More

    ವಾಹನ ಸಂಚಾರಕ್ಕೆ ತೊಡಕಾದ ಸ್ಲಾೃಬ್

    ಯಳಂದೂರು: ತಾಲೂಕಿನ ಅಂಬಳೆ ಗ್ರಾಮದಿಂದ ಅಂಬಳೆ ಹೊಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿ ಚರಂಡಿ ನೀರು ಹರಿದುಹೋಗಲು ನಿರ್ಮಿಸಿರುವ ಸ್ಲಾೃಬ್ ಕಾಮಗಾರಿ ಅವೈಜ್ಞಾನಿಕವಾಗಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

    ಟಿಎಸ್‌ಪಿ ಯೋಜನೆಯಡಿ 20 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಮಂಜೂರಾಗಿದ್ದು, ಇದರಲ್ಲಿ 4 ಡೆಕ್, 590 ಮೀಟರ್ ಚರಂಡಿ ಹಾಗೂ 60 ಮೀಟರ್ ರಸ್ತೆಯನ್ನು ನಿರ್ಮಿಸುವ ನಿಟ್ಟಿನಲ್ಲಿ 2019ರ ಆಗಸ್ಟ್‌ನಲ್ಲಿ ಶಾಸಕ ಎನ್.ಮಹೇಶ್ ಭೂಮಿಪೂಜೆ ಸಲ್ಲಿಸಿದ್ದರು. ಇದೀಗ ರಸ್ತೆ ಮಧ್ಯದಲ್ಲಿ 3 ಅಡಿ ಎತ್ತರಕ್ಕೆ ಸ್ಲಾೃಬ್ ನಿರ್ಮಿಸಲಾಗಿದೆ. ಇಲ್ಲಿ ದಿನನಿತ್ಯ ಬಸ್, ಲಾರಿ, ಟ್ರಾೃಕ್ಟರ್, ಆಟೋ, ಬೈಕ್ ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿದ್ದು, ಸವಾರರು ಹರಸಾಹಸ ಪಡುವಂತಾಗಿದೆ.

    ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಎತ್ತರವನ್ನು ಕಡಿಮೆಗೊಳಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ವಾಹನ ಸವಾರರು ಆಗ್ರಹಿದ್ದಾರೆ.

    ಆಮೆಗತಿಯಲ್ಲಿ ಕಾಮಗಾರಿ:
    ಕಾಮಗಾರಿಗೆ ಚಾಲನೆ ನೀಡಿ 5 ತಿಂಗಳು ಕಳೆದರೂ ಮುಗಿಯುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ. ಚರಂಡಿಯನ್ನು ಮಾತ್ರ ನಿರ್ಮಾಣ ಮಾಡಿ ಹಾಗೇ ಬಿಟ್ಟಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರೀಕ್ಷಿಸುತ್ತಿಲ್ಲ. ಇದರಿಂದ ಗುತ್ತಿಗೆದಾರರು ತಮಗೆ ಇಷ್ಟ ಬಂದ ರೀತಿಯಲ್ಲಿ ಚರಂಡಿ ಕಾಮಗಾರಿಯನ್ನು ಮಾಡುತ್ತಿದ್ದಾರೆ.

    ಕಡಿಮೆ ಗುಣಮಟ್ಟದಿಂದ ಕೂಡಿರುವ ಸಾಮಗ್ರಿಗಳನ್ನು ಬಳಸಿ ಚರಂಡಿ ನಿರ್ಮಾಣ ಮಾಡಿದ್ದಾರೆ. ಜತೆಗೆ ಕುಡಿಯುವ ನೀರಿನ ಕೈಪಂಪ್ ಕೂಡ ಪಕ್ಕದಲ್ಲಿದ್ದು ಇದನ್ನೂ ಸೇರಿಸಿಕೊಂಡು ಚರಂಡಿ ನಿರ್ಮಾಣ ಮಾಡಲಾಗಿದೆ. ಇದರಿಂದ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾದಾಗ ಕೈ ಪಂಪ್ ಒತ್ತಲು ತೊಂದರೆಯಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಎಇಇ ಹಾಗೂ ಮೇಲಧಿಕಾರಿಗಳು ಭೇಟಿ ನೀಡಿ ಕಾಮಗಾರಿಯನ್ನು ಪರೀಕ್ಷಿಸಬೇಕು. ಜತೆಗೆ ಬಾಕಿ ಇರುವ ರಸ್ತೆ ಕಾಮಗಾರಿ ಸೇರಿದಂತೆ ಇತರ ಕೆಲಸಗಳನ್ನು ಬೇಗ ಮುಗಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts