More

    ವಿದ್ಯಾರ್ಥಿಗಳ ಅನುಕೂಲಕ್ಕೆ ಹೊಸ ಶಿಣ ನೀತಿ

    ಎಂ.ಕೆ.ಹುಬ್ಬಳ್ಳಿ: ವಿದ್ಯಾರ್ಥಿಯು ತನ್ನ ಇಚ್ಛೆಯಂತೆ ಬದುಕಬೇಕೆಂಬ ದೃಸ್ಟಿಯಿಂದ ಹೊಸ ಶಿಣ ನೀತಿ ತರಲಾಗುತ್ತಿದೆ. ವಿದ್ಯಾರ್ಥಿಗಳು ಗುಣಮಟ್ಟದ ಶಿಣ ಪಡೆದು ಉತ್ತಮ ಪ್ರಜೆಗಳಾಗಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಣ ಸಚಿವ ಬಿ.ಸಿ.ನಾಗೇಶ ಹೇಳಿದರು.

    ಸ್ಥಳಿಯ ಕುವೆಂಪು ವಿದ್ಯಾಲಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ 25ನೇ ವರ್ಷದ ರಜತ ಮಹೋತ್ಸವ ಹಾಗೂ 2022&23ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 25 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಣ ನೀಡುವ ಮೂಲಕ ಕುವೆಂಪು ವಿದ್ಯಾಲಯ ಉತ್ತಮ ಶಿಣ ಸೇವೆ ಒದಗಿಸುತ್ತಿದೆ. ಇಂತಹ ಸಂಸ್ಥೆಗಳ ಅನುದಾನಿತಗೊಳಿಸುವ ಬಹುದಿನಗಳ ಬೇಡಿಕೆ ಸರ್ಕಾರದ ಮುಂದಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುವುದು ಎಂದರು.

    ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಮಕ್ಕಳಿಗೆ ಅರ ಜ್ಞಾನ ನೀಡುವ ಜತೆಗೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಕುವೆಂಪು ವಿದ್ಯಾಲಯ ಮಾಡುತ್ತಿದೆ. ಕುವೆಂಪು ವಿದ್ಯಾಲಯಕ್ಕೆ ಮೂಲಸೌಲಭ್ಯಕ್ಕಾಗಿ ಅನುದಾನ ಒದಗಿಸಲು ಬದ್ಧರಿದ್ದೇವೆ ಎಂದರು.

    ವಿಧಾನ ಪರಿಷತ್​ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಗುಣಾತ್ಮಕ ಶಿಣ ನೀಡುವ ನಿಟ್ಟಿನಲ್ಲಿ 25 ವರ್ಷಗಳಿಂದ ಶ್ರಮಿಸುತ್ತಿರುವ ಕುವೆಂಪು ವಿದ್ಯಾಲಯದ ಕಾರ್ಯ ಶ್ಲಾನೀಯ ಎಂದರು.
    ವಿಧಾನ ಪರಿಷತ್​ ಮಾಜಿ ಸದಸ್ಯ ಅರುಣ ಶಹಾಪೂರ, ಸಂಸ್ಥೆಯ ಅಧ್ಯ ಮುರುಗಯ್ಯ ಕಲ್ಮಠ, ಚೇರ್ಮನ್​ ರಾಜಕುಮಾರ ಗಾಣಿಗೇರ, ಗೌರವ ಸಲಹೆಗಾರ ಯಲ್ಲಪ್ಪ ಸಂಪಗಾರ, ಬಸವರಾಜ ಗಣಾಚಾರಿ, ದೇಮಪ್ಪ ಬಸರಗಿ, ಡಿಡಿಪಿಐ ಬಸವರಾಜ ನಾಲತವಾಡ, ರೂಪ್ಸಾ ಪ್ರಧಾನ ಕಾರ್ಯದರ್ಶಿ ಶಶಿಧರ ದಿಂಡೂರ, ಬಿಇಒ ಆರ್​.ಟಿ.ಬಳಿಗಾರ, ಎ.ಎನ್​.ಪ್ಯಾಟಿ, ಸಿಆರ್​ಪಿ ವಿನೋದ ಪಾಟೀಲ, ಡಾ. ಬಸವರಾಜ ಪರವಣ್ಣವರ, ಶ್ರೀಶೈಲ ತಿಗಡಿ, ಎಂ.ಎಸ್​.ಕಲ್ಮಠ, ಬಸನಗೌಡ ಶಿದ್ರಾಮನಿ, ಸಂದೀಪ ದೇಶಪಾಂಡೆ, ಉಳವಪ್ಪ ಉಳಾಗಡ್ಡಿ, ಶಾಲಾ ಮುಖ್ಯ ಶಿಕ್ಷಕ ಮೃತ್ಯುಂಜಯ ಕಲ್ಮಠ, ರವಿ ಕಾರಲಕಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts