More

    ವಿಶ್ವಶಾಂತಿ ಸ್ಥಾಪನೆಗಾಗಿ ಯುದ್ಧ ನಿಲ್ಲಿಸಿ

    ಮೈಸೂರು : ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ನಡೆಯುತ್ತಿರುವ ಯುದ್ಧವನ್ನು ವಿಶ್ವ ಶಾಂತಿ ಸ್ಥಾಪನೆಗಾಗಿ ಕೂಡಲೇ ನಿಲ್ಲಿಸಬೇಕು. ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಎರಡೂ ದೇಶಗಳು ಮುಂದಾಗುವುದು ಸೂಕ್ತವೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಅಭಿಪ್ರಾಯಪಟ್ಟಿದ್ದಾರೆ.


    ಈ ಯುದ್ಧದಿಂದಾಗಿ ಎರಡೂ ಧರ್ಮಗಳು ಸಾರುವ ಶಾಂತಿ, ಅಹಿಂಸೆ, ಪ್ರೀತಿಗಳ ವಿರುದ್ಧವಾದ ಕೃತ್ಯವಾಗಿದೆ. ಯಹೂದಿಗಳು ಮತ್ತು ಮುಸ್ಲಿಮರು ಪ್ರೀತಿ, ಕರಣೆಯನ್ನು ಮರೆತು ಕ್ರೌರ್ಯ, ದ್ವೇಷದಿಂದ ಯುದ್ಧವನ್ನು ಮಾಡುತ್ತಾ ಸಾವಿರಾರು ಅಮಾಯಕರು ಬಲಿಯಾಗುತ್ತಿದ್ದಾರೆ. ಯಾವುದೇ ಧರ್ಮದಲ್ಲಿ ಭಯೋತ್ಪಾದನೆ ಮಾಡುವುದನ್ನು ಯಾರೂ ಒಪ್ಪುವಂತಿಲ್ಲ.


    ಯುದ್ಧದಿಂದ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಾಗಿದೆ. ಇಡೀ ಪ್ರಪಂಚಕ್ಕೆ ಪ್ರೀತಿ, ಕರುಣೆ, ಮೈತ್ರಿ ಮಾನವೀಯತೆಯನ್ನು ಸಾರಿದ ಭಗವಾನ್ ಬುದ್ಧ, ಜಗಜ್ಯೋತಿ ಬಸವಣ್ಣ, ಮಹಾತ್ಮಾಗಾಂಧಿ ಮುಂತಾದವರ ಆದರ್ಶಗಳನ್ನು ಎರಡೂ ದೇಶಗಳು ತಿಳಿದುಕೊಳ್ಳಬೇಕು.
    ಇಸ್ರೇಲ್‌ನಲ್ಲಿ ನಡೆಯುತ್ತಿರುವ ಕ್ರೂರವಾದ ಹಿಂಸೆಗಳನ್ನು ಕೈ ಬಿಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಾಂತಿ ನೆಲೆಸಲು ಪೂರಕ ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts