More

    ವಹಿವಾಟು ನಿರ್ಬಂಧ ವಿಸ್ತರಣೆ

    ಹುಬ್ಬಳ್ಳಿ: ಕರೊನಾ ಸೋಂಕು ಹರಡುವ ಭೀತಿಯಲ್ಲಿ ನಗರದಲ್ಲಿ ವ್ಯಾಪಾರ-ವಹಿವಾಟು ನಿರ್ಬಂಧ ಇನ್ನಷ್ಟು ವಿಸ್ತಾರಗೊಂಡಿದೆ. ಮಾಲ್, ಚಲನಚಿತ್ರ ಮಂದಿರ, ಸಂತೆ, ಜಾತ್ರೆಗೆ ಸೀಮಿತವಾಗಿ ನಿರ್ಬಂಧ ಗುರುವಾರ ಬಹು ಮಹಡಿ ವಾಣಿಜ್ಯ ಸಂಕೀರ್ಣಗಳಿಗೂ ವ್ಯಾಪಿಸಿತು.

    ಅವಳಿ ನಗರದಲ್ಲಿ ಮಾ. 14ರಿಂದ ಯು-ಮಾಲ್, ಅರ್ಬನ್ ಓಯಸಿಸ್ ಮಾಲ್, ಬಿಗ್ ಬಜಾರ್, ಇತ್ಯಾದಿ ಬಂದ್ ಆಗಿದ್ದವು. ಇಂದು ಹುಬ್ಬಳ್ಳಿ ಕೋಯಿನ್ ರಸ್ತೆಯ ನ್ಯಾಷನಲ್ ಮಾರ್ಕೆಟ್, ಸ್ಟೇಷನ್ ರಸ್ತೆಯ ರಾಧಾಕೃಷ್ಣ ಸ್ಕೆ್ವೕರ್ (ಹರ್ಷ ಕಾಂಪ್ಲೆಕ್ಸ್), ಕೊಪ್ಪಿಕರ ರಸ್ತೆಯ ಯುರೇಕಾ ಸೆಂಟರ್, ಚನ್ನಮ್ಮ ವೃತ್ತದ ಬಳಿಯ ಯುರೇಕಾ ಟಾವರ್ಸ್​ನ್ನು ಪಾಲಿಕೆ ಅಧಿಕಾರಿಗಳು ಬಂದ್ ಮಾಡಿಸಿದರು. ಸಂಜೆ ವೇಳೆಗೆ ಸಿಬಿಟಿಯ ಷಾಹ ಬಜಾರ್, ಕೊಪ್ಪಿಕರ ರಸ್ತೆಯ ಸೆಟಲೈಟ್ ಬಿಲ್ಡಿಂಗ್​ನಲ್ಲಿಯ ಅಂಗಡಿ-ಮಳಿಗೆಗಳು ಬಂದ್ ಆದವು. ವಾಣಿಜ್ಯ ಸಂಕೀರ್ಣವನ್ನು ಮಾ. 31ರವರೆಗೆ ಬಂದ್ ಇಡುವಂತೆ ಪಾಲಿಕೆ ವಲಯ ಕಚೇರಿ ಅಧಿಕಾರಿಗಳು ನೋಟಿಸ್ ಅಂಟಿಸಿದರು.

    ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ವಾಣಿಜ್ಯ ಸಂಕೀರ್ಣದ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ನ್ಯಾಷನಲ್ ಮಾರ್ಕೆಟ್ ಹಾಗೂ ರಾಧಾಕೃಷ್ಣ ಸ್ಕೆ್ವೕರ್ ವಾಣಿಜ್ಯ ಮಳಿಗೆ ಬಂದ್ ಮಾಡಿಸುವ ವೇಳೆ ಅಂಗಡಿಕಾರರು ತಕರಾರು ತೆಗೆದಿದ್ದರು. ವಾರ-ಹದಿನೈದು ದಿನ ವಹಿವಾಟು ನಡೆಯದಿದ್ದರೆ ಬ್ಯಾಂಕ್​ಗಳಿಂದ ಪಡೆದ ಸಾಲದ ಕಂತು ತುಂಬುವುದು ಹೇಗೆ? ಕಂತು ಮನ್ನಾ ಮಾಡುತ್ತಾರೆಯೇ ಎಂದು ಅಧಿಕಾರಿಗಳೊಂದಿಗೆ ಪ್ರಶ್ನಿಸಿದ್ದರು. ಈ ವೇಳೆ ಕೆಲ ಕಾಲ ಬಿಗುವಿನ ವಾತಾವರಣ ನಿರ್ವಣಗೊಂಡಿತ್ತು. ಅಲ್ಲಲ್ಲಿ ಅಂಗಡಿಕಾರರು ಗುಂಪು ಸೇರಿದ್ದರು. ಪೊಲೀಸರು ಅಂಗಡಿಕಾರರನ್ನು ಸ್ಥಳದಿಂದ ಹೊರ ಸಾಗಿಸಿದರು.

    ‘ಸಾಕಷ್ಟು ನಿರ್ಬಂಧದ ಬಳಿಕವೂ ಅಲ್ಲಲ್ಲಿ ಕರೊನಾ ಶಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ನಿರ್ದಿಷ್ಟ ಸ್ಥಳದಲ್ಲಿ 50-100 ಜನ ಸೇರುವುದನ್ನು ನಿರ್ಬಂಧಿಸಲು ಬಹು ಮಹಡಿ ವಾಣಿಜ್ಯ ಸಂಕೀರ್ಣಗಳನ್ನು ಬಂದ್ ಮಾಡಿಸುತ್ತಿದ್ದೇವೆ. ನಿರ್ದಿಷ್ಟ ವಾಣಿಜ್ಯ ಮಳಿಗೆ ಬಂದ್ ಮಾಡುವಂತೆ ಸಾರ್ವಜನಿಕರಿಂದ ದೂರುಗಳು ಸಹ ಬರುತ್ತಿವೆ’ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.

    ಹೊಸದಾಗಿ 835 ಶಾಲೇಲಿ ಆಂಗ್ಲ ಮಾಧ್ಯಮ; ಶಿಕ್ಷಣ ಸಚಿವ ಸುರೇಶ್​ಕುಮಾರ್ ಮಾಹಿತಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts