More

    ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಬೆಳೆಯಬೇಕು

    ಬಸವಕಲ್ಯಾಣ: ವಿದ್ಯಾರ್ಥಿಗಳು ಅಂಕಗಳಿಸುವುದು ಮುಖ್ಯವಲ್ಲ, ಇದರ ಜತೆ ಸಹಪಠ್ಯ ಚಟುವಟಿಕೆಗಳೊಂದಿಗೆ ಸಮಾಜ ಮುಖಿಯಾಗಿ ಬೆಳೆಯಬೇಕು ಎಂದು ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಸಹಾಯಕ ಆಯುಕ್ತರೂ ಆಗಿದ್ದ ಭಂವರ್ಸಿಂಗ್ ಮೀನಾ ಸಲಹೆ ನೀಡಿದರು.
    ನಗರದ ಶಾಂತಿನಿಕೇತನ ಪ್ರೌಢ ಶಾಲೆಯಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿ ಪಾಸಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಶಾಲೆ ಎಲ್ಲ ಚಟುವಟಿಕೆಗಳೊಂದಿಗೆ ಉತ್ತಮ ಶಿಕ್ಷಣ ನೀಡುತ್ತಿದೆ ಎಂದು ಮೆಚ್ಚಗೆ ವ್ಯಕ್ತಪಡಿಸಿದರು.
    ತಾಪಂ ಇಒ ಮಡೋಳಪ್ಪ ಪಿ.ಎಸ್. ಮಾತನಾಡಿ, ಶಿಕ್ಷಕರ ಶ್ರಮದಿಂದ ಶಾಲೆಯ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿ ಬಂದಿದೆ ಎಂದರು.
    ಪಿಆರ್​ಇ ಎಇಇ ರಾಜಕುಮಾರ ಮಾತನಾಡಿದರು. ಪ್ರಾಥಮಿಕ ಶಾಲೆ ಮುಖ್ಯ ಗುರು ಶಿವರಾಜ ಖೇಲೆ, ಪ್ರೌಢ ಶಾಲೆ ಮುಖ್ಯಗುರು ಚನ್ನವೀರ ಬಿರಾದಾರ ಉಪಸ್ಥಿತರಿದ್ದರು. ಅಗ್ರಶ್ರೇಣಿ ಪಾಸಾದ 20 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಶಿಕಾಂತ ಮಂಠಾಳೆ ನಿರೂಪಣೆ ಮಾಡಿದರು. ಅಮರ ರಜಪೂತ ವಂದಿಸಿದರು. ಶಾಲೆಯ ಸಿಬ್ಬಂದಿ ಮತ್ತು ಪಾಲಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts