More

    ವಸತಿ ನಿಲಯಕ್ಕೆ ಮೂಲ ಸೌಕರ್ಯ ಒದಗಿಸಿ- ತಹಸೀಲ್ದಾರ್‌ಗೆ ವಿದ್ಯಾರ್ಥಿನಿಯರ ಮನವಿ

    ಸಿಂಧನೂರು: ನಗರದ ವಾಲ್ಮೀಕಿ ವಸತಿ ನಿಲಯಕ್ಕೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅರುಣ್ ದೇಸಾಯಿಗೆ ಸೋಮವಾರ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ವಸತಿ ನಿಲಯಕ್ಕೆ ತಡೆಗೋಡೆ ನಿರ್ಮಿಸಿ; ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಸೂಚನೆ

    ಸಿಂಧನೂರಿನಿಂದ 3 ಕಿಮೀ ದೂರ ಇರುವ ವಸತಿ ನಿಲಯದಲ್ಲಿ ಮೂಲ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ. ಈ ಬಗ್ಗೆ ಚುನಾಯಿತ ಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ. ಅಧಿಕಾರಿಗಳು ಮೂರು ತಿಂಗಳೊಮ್ಮೆ ಭೇಟಿ ನೀಡುತ್ತಿದ್ದು, ಅವರ ಬಳಿ ಸಮಸ್ಯೆಗಳನ್ನು ಹೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಆಪಾದಿಸಿದರು.

    ವಸತಿ ನಿಲಯಕ್ಕೆ ತೆರಳುವ ರಸ್ತೆ ಸರಿಯಿಲ್ಲದೆ ಸಂಚಾರಕ್ಕೆ ತೊಂದರೆಯಾಗಿದೆ. ನಿಲಯದ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೆ ಪರಿಹಾರ ಕ್ರಮ ಕೈಗೊಳ್ಳುತ್ತಿಲ್ಲ. ಊಟ, ಆರೋಗ್ಯ ಸೇವೆ ಇಲ್ಲದೆ ದುಸ್ಥಿತಿ ಎದುರಾಗಿದೆ. ಶೀಘ್ರವೇ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿದರು.

    ವಿದ್ಯಾರ್ಥಿನಿಯರಾದ ಕವಿತಾ, ಚನ್ನಮ್ಮ, ಸುನಿತಾ, ದುರ್ಗ, ಉಷಾ, ವಿಜಯಲಕ್ಷ್ಮೀ, ಸವಿತಾ, ನಿರ್ಮಲಾ, ಶ್ರುತಿ, ಮಂಜುಳಾ, ಹುಸೇನಮ್ಮ, ಅಂಬಿಕಾ, ರಾಧಾ, ಚೌಡಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts