More

    ವಿಜ್ಞಾನ, ತಂತ್ರಜ್ಞಾನ ಬೆಳೆದಂತೆ ಕುಸಿಯುತ್ತಿರುವ ಮೌಲ್ಯ

    ಮೈಸೂರು: ವಿಜ್ಞಾನ, ತಂತ್ರಜ್ಞಾನ ಬೆಳೆದಂತೆ ಮೌಲ್ಯ ಕುಸಿತವಾಗುತ್ತಿದೆ ಎಂದು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ಎಚ್.ಎಸ್. ಮುದ್ದೇಗೌಡ ಕಳವಳ ವ್ಯಕ್ತಪಡಿಸಿದರು.


    ನಗರದ ಕೃಷ್ಣಮೂರ್ತಿಪುರಂ ನಮನ ಕಲಾಮಂಟಪದಲ್ಲಿ ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಾಹಕ ಎನ್.ವಿ. ರಮೇಶ್ ಅವರ 71ನೇ ಜನ್ಮದಿನದ ಅಂಗವಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸ್ನೇಹ ಸಿಂಚನ ಟ್ರಸ್ಟ್ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತ್ಯಕ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ, ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.


    ನಾವು ಈಗ ಚಂದ್ರನಿಗೆ ಹತ್ತಿರವಾಗಿದ್ದೇವೆ. ಆದರೆ, ಪಕ್ಕದ ಮನೆಯವರಿಗೆ ದೂರವಾಗಿದ್ದೇವೆ. ಪಕ್ಕದ ಮನೆಯಲ್ಲಿ ಏನಾದರೂ ಆದರೆ ಬೆಳಗ್ಗೆ ಪತ್ರಿಕೆ ನೋಡಿ ತಿಳಿದುಕೊಳ್ಳುವ ಪರಿಸ್ಥಿತಿಗೆ ತಲುಪಿದ್ದೇವೆ. ಈಗ ಕೂಡು ಕುಟುಂಬಗಳೇ ಇಲ್ಲ. ಗಂಡ-ಹೆಂಡತಿಯೇ ಕುಟುಂಬ ಎಂಬಂತೆ ಆಗಿದೆ. ಅವರಲ್ಲೂ ವಿಚ್ಛೇದನ ಪ್ರಕರಣಗಳು ನಡೆಯುತ್ತಿರುತ್ತವೆ. ಈ ಪರಿಸ್ಥಿತಿ ದೂರವಾಗಬೇಕು. ಪರೋಪಕಾರಿಯಾಗಿ, ಸಮಾಜಕ್ಕೆ ಪೂರಕವಾಗಿ ಬದುಕುವ ಸ್ಥಿತಿ ನಿರ್ಮಾಣವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

    ಕೃತಜ್ಞತೆ ಸಲ್ಲಿಸಿದ ಮಾತನಾಡಿದ ಎನ್.ವಿ.ರಮೇಶ್, ಸಾಫ್ಟ್‌ವೇರ್‌ನವರು ಹಾರ್ಡ್‌ವೇರ್‌ನಂತೆ ವರ್ತಿಸಬಾರದು. ಎಲ್ಲೇ ಇದ್ದರೂ ಕನ್ನಡದ ಬಗ್ಗೆ ಪ್ರೀತಿ ಹೊಂದಿ ಜೀವನ ಸಾಗಿಸಬೇಕು. ಪ್ರಪಂಚದ ಎಲ್ಲಿಯೇ ಹೋದರೂ ಭಾರತವೇ ಶ್ರೇಷ್ಠ ಎನಿಸುತ್ತದೆ ಎಂದರು.

    ಸಮಾಜ ಸೇವಕ ಕೆ. ರಘುರಾಮ್ ಮಾತನಾಡಿದರು. ಹೈಕೋರ್ಟ್‌ನ ಹಿರಿಯ ವಕೀಲ ಬಳ್ಳಾರಿ ರೇವಣ್ಣ, ವಿಜ್ಞಾನ ಲೇಖಕ ಎಸ್.ರಾಮಪ್ರಸಾದ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ದಾವಣಗೆರೆ ಜಿಲ್ಲಾ ಪ್ರತಿನಿಧಿ ಪಿ.ಎಂ.ಸಿದ್ದಯ್ಯ ಹೊನ್ನಾಳಿ, ಶ್ರೀಇಳೈ ಆಳ್ವಾರ್ ಸ್ವಾಮೀಜಿ, ಸಿಎಫ್‌ಟಿಆರ್‌ಐ ನಿವೃತ್ತ ವಿಜ್ಞಾನಿ, ರಂಗಕರ್ಮಿ ಶ್ರೀಮತಿ ಹರಿಪ್ರಸಾದ್ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts