More

    ವಾರಸುದಾರರಿಗೆ ಸ್ವತ್ತು ವಾಪಸಾತಿ -ಪತ್ತೆಯಾಗಿದ್ದ 85 ಕಳವು ಪ್ರಕರಣ

    ದಾವಣಗೆರೆ: ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಈ ವರ್ಷದಲ್ಲಿ ಪತ್ತೆಯಾದ 85 ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಆಭರಣ, ನಗದು, ವಾಹನ ಹಾಗೂ ಸ್ವತ್ತುಗಳನ್ನು ವಾರಸುದಾರರಿಗೆ ಶನಿವಾರ ಹಿಂತಿರುಗಿಸಲಾಯಿತು.
    ವಶಪಡಿಸಿಕೊಂಡಿದ್ದ 1008 ಗ್ರಾಂ. ಚಿನ್ನ, 598 ಬೆಳ್ಳಿ ಆಭರಣ, 23.27 ಲಕ್ಷ ನಗದು, 73 ಬೈಕ್, 2 ಕಾರು, 1 ಆಟೊ, 8 ಮೊಬೈಲ್ ಹಾಗೂ ಒಂದು ಕುರಿಯನ್ನು ಡಿಎಆರ್ ಕವಾಯತು ಮೈದಾನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ ಬಸರಗಿ ವಿತರಣೆ ಮಾಡಿದರು.
    ಕೆಟಿಜೆ ನಗರ, ಬಸವ ನಗರ, ವಿದ್ಯಾನಗರ, ಆಜಾದ್ ನಗರ, ಗಾಂಧಿನಗರ, ಆರ್‌ಎಂಸಿ ಹಾಗೂ ಬಡಾವಣೆ ಠಾಣೆಗಳ ವ್ಯಾಪ್ತಿಗಳಲ್ಲಿ ಈ ಪ್ರಕರಣಗಳು ವರದಿಯಾಗಿದ್ದವು. ಕಳವಾದ ವಸ್ತು ಹಿಂತಿರುಗಿಸಿದ ಪೊಲೀಸರಿಗೆ ಸಾರ್ವಜನಿಕರು ಧನ್ಯವಾದ ಹೇಳಿದರು.
    ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಡಿಸಿಆರ್‌ಬಿ ಘಟಕದ ಡಿಎಸ್ಪಿ ಬಿ.ಎಸ್.ಬಸವರಾಜ್, ಪ್ರೊಬೆಷನರಿ ಡಿಎಸ್ಪಿ ಯಶವಂತ್, ಸಿಪಿಐ ಸಂಚಾರ ವೃತ್ತದ ಆರ್.ಪಿ. ಅನಿಲ್, ಬಡಾವಣೆ ಠಾಣೆ ಪಿಐ ಧನಂಜಯ, ಕೆಟಿಜೆ ನಗರ ಠಾಣೆಯ ಪಿಐ ಯು.ಜೆ. ಶಶಿಧರ್, ಆಜಾದ್‌ನಗರ ಠಾಣೆಯ ಇಮ್ರಾನ್‌ಬೇಗ್, ಬಸವನಗರ ಠಾಣೆಯ ಪಿಐ ಗುರುಬಸವರಾಜ್, ಪಿಎಸ್‌ಐಗಳಾದ ಅಂಜಿನಪ್ಪ, ಅಖ್ತರ್ ಮುಲ್ಲಾ, ಜಿ.ಎಂ. ರೇಣುಕಾ, ಪುಷ್ಪಲತಾ, ಪ್ರಮೀಳಮ್ಮ, ನಿಂಗಮ್ಮ, ತಮೀಮ್ ಉನ್ನೀಸಾ ಹಾಗೂ ಸಿಬ್ಬಂದಿ ಇದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts