಳಿಸದಂತೆ ಹಾಗೂ ಸಮಾಜದಲ್ಲಿ ಅಶಾಂತಿ ಮೂಡದಂತೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಮಾಜದಲ್ಲಿನ ಇಂತಹ ಕ್ರೂರ ವರ್ತನೆಗಳು ತೀವ್ರ ಆತಂಕ ತಂದೊಡ್ಡಿವೆ ಎಂದು ಕಳವಳ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
    ವಕೀಲ ಕೆ.ಎನ್.ವಿಶ್ವನಾಥಯ್ಯ, ಮುಖಂಡರಾದ ಪಟೇಲ್ ಶಿವಕುಮಾರ್, ಜಿ.ಎಂ.ಪ್ರಕಾಶ್, ಎಚ್.ನಿರಂಜನಮೂರ್ತಿ, ಕೆ.ಸಿ.ನಾಗರಾಜ್, ಜಿತೇಂದ್ರ ಹುಲಿಕುಂಟೆ, ಎ.ಎಸ್.ಸುಭಾಸ್‌ಚಂದ್ರ, ಕೆ.ಎಸ್.ಶಿವನಗೌಡ, ಸಿದ್ದೇಶ್, ಕೆ.ಸಿ.ರುದ್ರೇಶ್, ಡಿ.ಎಸ್.ಮಲ್ಲಿಕಾರ್ಜುನ್, ಚಿನ್ಮಯಾನಂದ, ಕೆಪಿಎಂ ಗಣೇಶಯ್ಯ, ಸಿದ್ದಾಪುರ ನಾಗಣ್ಣ, ಎಂ.ಶಶಿಧರ್, ಎಸ್.ಷಡಕ್ಷರಯ್ಯ, ಸಿ.ತಿಪ್ಪೇಸ್ವಾಮಿ, ಕೆ.ಎಸ್.ಶಿವಣ್ಣಗೌಡ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts