More

    ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಿ

    ಜೊಯಿಡಾ: ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನದ ಪರಿಚಯ ಇರಬೇಕು ಎಂದು ಶಾಸಕ ಆರ್.ವಿ ದೇಶಪಾಂಡೆ ಹೇಳಿದರು.

    ಬುಧವಾರ ಜೊಯಿಡಾ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿ ಅವರು ಮಾತನಾಡಿದರು. ನಾವು ಸಮಾಜಕ್ಕೆ ಭಾರ ಆಗಬಾರದು. ಸಮಾಜದ ಆಸ್ತಿ ಆಗಬೇಕು. ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಇರಬೇಕು. ಕೇವಲ ಶೈಕ್ಷಣಿಕ ಅಧ್ಯಯನ, ಕ್ರೀಡೆ ಕಲೆ, ಸಾಮಾನ್ಯ ಜ್ಞಾನದಲ್ಲಿ ವಿದ್ಯಾರ್ಥಿಗಳು ಪ್ರಗತಿ ಸಾಧಿಸಬೇಕು ಎಂದರು.

    ಕಾಲೇಜಿನ ಒಟ್ಟು 53 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು. ವಿಆರ್​ಡಿಎಂ ಟ್ರಸ್ಟ್ ವತಿಯಿಂದ 30 ಸಾವಿರ ಮೌಲ್ಯದ ಪುಸ್ತಕವನ್ನು ಗ್ರಂಥಾಲಯಕ್ಕೆ ನೀಡಿದರು. ಹೊಸ ಜಿಮ್ ಘಟಕವನ್ನು ಉದ್ಘಾಟಿಸಿದರು.

    ತಾಪಂ ಅಧ್ಯಕ್ಷೆ ನರ್ಮದಾ ಪಾಟ್ನೆಕರ, ಉಪಾಧ್ಯಕ್ಷ ವಿಜಯ ಪಂಡಿತ, ಜಿಪಂ ಸದಸ್ಯರಾದ ರಮೇಶ ನಾಯ್ಕ, ಸಂಜಯ ಹಣಬರ, ಕಾಲೇಜ್ ಸಮಿತಿಯ ಪಿ.ವಿ.ದೇಸಾಯಿ. ತಹಸೀಲ್ದಾರ್ ಸಂಜಯ ಕಾಂಬಳೆ, ತಾಪಂ ಇಒ ಆನಂದ ಬಡಕುಂದ್ರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts