More

    ವಾಕ್ಸಿನ್ ಪಡೆಯಲು ನಕಲಿ ಟೋಕನ್ ಸೃಷ್ಟಿ


    ಚಿಕ್ಕಮಗಳೂರು: ಟೋಕನ್​ನನ್ನು ಜೆರಾಕ್ಸ್ ಮಾಡಿಸಿ ಲಸಿಕೆ ಪಡೆಯಲು ಮುಂದಾದವರಿಗೆ ಶಾಕ್ ನೀಡಿದ ಆರೋಗ್ಯ ಸಿಬ್ಬಂದಿ ನಕಲಿ ಟೋಕನ್ ತಂದವರಿಗೆ ಲಸಿಕೆ ನೀಡದೆ ವಾಪಸ್ ಕಳಿಸಿದ್ದಾರೆ.
    ವಾರಾಂತ್ಯದ ದಿನಗಳಲ್ಲಿ ಲಸಿಕೆ ಪಡೆಯಲು ಜನ ಪರದಾಡುತ್ತಿರುವ ಮಾಹಿತಿ ಅರಿತ ಕೆಲವರು ಟೋಕನ್​ಗಳನ್ನು ಜೆರಾಕ್ಸ್ ಮಾಡಿಸಿ ಲಸಿಕೆ ಮುಂದಾದರು. ಬೆಳಗ್ಗಿನಿಂದ ನಾಲ್ಕಾರು ಗಂಟೆ ಬಿಸಿಲಿನಲ್ಲಿ ನಿಂತು ಅವರ ಸರತಿ ಬರುತ್ತಿದ್ದಂತೆ ಕೆಲವರು ನಕಲಿ ಟೋಕನ್ ನೀಡಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಮೂರ್ನಾಲ್ಕು ಟೋಕನ್​ಗಳ ನಂತರ ಅನುಮಾನಗೊಂಡ ನರ್ಸ್​ಗಳು ಅದನ್ನು ಪರಿಶಿಲಿಸಿದಾಗ ನಕಲಿ ಟೋಕನ್​ಗಳನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಹೀಗೆ ನಕಲಿ ಟೋಕನ್ ಪಡೆದುಕೊಂಡ ಬಂದ 25ಕ್ಕೂ ಹೆಚ್ಚು ಜನರನ್ನು ವಾಪಸ್ಸು ಕಳುಹಿಸಿ ನಾಳೆ ಅಧಿಕೃತ ಟೋಕನ್ ಪಡೆದು ಲಸಿಕೆ ಪಡೆಯವಂತೆ ತಿಳಿಹೇಳಿ ಕಳುಹಿಸಿದ್ದಾರೆ.ಟೋಕನ್​ನನ್ನು ಜೆರಾಕ್ಸ್ ಮಾಡಿಸಿ ಲಸಿಕೆ ಪಡೆಯುತ್ತಿರುವುದು ತಿಳಿದ ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿ ಬಿಳಿ ಬಣ್ಣದ ಟೋಕನ್ ಬದಲಾಗಿ ನಿತ್ಯ ಟೋಕನ್​ಗಳ ಬಣ್ಣ ಬದಲಿಸಲು ಮುಂದಾಗಿದ್ದಾರೆ. ಪ್ರತಿ ದಿನ ಬೇರೆ ಬೇರೆ ಬಣ್ಣದ ಟೋಕನ್​ಗಳನ್ನು ನೀಡಿ ಅ ದಿನದಂದು ವಿತರಿಸಿದ ಬಣ್ಣದ ಟೋಕನ್​ಗಳನ್ನು ತಂದರೆ ಮಾತ್ರ ಲಸಿಕೆ ಹಾಕಲು ನಿರ್ಧರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts