More

    ವನ್ಯಕುಲದ ಸಂರಕ್ಷಣೆಗೆ ಮುಂದಾಗಿ

    ಬೆಳಗಾವಿ: ಪ್ರತಿಯೊಬ್ಬರೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಸಿ ನೆಟ್ಟು, ಬೆಳೆಸುವ ಮೂಲಕ ವನ್ಯಕುಲದ ಸಂರಕ್ಷಣೆಗೆ ಮುಂದಾಗಬೇಕು ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸಲಹೆ ನೀಡಿದ್ದಾರೆ.

    ಇಲ್ಲಿನ ವಿಜಯನಗರದಲ್ಲಿ ಬಿಜೆಪಿ ಗ್ರಾಮೀಣ ಮಂಡಳದ ವತಿಯಿಂದ ಶ್ಯಾಮಾಪ್ರಸಾದ್ ಮುಖರ್ಜಿ ಪುಣ್ಯತಿಥಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಹತ್ತು ಸಾವಿರ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಸಿಗಳನ್ನು ನೆಡುವುದು ಸುಲಭ. ಆದರೆ, ಅವುಗಳನ್ನು ಉಳಿಸಿ-ಬೆಳೆಸುವುದು ಕಷ್ಟ. ಹೀಗಾಗಿ ಗಿಡ ನೆಟ್ಟ ಬಳಿಕ ಅವುಗಳನ್ನು ಸಂರಕ್ಷಣೆ ಮಾಡುವುದು ಅವಶ್ಯಕವಾಗಿದೆ ಎಂದರು.

    ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಕರೊನಾ 2ನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್ ಸಿಗದೆ ಸಮಸ್ಯೆ ಅನುಭವಿಸಲಾಗಿದೆ. ಬದುಕಿಗೆ ಪರಿಸರ ಸಂರಕ್ಷಣೆ ಎಷ್ಟು ಅವಶ್ಯಕ ಎಂಬುದು ಇಂದು ಮನವರಿಕೆಯಾಗಿದೆ. ಹಾಗಾಗಿ, ಪ್ರತಿಯೊಬ್ಬರೂ ಸಸಿ ನೆಡುವ ಸಂಕಲ್ಪ ಮಾಡಬೇಕು ಎಂದರು. ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಕೇವಲ ರಾಜಕೀಯ ಚಟುವಟಿಕೆಗಳಿಗೆ ಸೀಮಿತಗೊಳ್ಳದೆ ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದಾರೆ.

    ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಜನರ ಆರೋಗ್ಯ ಉಳಿಸಲು ಒಗ್ಗಟ್ಟಿನಿಂದ ಶ್ರಮಿಸಿದ್ದಾರೆ. ಇದೀಗ ಹತ್ತು ಸಾವಿರ ಸಸಿ ನೆಡುವ ಮೂಲಕ ಅರಣ್ಯ ಸಂಪತ್ತು ಉಳಿಸಿ, ಬೆಳೆಸಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಸಹ ಸಾಥ್ ನೀಡಬೇಕು ಎಂದರು. ಗ್ರಾಪಂ ಅಧ್ಯಕ್ಷ ನಾಗೇಶ ಎಂ., ಶಿವಾಜಿ ಸುಂಟಕರ್, ಮನೋಹರ ಕಡೋಲ್ಕರ್, ವಿಜಯ ಮಹೇಂದ್ರ, ದತ್ತು ಮಹಗಾಂವ್ಕರ್, ರಾಮಚಂದ್ರ ಮಣ್ಣೋಳಕರ್, ಭಾಗ್ಯಶ್ರೀ ಕೋಕಿತ್ಕರ್, ಪ್ರಿಯಾಂಕಾ ಅಜಾನೇಕರ್, ಪಂಕಜ ಘಾಡಿ, ಮುಕುಂದ ಗೋಖಲೆ ಇದ್ದರು.

    ಪ್ರಕೃತಿ ನಾಶವಾದರೆ ಮನುಷ್ಯ ಕುಲವೂ ನಾಶವಾಗಲಿದೆ. ಹೀಗಾಗಿ ಸಸಿಗಳನ್ನು ನೆಡುವುದು ಮಾತ್ರವಲ್ಲದೆ ರಕ್ಷಿಸಿ, ಬೆಳೆಸುವುದು ಎಲ್ಲರ ನಿತ್ಯದ ಚಟುವಟಿಕೆಯಾಗಬೇಕು.
    | ಮಂಗಲ ಅಂಗಡಿ ಸಂಸದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts