More

    ವಿದ್ಯಾಥರ್ಿಗಳು ದೇಶಭಕ್ತಿ ಬೆಳೆಸಿಕೊಳ್ಳಿ

    ಯಾದಗಿರಿ: ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥರ್ಿಗಳು ದೇಶ ಭಕ್ತಿ ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಪ್ರಾಚಾರ್ಯ ಡಾ. ಸುಭಾಶಚಂದ್ರ ಕೌಲಗಿ ಸಲಹೆ ನೀಡಿದರು.

    ಶುಕ್ರವಾರ ಇಲ್ಲಿನ ಸಕರ್ಾರಿ ಪದವಿ ಮಹಾವಿದ್ಯಾಲಯದಲ್ಲಿ ರಾಯಚೂರು ವಿಶ್ವವಿದ್ಯಾಲಯದ ಸಹಯೋಗದಿಂದ ಹಮ್ಮಿಕೊಂಡ 75ನೇ ಸ್ವಾತಂತ್ರ್ಯ ಮಹೋತ್ಸವದ ಅಂತರ್ ಕಾಲೇಜು ಮಟ್ಟದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಸ್ಪಧರ್ೆಗೆ ಚಾಲನೆ ನೀಡಿ ಮಾತನಾಡಿ, ದೇಶ ಆಂಗ್ಲರ ದಾಸ್ಯದಿಂದ ಮುಕ್ತಿಹೊಂದಿ ಸ್ವಾತಂತ್ರೃ ಪಡೆದು 75 ವರ್ಷಗಳ ಸಂಭ್ರಮದಲ್ಲಿದೆ. ಸ್ವಾತಂತ್ರೃದ ಈ ಸಂಭ್ರಮ ಯುವ ಜನಾಂಗಕ್ಕೆ ತಲುಪಿಸಲು ವಿವಿಧ ಸ್ಪಧರ್ೆ ಆಯೋಜನೆ ಮಾಡಲಾಗಿದ್ದು ವಿದ್ಯಾಥರ್ಿಗಳು ಅತ್ಯಂತ ಅಭಿಮಾನದಿಂದ ಪಾಲ್ಗೊಳ್ಳಬೇಕು ಎಂದು ಹೇಳಿದರು.

    ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಚರಿತ್ರೆ ಓದಬೇಕು ಅವರಲ್ಲಿನ ದೇಶಭಕ್ತಿ ಯುವಜನಾಂಗ ಅಳವಡಿಸಿಕೊಳ್ಳುವುದರ ಮೂಲಕ ದೇಶದ ಅಭಿವೃದ್ಧಿಗಾಗಿ ತಮ್ಮ ಕೊಡುಗೆ ನೀಡಲು ಕಂಕಣ ಬದ್ಧರಾದಾಗ ಮಾತ್ರ ಇಂಥ ಕಾರ್ಯಕ್ರಮ ಸಾರ್ಥಕಗೊಳ್ಳುತ್ತವೆ ಎಂದು ಅವರು ಹೇಳಿದರು.

    ಸ್ವಾತಂತ್ರ್ಯ ಓಟ, ಪ್ರಬಂಧ, ಚಚರ್ೆ, ಪೇಂಟಿಂಗ್, ಪೋಸ್ಟರ್ ಮೇಕಿಂಗ್, ನಾಟಕ ಹಾಗೂ ದೇಶಭಕ್ತಿ ಗೀತೆ ಮುಂತಾದ ಸ್ಪಧರ್ೆಗಳನ್ನು ಏರ್ಪಡಿಸಲಾಯಿತು. ಈ ಸ್ಪಧರ್ೆಗಳಲ್ಲಿ ಯಾದಗಿರಿ ಜಿಲ್ಲೆಯ ಘಟಕ ವ್ಯಾಪ್ತಿಯ ವಿವಿಧ ಕಾಲೇಜುಗಳ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು. ಈ ಘಟಕ ಮಟ್ಟದ ಸ್ಪಧರ್ೆಗಳಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾಥರ್ಿಗಳನ್ನು ವಿಶ್ವವಿದ್ಯಾಲಯ ಮಟ್ಟದ ಸ್ಪಧರ್ೆಗಳಲ್ಲಿ ಭಾಗವಹಿಸಲು ಕಳುಹಿಸಲಾಗುವುದು.

    ಈ ಎಲ್ಲ ಸ್ಪಧರ್ೆಗಳ ಸಂಚಾಲಕತ್ವವನ್ನು ಕಾಲೇಜಿನ ಸಾಂಸ್ಕೃತಿಕ ಸಲಹೆಗಾರ ಡಾ.ಟಿ.ಉಮೇಶ್ ನಿಭಾಯಿಸಿದರು. ಶರಣಬಸವ ವಠಾರ, ಮಹ್ಮದ ಖಲೀಲ, ಡಾ.ಹರೀಶ್ ರಾಠೋಡ್, ಡಾ.ಅಶೋಕರೆಡ್ಡಿ, ರಾಘವೇಂದ್ರ ಬಂಡಿಮನಿ, ಡಾ.ಮೋನಯ್ಯ ಕಲಾಲ, ಶಹನಾಜ ಬೇಗಂ, ಡಾ. ಸಿ.ಆರ್.ಕಂಬಾರ, ಶೆಟ್ಟಿಕೇರಾ ಮುಂತಾದವರು ವಿವಿಧ ಸ್ಪಧರ್ೆಗಳ ನಿಣರ್ಾಯಕರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts