More

    ವಾಣಿಜ್ಯ ಬ್ಯಾಂಕ್​ಗಳಿಂದ ರೈತರ ನಿರ್ಲಕ್ಷ್ಯ

    ಹೊಸನಗರ: ಜಿಲ್ಲೆಯಲ್ಲಿ 282 ವಾಣಿಜ್ಯ ಬ್ಯಾಂಕ್​ಗಳಿಂದ ರೈತರಿಗೆ ನೀಡಿರುವ ಸಾಲದಷ್ಟು ಮೊತ್ತವನ್ನು ಕೇವಲ 28 ಶಾಖೆ ಹೊಂದಿರುವ ಸಹಕಾರ ಬ್ಯಾಂಕ್ ಕೊಟ್ಟಿವೆ. ಇದರಿಂದ ವಾಣಿಜ್ಯ ಬ್ಯಾಂಕ್​ಗಳು ರೈತರನ್ನು ನಿರ್ಲಕ್ಷಿಸುತ್ತಿರುವುದು ಸ್ಪಷ್ಟ. ಆದರೂ ಟೀಕಾಕಾರರು ಸಹಕಾರ ವ್ಯವಸ್ಥೆಯತ್ತ ಬೆರಳು ತೋರುತ್ತಿರುವುದು ವಿಪರ್ಯಾಸ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.

    ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಮತ್ತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ಗಳಿಂದ ಮಂಗಳವಾರ ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಹೊಸನಗರ ತಾಲೂಕಿನ ಸಹಕಾರ ಸಂಘಗಳಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ನಿರ್ದೇಶಕರಿಗೆ ಏರ್ಪಡಿಸಿದ್ದ ಒಂದು ದಿನದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಸಹಕಾರ ಬ್ಯಾಂಕ್​ಗಳು ಶೇ.83ರಷ್ಟು ರೈತರನ್ನು ತಲುಪಿರುವುದು ಹೆಮ್ಮೆಯ ವಿಷಯ. ಇಂದಿಗೂ ರೈತರಿಗೆ ಮೋಸವಾಗುತ್ತಿದೆ. ಇದನ್ನು ಮನಗಂಡು ರೈತರು ಸಾಲಕ್ಕಾಗಿ ಬೇರೆಡೆ ಕೈ ಚಾಚದಂತೆ ಮುಂದಿನ ಬಾರಿ ತಾಲೂಕಿನಲ್ಲಿ ಹೊಸ ಪ್ರಯೋಗ ಕೈಗೊಳ್ಳಲಾಗುತ್ತಿದೆ. ಆರಂಭದಲ್ಲಿ 2 ಸಹಕಾರ ಸಂಘಗಳಲ್ಲಿ ಇದನ್ನು ಅಳವಡಿಸಿ ರೈತರ ಅಗತ್ಯತೆಯ ಹಣಕಾಸಿನ ಪೂರ್ಣ ಪ್ರಮಾಣವನ್ನು ಸಹಕಾರ ವ್ಯವಸ್ಥೆಯಲ್ಲಿಯೇ ನೀಡಲಾಗುವುದು. ಈ ಮೂಲಕ ರೈತರ ಆರ್ಥಿಕ ಸ್ಥಿತಿ ಸದೃಢಗೊಳಿಸುವ ಚಿಂತನೆ ಇದೆ ಎಂದು ತಿಳಿಸಿದರು.

    ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಎಚ್.ಯು.ಸುರೇಶ್ ಮಾತನಾಡಿ, ಸಹಕಾರ ವ್ಯವಸ್ಥೆ ರಾಜಕೀಯ ಹೊರತಾಗಿದ್ದರೂ ಸರ್ಕಾರಗಳ ಹಸ್ತಕ್ಷೇಪ ಮಾತ್ರ ಇಂದಿಗೂ ನಿಂತಿಲ್ಲ. ಸರ್ಕಾರ ನಡೆಸುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

    ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಂ.ಪರಮೇಶ್ವರ್, ಜಿ.ಎನ್.ಸá-ಧೀರ್, ಶಿಮುಲ್ ಹಾಲು ಒಕ್ಕೂಟದ ನಿರ್ದೇಶಕ ಎಚ್.ಎನ್.ವಿದ್ಯಾಧರ ಗುರುಶಕ್ತಿ, ಆಪ್​ಕೋಸ್ ಉಪಾಧ್ಯಕ್ಷ ಎಚ್.ಬಿ.ಕಲ್ಯಾಣಪ್ಪ ಗೌಡ, ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಸಿ.ನಂಜುಂಡಪ್ಪ, ಕಳೂರು ಸಹಕಾರ ಸಂಘದ ಅಧ್ಯಕ್ಷ ವಿನಯಕುಮಾರ್, ಲೋಕೇಶ್ ಇತರರಿದ್ದರು.

    ನೂತನ ನಿರ್ದೇಶಕರಿಗೆ ಹಕ್ಕು, ಜವಾಬ್ದಾರಿ ಮತ್ತು ಕರ್ತವ್ಯಗಳ ಕುರಿತು ಲೆಕ್ಕಪರಿಶೋಧನಾ ಸಹಾಯಕ ನಿರ್ದೇಶಕ ವಿ.ಸಿ.ಶಿವಪ್ಪ ತರಬೇತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts