More

    ದಿವ್ಯ ಮುರುಘಾ ಪರಂಪರೆಯಲ್ಲಿ ಕಿರಣಗಳಾಗಿ ಬೆಳಗೋಣ

    ಚಿತ್ರದುರ್ಗ: ಮುರುಘಾ ಪರಂಪರೆ ಎಂದರೆ ಅದು ದಿವ್ಯ ಪರಂಪರೆ ಎಂದು ಹೆಬ್ಬಾಳ ವಿರಕ್ತಮಠದ ಶ್ರೀಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.

    ನಗರದ ಮುರುಘಾಮಠದ ಅನುಭವ ಮಂಟಪದಲ್ಲಿ ಮಂಗಳವಾರ ಸಂಜೆ ಶರಣ ಸಂಸ್ಕೃತಿ ಉತ್ಸವ ಉದ್ಘಾಟನಾ ಕಾರ‌್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ,ಈ ಪರಂಪರೆ ಪ್ರಕಾಶದಲ್ಲಿ ನಾವೆಲ್ಲ ಕಿರಣಗಳಾಗಿ ಬೆಳಗೋಣವೆಂದರು.

    ಉತ್ಸವಕ್ಕೆ ಚಾಲನೆ ನೀಡಿದ ಇಳಕಲ್ ಶ್ರೀ ವಿಜಯಮಹಾಂತೇಶ್ವರ ಮಠದ ಗುರು ಮಹಾಂತ ಸ್ವಾಮೀಜಿ ಮಾತನಾಡಿ,ಈ ಪರಂಪರೆಯಲ್ಲಿ ಬಂ ದಂಥವರು ಸಾಮಾಜಿಕ, ಶೈಕ್ಷಣಿಕ ಸೇವೆ ಮಾಡುವಂತವರರಾಗಿದ್ದಾರೆ. ಸಮುದಾಯದವರಿಗೆ ಶಿಕ್ಷಣ ನೀಡಲು ಮುರುಘಾ ಶಾಂತವೀರರು ಶ್ರಮಿಸಿದರು. ಪಾದ ಕಾಣಿಕೆಯಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲಾಗಿದೆ ಎಂದರು.

    ಸಮ್ಮುಖ ವಹಿಸಿದ್ದ ರಾವಂದೂರಿನ ಮೋಕ್ಷಪತಿ ಸ್ವಾಮೀಜಿ, ಜಯದೇವ ಜಗದ್ಗುರು ಪೀಠಾಧಿಪತಿಗಳಾಗಿದ್ದಾಗ ಶ್ರೀ ಮಠ ಆರ್ಥಿಕವಾಗಿ ಹಿನ್ನಡೆಯನ್ನು ಹೊಂದಿತ್ತು. ಶ್ರೀಗಳು ಅವಿರತ ಶ್ರಮಿಸಿ ಅಲ್ಪಸಮಯದಲ್ಲಿ ದೇಶ ಸುತ್ತಿ ಸಾಲ ತೀರಿಸಿದ್ದರು. 1964ರಲ್ಲಿ ಮುರುಘಾರಾಜೇಂದ್ರ ವಿದ್ಯಾಪೀಠ ಸ್ಥಾಪಿಸಿ ನೂರಾರು ಶಾಲೆ,ಕಾಲೇಜುಗಳ ಸ್ಥಾಪನೆಗೆ ಶ್ರಮಿಸಿದ್ದರೆಂದರು.

    ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಶೂನ್ಯಪೀಠ,ಮುರುಘಾ ಪರಂಪರೆಯ ಕುರಿತು ವಿವರಿಸಿದರು. ಶರಣಸಂಸ್ಕೃತಿ ಉತ್ಸವ ಸಮಿತಿ ಗೌರವಾಧ್ಯಕ್ಷ ವಿಜಯಪುರ ಶ್ರೀ ಗಾಣಿಗ ಗುರುಪೀಠದ ಡಾ.ಬಸವಕುಮಾರಸ್ವಾಮೀಜಿ, ಕಾರ್ಯಾಧ್ಯಕ್ಷ ಎಸ್.ಲಿಂಗಮೂರ್ತಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್,ವಿವಿಧ ಶಾಖಾಮಠಾಧೀಶರು,ಹರಗುರುಚರಮೂರ್ತಿಗಳು,ಎಸ್‌ಜೆಎಂ ವಿದ್ಯಾಪೀಠದ ಕಾರ‌್ಯದರ್ಶಿ ಎಸ್.ಬಿ.ವಸ್ತ್ರ ಮಠದ್,ಪ್ರಧಾನ ಕಾರ‌್ಯದರ್ಶಿ ಅನಿತ್‌ಕುಮಾರ್,ಕಾರ್ಯಕಾರಿ ಮಂಡಳಿ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

    ಜಮುರಾ ಕಲಾವಿದರು ವಚನ ಪ್ರಾರ್ಥಿಸಿದರು. ಬ್ಯಾಡಿಗಿ ಮುಪ್ಪಿನ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ,ಸ್ವಾಗತಿಸಿ,ಚಿದರಹಳ್ಳಿ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ನಿರೂಪಿಸಿದರು. ಗಾಯಕರಾದ ರವೀಂದ್ರ ಸೋರಗುಂದಿ ಮತ್ತು ಸಾಕ್ಷಿ ಕಲ್ಲೂರು ಇವರಿಂದ ವಚನ ಸಂಗೀತ ಸಂಜೆ ಕಾರ್ಯಕ್ರಮ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts