More

    ವಿಘ್ನ ಸಂತೋಷಿಗಳ ಪ್ರಯತ್ನ ಸಫಲವಾಗಲಿಲ್ಲ

    ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವದ ವೇಳೆ ಸಮಸ್ಯೆಗಳ ಸೃಷ್ಟಿಗೆ ಕೆಲವು ವಿಘ್ನ ಸಂತೋಷಿಗಳು ನಡೆಸಿದ್ದ ಪ್ರಯತ್ನ ಸಫಲವಾಗಲಿಲ್ಲವೆಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಅನುಭವ ಮಂಟಪದಲ್ಲಿ ಉತ್ಸವದ ಯಶಸ್ವಿಗೆ ಶ್ರಮಿಸಿದವರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿ,ಕೆಡಿಸುವವರು-ಸಮಾಧಾನ ಪಡಿಸುವವರ ನಡುವೆ ಉತ್ಸವ ಯಶಸ್ವಿಯಾಗಿದೆ.
    ಸದುದ್ದೇಶದಿಂದ ಹಮ್ಮಿಕೊಳ್ಳುತ್ತಿರುವ ಉತ್ಸವಕ್ಕೆ ಸ್ಯಾಡಿಷ್ಟ್‌ಗಳಿಂದ ಯಾವುದೇ ತೊಂದರೆ ಆಗಲಿಲ್ಲ. ಅನುಭವಗಳು ಮುಂದಾಗುವ ತೊಂದರೆಗಳನ್ನು ಗ್ರಹಿಸುವ ಶಕ್ತಿ ಒದಗಿಸುತ್ತವೆ, ಎಂಥದ್ದೇ ತೊಂದರೆ,ತಾಪತ್ರಯಗಳು ಎದುರಾದರೂ ಅಳುಕದಂತೆ ದೃಢವಾಗಿಸುತ್ತವೆ. ಜನರ ಸಹಕಾರ,ಅಗೋಚರ ಶಕ್ತಿಯಿಂದಾಗಿ ಕಾರ‌್ಯಕ್ರಮ ಚೆನ್ನಾಗಿ ನಡೆದಿದೆ.
    ಹಿಂದೆ ನಡೆದಿದ್ದ ಗಣಮೇಳ ಅಥವಾ ಈ ಉತ್ಸವದಲ್ಲಿ ಒಂದೇ ಒಂದು ಅಹಿತಕರ ಘಟನೆಯಾಗಲಿಲ್ಲ. ಕರೊನಾ ಸಂದರ್ಭದಲ್ಲಿ ಸಹ ಜವಾಗಿಯೇ ಜಿಲ್ಲಾಡಳಿತ ಆತಂಕಕ್ಕೆ ಒಳಗಾಗಿತ್ತು. ಆದರೆ ಉತ್ಸವದ ಬಳಿಕ ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ ಕಡಿಮೆ ಆಗುತ್ತಿದೆ,ನಿಸರ್ಗವೂ ಇದಕ್ಕೆ ಸಹಕಾರ ನೀಡಿತೆಂದು ಶರಣರು ಹರ್ಷ ವ್ಯಕ್ತ ಪಡಿಸಿದರು.
    ಉತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ,ಉತ್ಸವದ ಯಶಸ್ಸು ಕಾರ್ಯಕರ್ತರಿಗೆ ಸಲ್ಲ ಬೇಕು. ಇದಕ್ಕೆ ಮೂಲ ಕಾರಣಕರ್ತರು ಮುರುಘಾ ಶರಣರು,ಅವರು ಈ ಶತಮಾನದ ಯುಗಪುರುಷರು. ಕರೊನಾ ಸಂದರ್ಭದಲ್ಲಿ ಜನರಿಗೆ ಸಾಂತ್ವನ ಹೇಳಿದ ಶ್ರೇಷ್ಠ ಸಂತರಿವರು. ಮುರುಘಾ ಶರಣರಿಗೆ ವಿಚಾರಗಳ ಕೊರತೆಯಿಲ್ಲ ಎಂದರು.
    ಫಾದರ್ ರಾಜು ಮಾತನಾಡಿ,ಶರಣ ಸಂಸ್ಕೃತಿ ಉತ್ಸವದ ಎಲ್ಲ ಕಾರ್ಯಕ್ರಮಗಳು ಹೊರ ದೇಶಗಳಿಗೂ ತಲುಪಿದ್ದು ಈ ಬಾರಿಯ ವಿಶೇಷವೆಂದರು. ಜಿ.ಪಂ.ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು,ಮಾಜಿ ಅಧ್ಯಕ್ಷ ಸಿ.ಮಹಾಲಿಂಗಪ್ಪ, ಉತ್ಸವ ಸಮಿತಿ ಕಾರ‌್ಯಾಧ್ಯಕ್ಷ ಎನ್.ಜಯ ಣ್ಣ,ಮುಖಂಡರಾದ ಎಂ.ಟಿ.ಮಲ್ಲಿಕಾರ್ಜುನಸ್ವಾಮಿ,ಶ್ರೀ ಬಸವ ಹರಳಯ್ಯ ಸ್ವಾಮೀಜಿ,ಶ್ರೀ ಬಸವಶಾಂತಲಿಂಗ ಸ್ವಾಮೀಜಿ,ಪಟೇಲ್ ಶಿವಕುಮಾರ್,ಎ.ಜೆ. ಪರಮಶಿವಯ್ಯ,ಹನುಮಲಿ ಷಣ್ಮುಖಪ್ಪ,ಕೆಇಬಿ ಷಣ್ಮುಖಪ್ಪ ಮತ್ತಿತರರು ಇದ್ದರು. ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಡಾ.ಸಿ.ಟಿ.ಜಯಣ್ಣ ಸ್ವಾಗತಿಸಿ,ಕೆ.ಎನ್.ವಿಶ್ವನಾಥ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts