More

    ವಾರ್ಡ್​ಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ

    ಹಿರೇಕೆರೂರ: ಕರೊನಾ ಮಹಾಮಾರಿ ನಿಯಂತ್ರಿಸಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರ ಕಾರ್ವಿುಕರು ನಿತ್ಯ ಶ್ರಮಿಸುತ್ತಿದ್ದಾರೆ. ಇದರ ನಡುವೆಯೇ ಮುಂಗಾರು ಮಳೆ ಆರಂಭಗೊಂಡಿದ್ದು, ಇದರಿಂದ ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನುತಡೆಗಟ್ಟಲು ಪಪಂ ಸಿದ್ಧತೆ ಮಾಡಿಕೊಂಡಿದೆ.

    ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 20 ವಾರ್ಡ್​ಗಳಿದ್ದು, ಅಂದಾಜು 26 ಸಾವಿರ ಜನಸಂಖ್ಯೆಯಿದೆ. ಪುರಸಭೆಯಾಗುವ ಎಲ್ಲ ಅರ್ಹತೆಯಿದ್ದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಇನ್ನೂ ಕಾರ್ಯಗತವಾಗಿಲ್ಲ. ಪಟ್ಟಣದಲ್ಲಿ ಒಟ್ಟು 140 ಕಿ.ಮೀ ಉದ್ದ ಚರಂಡಿ ವಿಸ್ತೀರ್ಣ ಹೊಂದಿದ್ದು, ಇನ್ನು ಕೆಲವು ಕಾಲನಿಗಳಲ್ಲಿ ಚರಂಡಿ ನಿರ್ವಿುಸಬೇಕಿದೆ. ಈಗಾಗಲೇ ಒಳಚರಂಡಿ ಕಾಮಗಾರಿ ಮುಗಿದಿದೆ.

    ಪಟ್ಟಣದ ಎಲ್ಲ ವಾರ್ಡ್​ಗಳ ಚರಂಡಿ ನೀರು ಸುಣ್ಣದ ಕಾಲುವೆ ಮೂಲಕ ದುರ್ಗಾದೇವಿ ಕೆರೆ ಸೇರುತ್ತದೆ. ಬಹುಮುಖ್ಯವಾಗಿ ತಾಲೂಕಿನಲ್ಲಿ

    ಬೃಹದಾಕಾರವಾಗಿ ಅಂದರೆ 5 ನೂರು ಎಕರೆಗಿಂತ ಅಧಿಕ ವಿಸ್ತೀರ್ಣ ಹೊಂದಿದ ದುರ್ಗಾದೇವಿ ಕೆರೆ ತುಂಬಬೇಕಾದರೆ ಸುತ್ತಮುತ್ತಲಿನ 9 ಕೆರೆಗಳು ತುಂಬಿ ಕೋಡಿ ಹರಿದು ಪಟ್ಟಣ ಸುಣ್ಣದ ಕಾಲುವೆ ಮೂಲಕ ದುರ್ಗಾದೇವಿ ಕೆರೆಗೆ ನೀರು ಹೋಗಬೇಕಾಗಿದೆ. ಈ ಕಾಲುವೆ ಸಣ್ಣ ನೀರಾವರಿ ಇಲಾಖೆಗೆ ಅಧೀನದಲ್ಲಿದೆ. ಪ್ರತಿವರ್ಷ ಈ

    ಕಾಲುವೆಯಲ್ಲಿ ಬೆಳೆಯುವ ಗಿಡಗಂಟಿ, ಕಸ ಸಂಗ್ರಹಣೆಯಾಗುತ್ತದೆ. ಇದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗು ವುದಿಲ್ಲ. ಹೀಗಾಗಿ ಚನ್ನಳ್ಳಿ ರಸ್ತೆಯಲ್ಲಿ ನೀರು ಏಕಾಏಕಿ ರಸ್ತೆ ಮೂಲಕ ಅಕ್ಕಪಕ್ಕದ ಜಮೀನುಗಳಿಗೆ ಹಾಗೂ ಕಾಲುವೆ ಮೇಲೆ ಅನಧಿಕೃತವಾಗಿ ನಿರ್ವಿುಸಿಕೊಂಡ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗುತ್ತದೆ. ಹೀಗಾಗಿ ಪಟ್ಟಣ ಪಂಚಾಯಿತಿ ಜೆಸಿಬಿ ಯಂತ್ರದಿಂದ ಇಲ್ಲಿ ಬೆಳೆದು ನಿಂತ ಗಿಡಗಂಟಿ, ಕಸ ತೆಗೆಸುತ್ತಾ ಬಂದಿದೆ.

    ಪಟ್ಟಣದ ವಿವೇಕಾನಂದ ನಗರ, ಬಸವೇಶ್ವರ ನಗರ, ಜನತಾ ಪ್ಲಾಟ್, ಹೌಸಿಂಗ್ ಬೋರ್ಡ್, ಚೌಡೇಶ್ವರಿ ನಗರ ಸೇರಿದಂತೆ ಕೆಲವು ಕಾಲನಿಗಳಲ್ಲಿ ಗಟಾರ ನಿರ್ವಿುಸಿಲ್ಲ. ಇದರಿಂದ ನೀರು ಮನೆ ಗಳ ಪಕ್ಕದಲ್ಲೇ ನಿಂತು ಸಾಂಕ್ರಾಮಿಕ ರೋಗಗಳು ಹರಡುವ ಆತಂಕವಿದೆ. ಈ ಬಗ್ಗೆ ವಾರ್ಡ್ ಸದಸ್ಯ ಹಾಗೂ ಪಪಂ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

    ನಿತ್ಯ ಪೌರ ಕಾರ್ವಿುಕರು ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿದ್ದು, ಕಾಲಕಾಲಕ್ಕೆ ಚರಂಡಿ ಅಕ್ಕಪಕ್ಕದಲ್ಲಿ ಬೆಳೆದು ನಿಂತ ಗಿಡಗಂಟಿಗಳನ್ನು ತೆರವುಗೊಳಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗ ಹಬ್ಬುವುದನ್ನು ತಡೆಗಟ್ಟಲು ಬ್ಲೀಚಿಂಗ್ ಪೌಡರ್ ಸಿಂಪಡಣೆ, ಫಾಗಿಂಗ್ ಮಾಡುತ್ತಿದ್ದಾರೆ. ಆದರೆ, ಬಣಕಾರ ಪೆಟ್ರೋಲ್ ಬಂಕ್ ಮುಖ್ಯ ರಸ್ತೆಯಿಂದ ಸರ್ವಜ್ಞ ಸರ್ಕಲ್, ಬಸ್ ನಿಲ್ದಾಣ, ಚೌಡಿ ವೃತ್ತ, ಜಿ.ಬಿ. ಶಂಕರರಾವ್ ವೃತ್ತದವರೆಗಿನ ಅಕ್ಕಪಕ್ಕದ ಮುಖ್ಯ ಚರಂಡಿಯನ್ನು ಸರಿಯಾದ ವೇಳೆಗೆ ಸ್ವಚ್ಛಗೊಳಿಸದೆ ಇರುವುದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಈ ಚರಂಡಿಗಳಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತದೆ. ಇದರಿಂದ ಸಾಂಕ್ರಾಮಿಕ ರೋಗಗಳು ಭೀತಿ ಎದುರಾಗುತ್ತದೆ. ಇದನ್ನು ಹೊರತುಪಡಿಸಿ ಎಲ್ಲ ಕಾಲನಿಗಳಲ್ಲಿ ಚರಂಡಿ ಸ್ವಚ್ಛತಾ ಕಾರ್ಯ ನಡೆದಿದೆ.

    ಅತಿವೃಷ್ಟಿ ಎದುರಿಸಲು ಈಗಾಗಲೇ ತಹಸೀಲ್ದಾರ್ ಉಮಾ ಕೆ.ಎ. ನೇತೃತ್ವದಲ್ಲಿ ಎರಡು ಮೂರು ಭಾರಿ ಸಭೆ ನಡೆಸಲಾಗಿದೆ. 2 ತಂಡ ರಚಿಸಲಾಗಿದೆ. ಪಟ್ಟಣದ ಬಿ.ಎಚ್. ಬನ್ನಿಕೋಡ ಬಡಾವಣೆಯ ಅಂಬೇಡ್ಕರ್ ಸಭಾಭವನ ಹಾಗೂ ಸರ್ವಜ್ಞ ಕಲಾಭವನದಲ್ಲಿ ಎರಡು ಕಾಳಜಿ ಕೇಂದ್ರಗಳ ವ್ಯವಸ್ಥೆ ಮಾಡಲಾಗುತ್ತಿದೆ.

    ಅತಿವೃಷ್ಟಿಯಾದರೆ ಅದನ್ನು ಎದುರಿಸಲು ಎಲ್ಲ ಅಗತ್ಯ ಮುಂಜಾಗ್ರತೆ ವಹಿಸಲಾಗುತ್ತಿದೆ. 24ಗಿ7 ಸಹಾಯವಾಣಿ ಆರಂಭಿಸಲಾಗಿದ್ದು, ಸಾರ್ವಜನಿಕರು ಅತಿವೃಷ್ಟಿಯಿಂದ ಏನಾದರೂ ತೊಂದರೆ, ಸಮಸ್ಯೆ ಎದುರಾದರೆ ಕೂಡಲೆ ದೂರವಾಣಿ ಸಂಖ್ಯೆ 08376-282382 ಸಂರ್ಪಸ ಬಹುದಾಗಿದೆ. ತಾಲೂಕು ಆಡಳಿತ, ನಮ್ಮ ಇಲಾಖೆ ಅಧಿಕಾರಿಗಳು ಪೊಲೀಸ್, ಅಗ್ನಿಶಾಮಕ ದಳದವರಿಗೆ ಸನ್ನದ್ಧವಾಗಿರಲು ಸೂಚಿಸಲಾಗಿದೆ. ಕೆಲವು ತಗ್ಗು ಪ್ರದೇಶಗಳಲ್ಲಿ ಸರ್ಕಾರಿ ಸ್ಥಳದಲ್ಲಿ ಅಧಿಕೃತವಾಗಿ ಮನೆ ನಿರ್ವಿುಸಿಕೊಂಡಿದ್ದು, ಅಲ್ಲಿಗೆ ಪ್ರತಿವರ್ಷ ನೀರು ನುಗ್ಗುತ್ತದೆ. ಇದನ್ನು ಅರಿತು ನಿವಾಸಿಗಳು ಮನೆಗಳನ್ನು ತೆರವುಗೊಳಿಸಬೇಕು.

    | ಸಂತೋಷಕುಮಾರ ಚಂದ್ರಿಕೇರ ಪಪಂ ಮುಖ್ಯಾಧಿಕಾರಿ

    ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಉತ್ತಮವಾಗಿ ಮುಂಗಾರು ಮಳೆಯಾಗುತ್ತಿದೆ. ಕರೊನಾ ತಡೆಗಟ್ಟಲು ಶ್ರಮ ವಹಿಸಲಾಗುತ್ತಿದೆ. ಇನ್ನು ಅತಿವೃಷ್ಟಿಯಾಗಿ ಹಾನಿ, ಸಮಸ್ಯೆ ಎದುರಾದರೆ ಕೂಡಲೆ ಸ್ಥಳಕ್ಕೆ ತೆರಳಿ ಅದಕ್ಕೆ ಪರಿಹಾರ ಹಾಗೂ ಸೂಕ್ತ ರಕ್ಷಣಾ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಟ್ಟಣದಲ್ಲಿ ಅತಿವೃಷ್ಟಿಯಿಂದ ಹಾನಿ ಸಂಭವಿಸುವುದು ವಿರಳವಾಗಿದೆ.

    | ಗುರುಶಾಂತ ಯತ್ತಿನಹಳ್ಳಿ ಪಪಂ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts