More

    ವಿಜೃಂಭಣೆಯ ದಿವ್ಯ ಬ್ರಹ್ಮರಥೋತ್ಸವ : ಶ್ರೀವಿಶಾಲಾಕ್ಷೀ ಸಮೇತ ಶ್ರೀ ವಿಶ್ವನಾಥಸ್ವಾಮಿ ಮೆರವಣಿಗೆ


    ಚಾಮರಾಜನಗರ : ಕೊಳ್ಳೇಗಾಲ ಪಟ್ಟಣದ ಪ್ರಸನ್ನ ಶ್ರೀ ವಿಶಾಲಾಕ್ಷೀ ಸಮೇತ ಶ್ರೀ ವಿಶ್ವನಾಥಸ್ವಾಮಿ ದಿವ್ಯ ಬ್ರಹ್ಮರಥೋತ್ಸವ ಗುರುವಾರ ನೂರಾರು ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿತು.


    ದೇವಾಲಯ ಮುಂಭಾಗ ಸಿಂಗಾರ ಮಾಡಲಾಗಿದ್ದ ರಥಕ್ಕೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ಮಂಗಳವಾದ್ಯದ ಹಿಮ್ಮೇಳ ಹಾಗೂ ಭಕ್ತರ ಹರ್ಷೋದ್ಗಾರ ನಡುವೆ ರಥದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
    ಮುಂಜಾನೆಯಿಂದಲೇ ಸ್ವಾಮಿಗೆ ರುದ್ರಾಭಿಷೇಕ, ರಥ ಸಂಪ್ರೋಕ್ಷಣೆ, ಪುಣ್ಯಾಹ, ಮಹಾಮಂಗಳಾರತಿ ನಡೆಸಲಾಯಿತು.

    ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ದೇವಾಲಯದ ಏಳು ಕಡೆಯಲ್ಲಿ ಮಂಟಪೋತ್ಸವ ನಡೆಸಲಾಯಿತು. ಕೊನೆಗೆ ರಥೋತ್ಸವ ಮುಕ್ತಾಯದ ಬಳಿಕ ಭಕ್ತರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಸಿ ಅನ್ನಅಂತರ್ಪಣೆ ಮಾಡಲಾಯಿತು.


    ರಥೋತ್ಸವ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆದಿದೆ. ಏ.5 ದಂದು ಶಿವಯಾಗ ಪೂಜಾರಾಧೆ, ಬಲಿಪ್ರದಾನ, ಏ.6 ರಂದು ತೀರ್ಥಸ್ನಾನ, ದೇವತಾ ಉದ್ವಾಸನೆ ಹಾಗೂ ಏ.7 ರಂದು ಕುಂಭಾಭಿಷೇಕ, ಪುಷ್ಪಯಾಗ ಪೂರ್ವಕ ಕೈಲಾಸ ವಾಹನೋತ್ಸವ, ದ್ವಾದಶಾರಾಧನೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ.


    ತಲಕಾಡು ವೈದ್ಯೇಶ್ವರಸ್ವಾಮಿ ಸನ್ನಿಧಿಯ ಪ್ರಧಾನ ಆಗಮಿಕರಾದ ಶ್ರೀ ಆನಂದ ದೀಕ್ಷಿತ್, ಪ್ರಧಾನ ಆರ್ಚಕ ಶ್ರೀ ಜ್ಯೋತಿಷಿ ಕೃಷ್ಣಕುಮಾರ ಶರ್ಮ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದರು. ಎಚ್.ಎಸ್.ಪಶುಪತಿಶರ್ಮ, ಎಚ್.ಎಸ್.ನಟರಾಜಶರ್ಮ, ಎಚ್.ಎಸ್.ಕುಮಾರಸ್ವಾಮಿ ಶರ್ಮ ಹಾಗೂ ಶ್ರೀ ವಿಶ್ವನಾಥಸ್ವಾಮಿ ದೇವಸ್ಥಾನ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ನಾಗಪ್ರಕಾಶ್, ಸತೀಶ್ ಕುಮಾರ್, ಡಾ.ಸಿ.ಪರಮೇಶ್ವರಯ್ಯ, ಕೆ.ವೇಣುಗೋಪಾಲ್, ಚಂದ್ರಶೇಖರ, ಮಹದೇವಯ್ಯ, ವ್ಯವಸ್ಥಾಪಕ ಎ.ಪಿ ಚೆನ್ನವೀರಶೆಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts