More

    ವರುಣಾರ್ಭಟಕ್ಕೆ ಕಲಬುರಗಿ ತತ್ತರ

    ಕಲಬುರಗಿ: ಜಿಲ್ಲೆಯಲ್ಲಿ ವರುಣದೇವ ಮತ್ತೆ ಅಬ್ಬರಿಸಿದ್ದಾನೆ. ಕಳೆದ ರಾತ್ರಿಯಿಂದ ಸತತ ಸುರಿದ ಮಳೆಯಿಂದಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಮನೆಗಳು ಕುಸಿದಿವೆ. ಲಕ್ಷಾಂತರ ಎಕರೆ ಪ್ರದೇಶದಲ್ಲಿ ನೀರು ನುಗ್ಗಿ ಬೆಳೆಗಳು ಸಂಪೂರ್ಣ ಹಾಳಾಗಿವೆ. ಅನೇಕ ಕಡೆ ರಸ್ತೆಗಳು ಕೊಚ್ಚಿ ಹೋಗಿವೆ. ಕೆರೆ, ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ನೀರಿನಲ್ಲಿ ಕೊಚ್ಚಿ ಹೋಗಿ ಮೀನುಗಾರನೊಬ್ಬ ಮೃತಪಟ್ಟಿದ್ದಾನೆ.
    ಮಳೆಯಿಂದಾಗಿ ಪ್ರಮುಖ ಸೇತುವೆಗಳ ಮೇಲೆ ನೀರು ಬಂದಿದ್ದರಿಂದ ಜಿಲ್ಲೆಯ ಬಹುತೇಕ ಕಡೆ ಸಂಚಾರ ಸ್ಥಗಿತಗೊಂಡಿದೆ. ಕಾಗಿಣಾ, ಭೀಮಾ, ಗಂಡೋರಿ, ಬೆಣ್ಣೆತೊರಾ ಸೇರಿ ಬಹುತೇಕ ಉಪ ನದಿಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ತುಂಬಿರುವ ಕೆರೆಗಳಿಂದ ಹೆಚ್ಚಿನ ನೀರು ಜಮೀನುಗಳಿಗೆ ನುಗ್ಗಿ ಲಕ್ಷಾಂತರ ಎಕರೆಯಲ್ಲಿದ್ದ ತೊಗರಿ, ಹೆಸರು, ಉದ್ದು, ಸಜ್ಜೆ, ಸೂರ್ಯಕಾಂತಿ, ಹತ್ತಿ ಬೆಳೆಗಳು ಕೊಚ್ಚಿ ಹೋಗಿವೆ. 30ರವರೆಗೆ ಮಳೆ ಆಗಲಿದೆ ಎಂಬ ವರದಿ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಯಲ್ಲೋ ಅಲಟರ್್ ಘೋಷಿಸಲಾಗಿದೆ. ಸದ್ಯದ ಮಟ್ಟಿಗೆ ಸೂರ್ಯನ ದರುಶನ ಅಪರೂಪವಾಗಿದೆ.
    ಕಲಬುರಗಿ ಸೂಪರ್ ಮಾರ್ಕೆಟ್ನಲ್ಲಿರುವ ಮಹಾನಗರ ಪಾಲಿಕೆ ಶಾಪಿಂಗ್ ಕಾಂಪ್ಲೆಕ್ಸ್ ಛಾವಣಿ ಕುಸಿದಿದೆ. ಸುದೈವವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರಶಾಂತ ನಗರ ಸೇರಿ ತಗ್ಗು ಪ್ರದೇಶಗಳಲ್ಲಿರುವ ನೂರಾರು ಮನೆಗಳಿಗೆ ನೀರು ಹೊಕ್ಕಿದ್ದರಿಂದ ಜನತೆ ಇಡೀ ರಾತ್ರಿ ನಿದ್ದೆಗೆಡುವಂತಾಗಿದೆ. ನಗರದ ಪ್ರಮುಖ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ಲಭ್ಯವಾದ ಮಾಹಿತಿ ಪ್ರಕಾರ 20ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತವಾಗಿವೆ. ಆದರೆ ಈ ಕುರಿತಂತೆ ಜಿಲ್ಲಾಡಳಿತ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
    ನಗರದ ಸೆರಗಿನಂಚಿನಲ್ಲಿರುವ ನಂದಿಕೂರ, ಉದನೂರ ಹಳ್ಳ ಭತರ್ಿಯಾಗಿ ಮನೆಗಳಿಗೆ ನೀರು ಹೊಕ್ಕಿದ್ದು ಸಂಚಾರ ಸ್ಥಗಿತಗೊಂಡಿದೆ. ಉದನೂರಿನ ಸಾವಿರಾರು ಜನ ನಿತ್ಯ ಕಲಬುರಗಿ ನಗರಕ್ಕೆ ಬರುತ್ತಾರೆ. ಸಧ್ಯಕ್ಕೆ ಇವರಿಗೆ ಹಳ್ಳದ ನೀರು ಅಡ್ಡಿಯಾಗಿದೆ. ಇತ್ತೀಚಿನ ಮಳೆಯಿಂದ ಚಿಂಚೋಳಿ-ಬೀದರ್ ಹೆದ್ದಾರಿ ಒಡೆದಿತ್ತು. ಇಲ್ಲಿ ತಾತ್ಕಾಲಿಕವಾಗಿ ನಿಮರ್ಿಸಿದ ರಸ್ತೆಯೂ ಈಗಿನ ಮಳೆಗೆ ಕೊಚ್ಚಿ ಹೋಗಿ ರಸ್ತೆ ಸಂಚಾರ ನಿಂತಿದೆ.

    ನೀರಲ್ಲಿ ಕೊಚ್ಚಿ ಹೋದ ಮೀನುಗಾರ
    ಅಬ್ಬರದ ಮಳೆ ಮಧ್ಯೆ ಮೀನು ಹಿಡಿಯಲು ಕಾಗಿಣಾ ನದಿಗಿಳಿದ ಮೀನುಗಾರನೊಬ್ಬ ಕೊಚ್ಚಿ ಹೋಗಿದ್ದಾನೆ. ಸೇಡಂ ತಾಲೂಕಿನ ಕುಕ್ಕುಂದಾ ಬಳಿ ಮೀನುಗಾರ ಸಂಜೀವಕುಮಾರ ಕಾಗಿಣೆಯಲ್ಲಿ ಕೊಚ್ಚಿ ಹೋದವ. ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಚರಣೆ ನಡೆಸಿದ್ದು, ಇದುವರೆಗೆ ಪತ್ತೆಯಾಗಿಲ್ಲ. ಕಾಗಿಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆಗಸ್ಟ್ ಕೊನೆಯವರೆಗೆ 44 ಸಾವಿರ ಹೆಕ್ಟೇರ್ ಬೆಳೆ ಹಾಳಾಗಿದೆ. ಮಳೆ ನಿಂತ ಬಳಿಕ ಈ ತಿಂಗಳ ಬೆಳೆ ಸಮೀಕ್ಷೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ. ಮುಂಗಾರು ಮುಗಿಯುತ್ತಲೇ ಹಿಂಗಾರು ಬಿತ್ತನೆ ಶುರುವಾಗಲಿದೆ. ಮಳೆ ಹೀಗೇ ಮುಂದುವರಿದರೆ ಹಿಂಗಾರು ಬಿತ್ತನೆಯೂ ವಿಳಂಬವಾಗಿ ತೊಂದರೆ ಎದುರಾಗಲಿದೆ. ಹವಾಮಾನ ಇಲಾಖೆ ವರದಿ ಪ್ರಕಾರ 30ರವರೆಗೂ ಮಳೆಯಾಗಲಿದೆ.
    | ಡಾ.ರಿತೇಂದ್ರನಾಥ ಸುಗೂರ
    ಜಂಟಿ ಕೃಷಿ ನಿದರ್ೇ ಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts