More

    ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಬಾಲಕಾರ್ಮಿಕರ ರಕ್ಷಣೆ

    ಕೋಲಾರ :  ನಗರದ ವಿವಿಧ ಅಂಗಡಿ, ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿರುವ ಅಧಿಕಾರಿಗಳ ತಂಡ ಸಂಬಂಧಿಸಿದ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದೆ.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರ್ಮಿಕ ಇಲಾಖೆ ಬಾಲಕಾರ್ಮಿಕ ಯೋಜನಾ ಸೊಸೈಟಿ, ಬಚ್ಪನ್ ಬಚಾವೋ ಆಂದೋಲನ, ಮಕ್ಕಳ ಸಹಾಯವಾಣಿ, ಪೊಲೀಸ್ ಇಲಾಖೆ ಹಾಗೂ ಜಾಗೃತಿ ಸೇವಾ ಸಂಸ್ಥೆ ಜಂಟಿ ಸಹಯೋಗದಲ್ಲಿ ಬುಧವಾರ ದಾಳಿ ನಡೆಸಲಾಯಿತು.

    ನಗರದ ಕ್ಲಾಕ್‌ಟವರ್ ಸಮೀಪದ ವರ್ಕ್‌ಶಾಪ್‌ಗಳಲ್ಲಿ ಹಾಗೂ ಬಂಬೂಬಜಾರ್‌ನ ಟಿಂಬರ್ ಡಿಪೋಗಳಲ್ಲಿ ಬಾಲಕಾರ್ಮಿಕರಿಂದ ದುಡಿಸಿಕೊಳ್ಳುತ್ತಿದ್ದುದಲ್ಲದೆ ಅವರ ಕಲಿಕೆಗೆ ಅಡ್ಡಿಯಾಗಿದ್ದ ಉದ್ಯಮಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಯಿತು.

    ಕರೊನಾ ಹಿನ್ನೆಲೆಯಲ್ಲಿ ಶಾಲೆ ಮುಚ್ಚಿರುವುದರಿಂದ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಾರ್ಮಿಕ ಅಧಿಕಾರಿ ಶ್ರೀಕಾಂತ್ ಎಚ್ಚರಿಸಿದರು.

    ಕಾರ‌್ಯಾಚರಣೆಯಲ್ಲಿ ಬಚ್ಪನ್ ಬಚಾವೋ ಆಂದೋಲನದ ಸಂಚಾಲಕ ಬಿನುವರ್ಗೀಸ್, ಯೋಜನಾ ನಿರ್ದೇಶಕ ಎಂ. ಸಿ. ಲಕ್ಷ್ಮೀನಾರಾಯಣ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವಕೀಲ ಕೆ.ಆರ್.ಧನರಾಜ್, ಕಾರ್ಮಿಕ ನಿರೀಕ್ಷಕರಾದ ಆಶಾರಾಣಿ, ರಾಜೇಶ್ವರಿ, ಮಂಜುನಾಥ್ ಪ್ರಸಾದ್, ರೇಣುಕಾಪ್ರಸನ್ನ, ಮಂಜುಶ್ರೀ, ರೂಪಾಶ್ರೀ, ಮಕ್ಕಳ ಸಹಾಯವಾಣಿ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts